- Kannada News Photo gallery Pragathi Shetty Raksha Bandhan Celebration With Rakshit Shetty rishab Shetty Children Raksha Bandhan Celebration
ಪ್ರಗತಿ ಮನೆಯಲ್ಲಿ ಹೇಗಿತ್ತು ನೋಡಿ ರಕ್ಷಾ ಬಂಧನದ ಸಂಭ್ರಮ; ಪ್ರೀತಿಯ ಅಣ್ಣ ರಕ್ಷಿತ್ಗೆ ರಾಖಿ ಕಟ್ಟಿದ ರಿಷಬ್ ಪತ್ನಿ
ಆಗಸ್ಟ್ 30 ರಕ್ಷಾ ಬಂಧನ. ಈ ವಿಶೇಷ ದಿನದಂದು ಪ್ರಗತಿ ಶೆಟ್ಟಿ ಅವರು ರಕ್ಷಿತ್ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ‘ನನ್ನ ಚಿಂಟು ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ’ ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ. ಇನ್ನು, ಅಣ್ಣ ರಣ್ವಿತ್ಗೆ ರಾಧ್ಯ ರಾಖಿ ಕಟ್ಟಿದ್ದಾಳೆ.
Updated on:Aug 31, 2023 | 10:02 AM

ಪ್ರಗತಿ ಶೆಟ್ಟಿ-ರಕ್ಷಿತ್ ಶೆಟ್ಟಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರದ್ದು ಅಣ್ಣ-ತಂಗಿ ಸಬಂಧ. ರಿಷಬ್-ರಕ್ಷಿತ್ ಫ್ರೆಂಡ್ಸ್. ಹೀಗಾಗಿ, ರಕ್ಷಿತ್ನ ಅಣ್ಣ ಎಂದು ಪ್ರಗತಿ ಸ್ವೀಕರಿಸಿದ್ದಾರೆ. ಅಣ್ಣನ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ.

ರಿಷಬ್ ಹಾಗೂ ಪ್ರಗತಿ ಪ್ರೀತಿ ಮಾಡುವಾಗ ರಕ್ಷಿತ್ ಬೆಂಬಲವಾಗಿ ನಿಂತಿದ್ದರು. ಪ್ರಗತಿ ಬಗ್ಗೆ ರಕ್ಷಿತ್ಗೆ ವಿಶೇಷ ಕಾಳಜಿ ಇದೆ. ಸ್ವಂತ ತಂಗಿಯ ರೀತಿಯೇ ಪ್ರಗತಿಯನ್ನು ಅವರು ನೋಡಿಕೊಳ್ಳುತ್ತಾರೆ. ಈಗ ಅಣ್ಣನಿಗೆ ಪ್ರಗತಿ ರಾಖಿ ಕಟ್ಟಿದ್ದಾರೆ.

ಆಗಸ್ಟ್ 30 ರಕ್ಷಾ ಬಂಧನ. ಈ ವಿಶೇಷ ದಿನದಂದು ಪ್ರಗತಿ ಶೆಟ್ಟಿ ಅವರು ರಕ್ಷಿತ್ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ‘ನನ್ನ ಚಿಂಟು ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ’ ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳು. ಮಗನ ಹೆಸರು ರಣ್ವಿತ್ ಶೆಟ್ಟಿ ಮಗಳಿಗೆ ರಾಧ್ಯ ಎಂದು ನಾಮಕರಣ ಮಾಡಲಾಗಿದೆ. ಇವರ ಫೋಟೋಗಳನ್ನು ಪ್ರಗತಿ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

ಇವರು ಕೂಡ ಸಂಭ್ರಮದಿಂದ ರಕ್ಷಾ ಬಂಧನ ಆಚರಿಸಿದ್ದಾರೆ. ಅಣ್ಣ ರಣ್ವಿತ್ಗೆ ರಾಧ್ಯ ರಾಖಿ ಕಟ್ಟಿದ್ದಾಳೆ. ಈ ಫೋಟೋಗಳನ್ನು ಪ್ರಗತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತಿದ್ದಾರೆ.

ಪ್ರಗತಿ ಶೆಟ್ಟಿ ಅವರು ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ಅವರೇ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಜೊತೆಗೆ ಅತಿಥಿ ಪಾತ್ರ ಕೂಡ ಮಾಡಿದ್ದರು.

ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಮುಹೂರ್ತ ಆಗಸ್ಟ್ ಮಧ್ಯದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಕೆಲಸ ಆರಂಭ ಆಗಿಲ್ಲ. ಸಖತ್ ಅದ್ದೂರಿಯಾಗಿ ಈ ಚಿತ್ರ ಸಿದ್ಧವಾಗಲಿದೆ.
Published On - 9:56 am, Thu, 31 August 23




