Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಿನಿಮಾ ಆಡಿಯೋ ಲಾಂಚ್​​ಗೆ ಬರಲೇ ಇಲ್ಲ ನಯನತಾರಾ; ಅಸಲಿ ಕಾರಣ ಹುಡುಕಿದ ಫ್ಯಾನ್ಸ್

ಚೆನೈನಲ್ಲಿ ನಡೆದ ‘ಜವಾನ್’ ಸಿನಿಮಾದ ಆಡಿಯೋ ಲಾಂಚ್ ಯಶಸ್ಸು ಕಂಡಿದೆ. ನಟಿ ನಯನತಾರ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನಟಿ ನಯನತಾರಾ ಅವರು ಈ ಕಾರ್ಯಕ್ರಮಕ್ಕೆ ಆಗಮಿಸದೇ ಇರಲು ಕಾರಣ ಏನು ಎಂಬುದನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ.

‘ಜವಾನ್’ ಸಿನಿಮಾ ಆಡಿಯೋ ಲಾಂಚ್​​ಗೆ ಬರಲೇ ಇಲ್ಲ ನಯನತಾರಾ; ಅಸಲಿ ಕಾರಣ ಹುಡುಕಿದ ಫ್ಯಾನ್ಸ್
ನಯನತಾರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 31, 2023 | 11:46 AM

ಚೆನೈನಲ್ಲಿ ‘ಜವಾನ್’ ಸಿನಿಮಾದ () ಆಡಿಯೋ ಲಾಂಚ್ ಅದ್ದೂರಿಯಾಗಿ ನೆರವೇರಿದೆ. ಶಾರುಖ್ ಖಾನ್ (Shah Rukh Khan), ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ನಿರ್ದೇಶಕ ಅಟ್ಲಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನಯನತಾರ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಚೆನ್ನೈನಲ್ಲೇ ಕಾರ್ಯಕ್ರಮ ನಡೆದರೂ ಅವರು ಏಕೆ ಆಗಮಿಸಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು. ಚಿತ್ರತಂಡದೊಂದಿಗೆ ಅವರು ಮುನಿಸಿಕೊಂಡಿದ್ದಾರೆ ಎಂದೆಲ್ಲ ವರದಿ ಆಗಿದೆ.

ಯಾವುದೇ ಸ್ಟಾರ್ ಕಲಾವಿದರು ಸಿನಿಮಾದ ಪ್ರಚಾರದ ಭಾಗ ಆಗದೇ ಇದ್ದರೆ ಆ ಬಗ್ಗೆ ಒಂದಷ್ಟು ವದಂತಿ ಹುಟ್ಟಿಕೊಳ್ಳುತ್ತದೆ. ಈಗ ನಯನತಾರಾ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಆದರೆ, ಅಭಿಮಾನಿಗಳು ನಯನತಾರಾ ಪರ ಬ್ಯಾಟ್ ಬೀಸಿದ್ದಾರೆ. ಅವರು ಆಗಮಿಸದೇ ಇರಲು ಕಾರಣ ಏನು ಎಂಬುದನ್ನು ಹುಡುಕಿ ತೆಗೆದಿದ್ದಾರೆ.

ನಯತಾರಾ ತಮ್ಮ ಯಾವುದೇ ಸಿನಿಮಾದ ಪ್ರಮೋಷನ್​​ಗಳಲ್ಲಿ ಭಾಗವಹಿಸುವುದಿಲ್ಲ. ಇದು ಅವರು ಮೊದಲಿನಿಂದಲೂ ಹಾಕಿಕೊಂಡ ನಿಯಮ. ಇದನ್ನು ಸಿನಿಮಾ ಸಹಿ ಮಾಡುವಾಗಲೇ ನಿರ್ಮಾಪಕರಿಗೆ ಸ್ಪಷ್ಟಪಡಿಸಿರುತ್ತಾರೆ. ಹೀಗಾಗಿ ಈ ರೀತಿಯ ಇವೆಂಟ್ ಹಾಗೂ ಸಂದರ್ಶನದಲ್ಲಿ ಭಾಗವಹಿಸುವುದೇ ಇಲ್ಲ. ‘ಜವಾನ್’ ಚಿತ್ರಕ್ಕಾಗಿ ಆ ನಿಯಮವನ್ನು ನಯನತಾರಾ ಬ್ರೇಕ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ.

ಕೆಲವು ಮಾಧ್ಯಮಗಳ ವರದಿಯ ಪ್ರಕಾರ ಒಣಂ ಹಬ್ಬದ ಆಚರಣೆಯಲ್ಲಿ ಬ್ಯುಸಿ ಇರುವುದರಿಂದ ಅವರು ಈ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನಲಾಗಿದೆ. ಇಂದು (ಆಗಸ್ಟ್ 31) ದುಬೈನಲ್ಲಿ ‘ಜವಾನ್’ ಸಿನಿಮಾದ ಟ್ರೇಲರ್ ಲಾಂಚ್ ಆಗಲಿದೆ. ಈ ಕಾರ್ಯಮ್ರದಲ್ಲಿ ಶಾರುಖ್ ಖಾನ್ ಕೂಡ ಭಾಗವಹಿಸುತ್ತಿದ್ದಾರೆ. ಈ ವೇಳೆ ನಯನತಾರಾ ಕೂಡ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

‘ಜವಾನ್’ ಸಿನಿಮಾದ ಆಡಿಯೋ ಲಾಂಚ್ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇದ್ದವು. ಕಾರ್ಯಕ್ರಮದಲ್ಲಿ ಶಾರುಖ್ ತಮಿಳಿನಲ್ಲಿ ಮಾತನಾಡಿದರು. ಅನಿರುದ್ಧ್ ಜೊತೆ ಹೆಜ್ಜೆ ಹಾಕಿದರು. ‘ಚೆನೈ ಎಕ್ಸ್​​ಪ್ರೆಸ್’ ಸಿನಿಮಾದ ‘ಒನ್, ಟು ಥ್ರೀ, ಫೋರ್’ ಹಾಡಿಗೆ ನಟಿ ಪ್ರಿಯಾಮಣಿ ಜೊತೆ ಶಾರುಖ್ ಡಾನ್ಸ್ ಮಾಡಿದರು. ಸೆಪ್ಟೆಂಬರ್ 7ರಂದು ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರಕ್ಕಾಗಿ ತಮ್ಮದೇ ಹಳೇ ನಿಯಮ ಮುರಿದುಕೊಂಡ್ರಾ ನಯನತಾರಾ?

ಇತ್ತೀಚೆಗೆ ನಯನತಾರ ತಮ್ಮ ಮಕ್ಕಳಾದ ಉಯಿರ್ ಹಾಗೂ ಉಳಗಂ ಜೊತೆ ಓಣಂ ಹಬ್ಬ ಆಚರಿಸಿದ್ದರು.  ಈ ಫೋಟೋವನ್ನು ನಯನತಾರ ಪತಿ ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್