1 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಕ್ಕೆ ಬಿಕಿನಿ ವಿಡಿಯೋ ಹಂಚಿಕೊಂಡ ಸೋನು ಗೌಡ

ಈಗ ಸೋನು ಶ್ರೀನಿವಾಸ್ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಹಿಂಬಾಲಕರು ಸಿಕ್ಕಿದ್ದಾರೆ. ಇದಕ್ಕಾಗಿ ಅವರು ಬಿಕಿನಿ ವಿಡಿಯೋ ಹಂಚಿಕೊಂಡಿದ್ದಾರೆ. ‘ಇದು ಒಂದು ಮಿಲಿಯನ್ ಫಾಲೋವರ್ಸ್​’ ಸಿಕ್ಕಿದ್ದಕ್ಕೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

1 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಕ್ಕೆ ಬಿಕಿನಿ ವಿಡಿಯೋ ಹಂಚಿಕೊಂಡ ಸೋನು ಗೌಡ
ಸೋನು
Follow us
ರಾಜೇಶ್ ದುಗ್ಗುಮನೆ
|

Updated on: Sep 04, 2023 | 11:40 AM

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ. ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಮಾಲ್ಡೀವ್ಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ (10 ಲಕ್ಷ) ಫಾಲೋವರ್ಸ್ ಆಗಿದ್ದಾರೆ. ಈ ಖುಷಿಯಲ್ಲಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

ಸೋನು ಶ್ರೀನಿವಾಸ ಗೌಡ ಅವರ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದರಿಂದ ಅವರು ಬೆಳಕಿಗೆ ಬಂದರು. ಆದರೆ, ಅವರು ಇದರಿಂದ ಅಂಜಲಿಲ್ಲ. ಟೀಕೆಗಳನ್ನು ಎದುರಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆದರು. ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದರು. ಇದರಿಂದ ಸೋನು ಶ್ರೀನಿವಾಸ ಗೌಡ ಅವರಿಗೆ ಅಭಿಮಾನಿ ಬಳಗ ಹಿರಿದಾಗುತ್ತಾ ಬಂತು. ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡರು. ವಿಡಿಯೋ ಏಕೆ ಲೀಕ್ ಆಯಿತು, ಅದನ್ನು ಲೀಕ್ ಮಾಡಿದ್ದು ಯಾರು ಎಂಬುದನ್ನು ಅವರು ಹೇಳಿಕೊಂಡರು. ಬಿಗ್ ಬಾಸ್​ನಿಂದ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿತು.

ಈಗ ಸೋನು ಶ್ರೀನಿವಾಸ್ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಹಿಂಬಾಲಕರು ಸಿಕ್ಕಿದ್ದಾರೆ. ಇದಕ್ಕಾಗಿ ಅವರು ಬಿಕಿನಿ ವಿಡಿಯೋ ಹಂಚಿಕೊಂಡಿದ್ದಾರೆ. ‘ಇದು ಒಂದು ಮಿಲಿಯನ್ ಫಾಲೋವರ್ಸ್​’ ಸಿಕ್ಕಿದ್ದಕ್ಕೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅನೇಕರು ಈ ವಿಡಿಯೋಗೆ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಎಷ್ಟೇ ಟ್ರೋಲ್ ಆದರೂ ಜಗ್ಗಲ್ಲ ಸೋನು ಶ್ರೀನಿವಾಸ್ ಗೌಡ

ಮಾಲ್ಡೀವ್ಸ್​ಗೆ ತೆರಳಿದ ಬಳಿಕ ಸೋನು ಅವರು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ಅಶ್ಲೀಲ ಪದ ಬಳಕೆ ಮಾಡಿ ಕಮೆಂಟ್ ಮಾಡಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಈ ಮೊದಲು ಕಮೆಂಟ್ ಆಯ್ಕೆಯನ್ನು ಆಫ್ ಮಾಡುತ್ತಿದ್ದರು. ಈಗ ಅದನ್ನೂ ಅವರು ನಿಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ