ಹೆಚ್ಚಿದ ‘ಜವಾನ್’ ಸಿನಿಮಾ ಕ್ರೇಜ್: ಈವರೆಗೆ ಮಾರಾಟವಾದ ಟಿಕೆಟ್ ಎಷ್ಟು?
‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರೀ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು. ಅಡ್ವಾನ್ಸ್ ಬುಕಿಂಗ್ನಿಂದಲೇ ಕೋಟಿ ಕೋಟಿ ಗಳಿಸಿಕೊಂಡಿದೆ. ಸಿನಿಮಾ ರಿಲೀಸ್ಗೆ ಕೆಲವೇ ಗಂಟೆ ಬಾಕಿ ಇರುವಾಗ ಲಕ್ಷಾಂತರ ಟಿಕೆಟ್ಗಳು ಮಾರಾಟವಾಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ (Jawan Movie) ಬಿಡುಗಡೆಗೂ ಮೊದಲೇ ಸಾಲು ಸಾಲು ದಾಖಲೆಗಳನ್ನು ಮಾಡುತ್ತಿದೆ. ಈ ಮೊದಲು ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟ್ರೇಲರ್ ಬಿಡುಗಡೆಗೊಳಿಸಲಾಗಿತ್ತು. ಶಾರುಖ್ ಖಾನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆಡಿಯೋ ಲಾಂಚ್ನಲ್ಲಿ ಶಾರುಖ್ ಎನರ್ಜಿ ನೋಡಿ ಫ್ಯಾನ್ಸ್ ದಂಗಾಗಿದ್ದರು. ಈಗ ಸಿನಿಮಾ ಟಿಕೆಟ್ ಪ್ರೀ ಬುಕಿಂಗ್ ವಿಷಯದಲ್ಲಿ ಸುದ್ದಿ ಆಗುತ್ತಿದೆ. ಬಿಡುಗಡೆಗೆ ಮೊದಲೇ ಲಕ್ಷ ಲಕ್ಷ ಟಿಕೆಟ್ ಸೋಲ್ಡ್ ಔಟ್ ಆಗಿದೆ.
‘ಜವಾನ್’ ಸಿನಿಮಾದ ಆನ್ಲೈನ್ ಟಿಕೆಟ್ ಬುಕಿಂಗ್ ಒಂದು ವಾರದ ಹಿಂದೆ ಆರಂಭ ಆಗಿತ್ತು. ಈ ಅವಧಿಯಲ್ಲಿ 5 ಲಕ್ಷ ಟಿಕೆಟ್ ಬುಕ್ ಆಗಿವೆ. ಈ ಕುರಿತು ಟ್ರೇಡ್ ವಿಶ್ಲೇಶಕ ಮನೋಬಲ ವಿಜಯಬಾಲನ್ ತಮ್ಮ ಟ್ವಿಟರ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 2400 ರೂಪಾಯಿಗೆ ಏರಿಕೆಯಾಗಿದೆ. ಆದರೆ, ಶಾರುಖ್ ಖಾನ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಅತೀ ಹೆಚ್ಚು ಟಿಕೆಟ್ ಬುಕಿಂಗ್ ಆಗಿದೆ. ಪಿವಿಆರ್ನಲ್ಲಿ 1,12,299, ಐನಾಕ್ಸ್ನಲ್ಲಿ 75,661, ಸಿನಿಪೊಲಿಸ್ನಲ್ಲಿ 40,557 ಟಿಕೆಟ್ ಬುಕ್ ಆಗಿದ್ದು ಸುಮಾರು 9 ಕೋಟಿಯಷ್ಟು ಗಳಿಕೆ ಕಂಡಿದೆ. ಇನ್ನು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾದಲ್ಲಿ ಅತೀ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆಗಿದೆ
ಮುಂಜಾನೆಯಿಂದಲೇ ಶೋ
‘ಜವಾನ್’ ಚಿತ್ರಕ್ಕೆ ಹಲವು ಕಡೆಗಳಲ್ಲಿ ಮುಂಜಾನೆಯಿಂದಲೇ ಶೋ ಇಡಲಾಗಿದೆ. ಮುಂಬೈನ ಗೈಟಿ ಗ್ಯಾಲಾಕ್ಸಿ ಥಿಯೇಟರ್ನಲ್ಲಿ ಈವರೆಗೆ ಮುಂಜಾನೆ 6 ಗಂಟೆಗೆ ಯಾವುದೇ ಶೋ ಪ್ರದರ್ಶನ ಕಂಡಿರಲಿಲ್ಲ. ಆದರೆ, ಈಗ ‘ಜವಾನ್’ ಸಿನಿಮಾ ಶೋ 6 ಗಂಟೆಗೆ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಇತಿಹಾಸ ಸೃಷ್ಟಿ ಆಗುತ್ತಿದೆ.
ಇದನ್ನೂ ಓದಿ: ‘ಶಾರುಖ್ ಖಾನ್ಗೆ ಹೇಳಿ ಜವಾನ್ ಚಿತ್ರದ ಟಿಕೆಟ್ ಕೊಡಿಸಿ ಪ್ಲೀಸ್’: ವಿವೇಕ್ ಅಗ್ನಿಹೋತ್ರಿ ಬಹಿರಂಗ ಮನವಿ
‘ಜವಾನ್’ ಸಿನಿಮಾ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಡೆಗೊಳ್ಳುತ್ತಿದೆ. ಅಟ್ಲಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಶಾರುಖ್ ಖಾನ್, ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಬಗ್ಗೆ ಭಾರಿ ನರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ