ಪಾಕಿಸ್ತಾನದ ಈ ಬೌಲರ್ ಮೇಲೆ ಊರ್ವಶಿ ರೌಟೇಲಾಗೆ ಹೆಚ್ಚಿತು ಒಲವು? ಟ್ರೋಲ್ಗೆ ಒಳಗಾದ ನಟಿ
ಊರ್ವಶಿ ರೌಟೇಲಾ ಅವರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗೋಕೆ ಬಯಸುತ್ತಾರೆ. ಇಲ್ಲಸಲ್ಲದ ಹೇಳಿಕೆ ನೀಡಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಮೊದಲು ಅವರು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಹಿಂದೆ ಬಿದ್ದಿದ್ದರು. ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಸುದ್ದಿ ಆಗಿದ್ದರು. ಈಗ ಅವರು ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ.
ಏಷ್ಯಾ ಕಪ್ 2023 ನಡೆಯುತ್ತಿದೆ. ಶನಿವಾರ (ಸೆಪ್ಟೆಂಬರ್ 2) ಭಾರತ Vs ಪಾಕಿಸ್ತಾನ ಪಂದ್ಯ ನಡೆಯಿತು. ಮಳೆಯ ಕಾರಣದಿಂದ ಈ ಪಂದ್ಯ ರದ್ದಾಗಿದೆ. ಈ ಮಧ್ಯೆ ನಟಿ ಊರ್ವಶಿ ರೌಟೇಲಾ (Urvashi Rautela) ವಿವಾದ ಒಂದನ್ನು ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಪಾಕಿಸ್ತಾನದ ಬೌಲರ್ ನಸೀಮ್ ಶಾ ಅವರ ಫೋಟೋ ಪೋಸ್ಟ್ ಮಾಡಿದ್ದಾರೆ. ಇವರನ್ನು ಅನೇಕರು ಟೀಕೆ ಮಾಡಿದ್ದಾರೆ. ನಟಿ ಊರ್ವಶಿ ಅವರು ಪಾಕಿಸ್ತಾನದ ಬೌಲರ್ ಕಡೆ ಇಷ್ಟೊಂದು ಒಲವು ತೋರಿಸುವುದು ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಊರ್ವಶಿ ರೌಟೇಲಾ ಅವರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗೋಕೆ ಬಯಸುತ್ತಾರೆ. ಇಲ್ಲಸಲ್ಲದ ಹೇಳಿಕೆ ನೀಡಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಮೊದಲು ಅವರು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಹಿಂದೆ ಬಿದ್ದಿದ್ದರು. ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಸುದ್ದಿ ಆಗಿದ್ದರು. ಈಗ ಅವರು ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ.
ಭಾರತ-ಪಾಕಿಸ್ತಾನ ಮ್ಯಾಚ್ ವೇಳೆ ಜಿಮ್ನಲ್ಲಿರುವ ಟಿವಿಯ ಫೋಟೋನ ಊರ್ವಶಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಪಾಕಿಸ್ತಾನದ ಬೌಲರ್ ನಸೀಮ್ ಶಾ ಹೈಲೈಟ್ ಆಗಿದ್ದಾರೆ. ಈ ಫೋಟೋಗೆ ಅವರು ‘ವರ್ಕೌಟ್ ಟೈಮ್’ ಎನ್ನುವ ಕ್ಯಾಪ್ಶನ್ ನೀಡಿದ್ದರು. ಅವರು ಉದ್ದೇಶಪೂರ್ವಕವಾಗಿಯೇ ಈ ಫೋಟೋ ಹಾಕಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅನೇಕರು ನಟಿಯನ್ನು ಟೀಕಿಸಿದ್ದಾರೆ.
ಅಂದಹಾಗೆ, ಊರ್ವಶಿ ಅವರು ಈ ರೀತಿ ಸುದ್ದಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. 2022ರ ಏಷ್ಯಾ ಕಪ್ ದುಬೈನಲ್ಲಿ ನಡೆದಿತ್ತು. ಈ ವೇಳೆ ಅವರು ನಸೀಮ್ ಶಾ ಫೋಟೋ ಹಂಚಿಕೊಂಡಿದ್ದರು. ಈ ವೇಳೆ ಅವರನ್ನು ಟೀಕಿಸಲಾಗಿತ್ತು. ಈಗ ಮತ್ತದೇ ಕೆಲಸವನ್ನು ಅವರು ಮಾಡಿದ್ದಾರೆ.
Urvashi Rautela’s instagram story… Naseem thoda Bach ke 😂#NaseemShah #INDvsPAK #AsiaCup23 #urvashirautela pic.twitter.com/Gn4CqDOWXs
— Kokonuts (@Artful_Minx) September 2, 2023
ಇದನ್ನೂ ಓದಿ: ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವುದಾಗಿ ಹೇಳಿದ ಊರ್ವಶಿ ರೌಟೆಲ್ಲಾ: ಹೌಹಾರಿದ ನೆಟ್ಟಿಗರು
ಊರ್ವಶಿ ಹಾಗೂ ರಿಷಭ್ ಪಂತ್ ಇಬ್ಬರೂ ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು. ಬಳಿಕ ಇಬ್ಬರೂ ಬೇರೆ ಆದರು. ಪಂತ್ ಈ ವಿಚಾರದಲ್ಲಿ ರಹಸ್ಯ ಕಾಪಾಡಿಕೊಂಡು ಬಂದಿದ್ದರು. ಆದರೆ, ಊರ್ವಶಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ‘ರಿಷಭ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು’ ಎಂದೆಲ್ಲ ಹೇಳಿಕೊಂಡಿದ್ದರು. ಸಿನಿಮಾ ವಿಚಾರಕ್ಕೆ ಬರೋದಾದರೆ ‘ಪುಷ್ಪ 2’ ಚಿತ್ರದಲ್ಲಿ ಊರ್ವಶಿ ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಶೀಘ್ರವೇ ಘೋಷಣೆ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ