- Kannada News Photo gallery Cricket photos England beats New Zealand by seven wickets in 1st t20 match
ENG vs NZ: ಆಂಗ್ಲರ ಆರ್ಭಟಕ್ಕೆ ತತ್ತರಿಸಿದ ಕಿವೀಸ್; ಮೊದಲ ಟಿ20ಯಲ್ಲಿ 7 ವಿಕೆಟ್ ಸೋಲು
ENG vs NZ: ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ 4 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟಿಮ್ ಸೌಥಿ ನಾಯಕತ್ವದ ಕಿವೀಸ್ ಪಡೆಯನ್ನು ಆತಿಥೇಯ ಆಂಗ್ಲ ಪಡೆ 7 ವಿಕೆಟ್ಗಳಿಂದ ಮಣಿಸಿದೆ.
Updated on: Aug 31, 2023 | 10:37 AM

ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ 4 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟಿಮ್ ಸೌಥಿ ನಾಯಕತ್ವದ ಕಿವೀಸ್ ಪಡೆಯನ್ನು ಆತಿಥೇಯ ಆಂಗ್ಲ ಪಡೆ 7 ವಿಕೆಟ್ಗಳಿಂದ ಮಣಿಸಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿತು. ತಂಡದ ಪರ ಯಾರೊಬ್ಬರು ಅರ್ಧಶತಕ ದಾಖಲಿಸದಿರುವುದು ಕಿವೀಸ್ ಪಡೆಯ ಅಲ್ಪ ಟಾರ್ಗೆಟ್ಗೆ ಕಾರಣವಾಯಿತು.

ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಚೊಚ್ಚಲ ಟಿ20 ಪಂದ್ಯವನ್ನಾಡಿದ ಬ್ರೈಡನ್ ಕಾರ್ಸೆ 3 ವಿಕೆಟ್ ಪಡೆದರೆ. ಲುಕ್ ವುಡ್ ಕೂಡ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

139 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಬಲಿಷ್ಠ ಇಂಗ್ಲೆಂಡ್ ಕೇವಲ ಮೂರು ವಿಕೆಟ್ ಕಳೆದುಕೊಂಡು ಇನ್ನು 36 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

ತಂಡದ ಪರ ಆರಂಭಿಕ ವಿಲ್ ಜ್ಯಾಕ್ಸ್ 22 ರನ್ ಸಿಡಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಡೇವಿಡ್ ಮಲಾನ್ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿದರು.

ಹಾಗೆಯೇ ಮಲಾನ್ಗೆ ಸೂಪರ್ ಸಾಥ್ ನೀಡಿದ ಹ್ಯಾರಿ ಬ್ರೂಕ್ ಕೇವಲ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 43 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕಿವೀಸ್ ಪರ ಬೌಲಿಂಗ್ನಲ್ಲಿ ಟಿಮ್ ಸೌಥಿ, ಲಾಕಿ ಫಗ್ರ್ಯುಸನ್, ಇಶ್ ಸೋಧಿ ತಲಾ ಒಂದೊಂದು ವಿಕೆಟ್ ಪಡೆದರು.



















