ಬರ್ತಿದೆ ‘ಜೆಎನ್ಯು’ ಸಿನಿಮಾ; ಶಿಕ್ಷಣ ಸಂಸ್ಥೆ ಬಗ್ಗೆ ಇರಲಿದೆಯೇ ಕಥೆ?
ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈಗ ‘ಜೆಎನ್ಯು’ ಹೆಸರಲ್ಲಿ ಸಿನಿಮಾ ಬರ್ತಿದೆ.
ಕೆಲವು ಸಿನಿಮಾಗಳ ಟೈಟಲ್ಗಳು ಸಖತ್ ಸದ್ದು ಮಾಡುತ್ತವೆ. ಈಗ ‘ಜೆಎನ್ಯು’ ಸಿನಿಮಾ ಶೀರ್ಷಿಕೆ ಸದ್ದು ಮಾಡುತ್ತಿದೆ. ‘ಜೆಎನ್ಯು’ (JNU Movie) ಎಂದರೆ ‘ಜವಾಹರ್ಲಾಲ್ ನೆಹರು ಯೂನಿವರ್ಸಟಿ’ ಅಲ್ಲ. ಈ ಸಿನಿಮಾದಲ್ಲಿ ‘ಜೆಎನ್ಯು’ ಎಂದರೆ ‘ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ’ ಎಂದು. ಈ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ನಲ್ಲಿ ಕೈ ಒಳಗೆ ಭಾರತದ ಮ್ಯಾಪ್ ಇದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದಾರೆ.
ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದು ಭಯೋತ್ಪಾದಕರನ್ನು ಉತ್ಪಾದಿಸುವ ಶಿಕ್ಷಣ ಸಂಸ್ಥೆ ಎಂದು ಅನೇಕರು ಆರೋಪಿಸಿದ್ದು ಇದೆ. ಈಗ ‘ಜೆಎನ್ಯು’ ಸಿನಿಮಾ ಬರುತ್ತಿರುವುದು ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಪಾಕಿಸ್ತಾನದ ಈ ಬೌಲರ್ ಮೇಲೆ ಊರ್ವಶಿ ರೌಟೇಲಾಗೆ ಹೆಚ್ಚಿತು ಒಲವು? ಟ್ರೋಲ್ಗೆ ಒಳಗಾದ ನಟಿ
ಊರ್ವಶಿ ರೌಟೇಲಾ ಅವರು ‘ಜೆಎನ್ಯು’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ಪೋಸ್ಟರ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ನೀವು ನಿಮ್ಮನ್ನು ಸೆಲೆಬ್ರಿಟಿ ಎಂದು ಕರೆದುಕೊಳ್ಳಬೇಡಿ. ನೀವು ಭಾರತದಲ್ಲಿ ದ್ವೇಷವನ್ನು ಹರಡುತ್ತಿದ್ದೀರಿ’ ಎಂದು ಬರೆಯಲಾಗಿದೆ. ಇನ್ನೂ ಕೆಲವರು ‘ಈ ರೀತಿಯ ಟ್ರ್ಯಾಪ್ಗಳಿಗೆ ಜನರು ಬಲಿಯಾಗುವುದಿಲ್ಲ. ಇದೊಂದು ಪ್ರೊಪೊಗಾಂಡ ಸಿನಿಮಾ’ ಎಂದು ಕರೆದಿದ್ದಾರೆ.
ಜೆಎನ್ಯು ಸಿನಿಮಾ ಪೋಸ್ಟರ್
‘JNU’ FIRST POSTER OUT… 5 APRIL RELEASE… Behind closed walls of education brews a conspiracy to break the nation.#SiddharthBodke, #UrvashiRautela, #PiyushMishra, #RaviKishan, #VijayRaaz, #RashmiDesai, #AtulPandey and #SonnalliSeygall star in #JNU: #JahangirNationalUniversity.… pic.twitter.com/u3EHcOG7pc
— taran adarsh (@taran_adarsh) March 12, 2024
ವಿನಯ್ ಶರ್ಮಾ ಅವರು ‘ಜೆಎನ್ಯು’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಊರ್ವಶಿ ರೌಟೇಲಾ ಜೊತೆಗೆ ಸಿದ್ದಾರ್ಥ್ ಬೋಡ್ಕೆ, ಪಿಯುಷ್ ಮಿಶ್ರಾ, ರವಿ ಕಿಶನ್, ರಶ್ಮಿ ದೇಸಾಯಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ರಿಲೀಸ್ಗೂ ಮೊದಲೇ ವಿವಾದ ಸೃಷ್ಟಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ