ಪ್ರೀತಿ ವಿಚಾರದಲ್ಲಿ ರಣವೀರ್ ಸಿಂಗ್ ಹೇಳಿದ್ದು ಸುಳ್ಳು? ಇಲ್ಲಿದೆ ವಿಡಿಯೋ
ಯಶ್ ರಾಜ್ ಫಿಲ್ಮ್ಸ್ ಕಚೇರಿಯಲ್ಲಿ ರಣವಿರ್ ಸಿಂಗ್ ಅವರು ಅನುಷ್ಕಾನ ಭೇಟಿ ಮಾಡಿದ್ದರು. ದೀಪಿಕಾರ ಮೊದಲ ಭೇಟಿಯನ್ನು ಹೇಗೆ ವಿವರಿಸಿದ್ದರೋ, ಇದೇ ಮಾದರಿಯಲ್ಲಿ ಅವರು ಅನುಷ್ಕಾ ಭೇಟಿಯನ್ನು ಬಣ್ಣಿಸಿದ್ದರು.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ‘ಕಾಫಿ ವಿತ್ ಕರಣ್ ಸೀಸನ್ 8’ರ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಇವರ ಮಾತುಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಶೋನಲ್ಲಿ ದೀಪಿಕಾ ಮೇಲೆ ರಣವೀರ್ ಕೋಪ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದೆ. ಇದರ ಜೊತೆ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. 2012ರಲ್ಲಿ ಮೊದಲ ಬಾರಿ ದೀಪಿಕಾನ ನೋಡಿದಾಗ ಹೇಗೆ ಅನಿಸಿತು ಎಂಬುದನ್ನು ರಣವೀರ್ ಸಿಂಗ್ ವಿವರಿಸಿದ್ದರು. ಇದೇ ಸ್ಟೋರಿಯನ್ನು ಅವರು ಅನುಷ್ಕಾ ಶರ್ಮಾ ಭೇಟಿ ಬಗ್ಗೆ ವಿವರಿಸುವಾಗಲೂ ಹೇಳಿದ್ದರು.
ಕರಣ್ ಜೋಹರ್ ಶೋನಲ್ಲಿ ರಣವೀರ್ ಸಿಂಗ್ ಅವರು ದೀಪಿಕಾ ಬಗ್ಗೆ ಮಾತನಾಡಿದ್ದರು. ‘ನಾನು ಟೇಬಲ್ ಮೇಲೆ ಕುಳಿತಿದ್ದೆ. ಅಲ್ಲೇ ಸಮೀಪ ಬಾಗಿಲು ಇತ್ತು. ಸಮುದ್ರ ಸಮೀಪ ಇದ್ದಿದ್ದರಿಂದ ಗಾಳಿ ಬರುತ್ತಿತ್ತು. ಅವರು ಬಾಗಿಲು ತೆರೆದು ಬರುವಾಗ ಕೂದಲು ಹಾರುತ್ತಿತ್ತು’ ಎಂದು ರಣವೀರ್ ಸಿಂಗ್ ಅವರು ಕಾಫಿ ವಿತ್ ಕರಣ್ನಲ್ಲಿ ಹೇಳಿಕೊಂಡಿದ್ದರು. ಅನುಷ್ಕಾ ಶರ್ಮಾ ಬಗ್ಗೆಯೂ ಅವರು ಇದೇ ರೀತಿ ಹೇಳಿದ್ದರು. ಅದೂ ಕಾಫಿ ವಿತ್ ಕರಣ್ ಶೋನಲ್ಲಿ.
ಯಶ್ ರಾಜ್ ಫಿಲ್ಮ್ಸ್ ಕಚೇರಿಯಲ್ಲಿ ರಣವಿರ್ ಸಿಂಗ್ ಅವರು ಅನುಷ್ಕಾನ ಭೇಟಿ ಮಾಡಿದ್ದರು. ದೀಪಿಕಾರ ಮೊದಲ ಭೇಟಿಯನ್ನು ಹೇಗೆ ವಿವರಿಸಿದ್ದರೋ, ಇದೇ ಮಾದರಿಯಲ್ಲಿ ಅವರು ಅನುಷ್ಕಾ ಭೇಟಿಯನ್ನು ಬಣ್ಣಿಸಿದ್ದರು. ಈ ಕಾರಣದಿಂದ ಅನೇಕರು ರಣವೀರ್ ಸಿಂಗ್ ಹೇಳಿಕೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರೀತಿ ವಿಚಾರದಲ್ಲಿ ಎದುರು ಹೇಳುವುದೇ ಒಂದು ಒಳಗೆ ಇರುವುದೇ ಇನ್ನೊಂದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕದ್ದುಮುಚ್ಚಿ ಬೇರೆಯವರ ಜೊತೆ ಸುತ್ತಾಡಿದ್ದ ದೀಪಿಕಾ? ಸಿಟ್ಟಾದ ರಣವೀರ್ ಸಿಂಗ್
ಮೂರು ವರ್ಷಗಳ ಕಾಲ ಡೇಟ್ ಮಾಡಿದ ಬಳಿಕ ರಣವೀರ್ ಅವರು ದೀಪಿಕಾನ ಮದುವೆ ಆಗುವ ನಿರ್ಧಾರಕ್ಕೆ ಬಂದರು. 2015ರಲ್ಲಿ ದೀಪಿಕಾ ಪಡುಕೋಣೆಗೆ ರಣವೀರ್ ಸಿಂಗ್ ಪ್ರಪೋಸ್ ಮಾಡಿದ್ದರು. ಸಮುದ್ರದ ಮಧ್ಯದಲ್ಲಿರುವ ದ್ವೀಪದಲ್ಲಿ ದೀಪಿಕಾಗೆ ರಿಂಗ್ ಕೊಟ್ಟು ಪ್ರೇಮ ನಿವೇದನೆ ಮಾಡಿದರು ರಣವೀರ್. ಈಗ ದೀಪಿಕಾ-ರಣವೀರ್ ಮದುವೆ ಆಗಿ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಅವರು ಮದುವೆ ವಿಡಿಯೋ ರಿಲೀಸ್ ಮಾಡಿದ್ದಾರೆ. ದೂರದ ಇಟಲಿಯಲ್ಲಿ ಈ ಜೋಡಿ ಮದುವೆ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ