AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2023: ಪಲ್ಲೆಕೆಲೆ ಮತ್ತು ಕೊಲಂಬೊದಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ ಗೊತ್ತಾ?

Asia Cup 2023: ಈ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇದರಲ್ಲಿ ಗುಂಪು ಹಂತದ ಪಂದ್ಯಗಳನ್ನು ಪಲ್ಲೆಕೆಲೆಯಲ್ಲಿ ಆಡಲಿದ್ದು, ಆ ಬಳಿಕ ಸೂಪರ್ 4 ಹಂತದ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ. ಭಾರತ ಸೂಪರ್ ಹಂತಕ್ಕೆ ಅರ್ಹತೆ ಪಡೆದರೆ ಮುಂದಿನ ಸುತ್ತಿನ ಎಲ್ಲಾ ಮೂರು ಪಂದ್ಯಗಳನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಲಿದೆ.

ಪೃಥ್ವಿಶಂಕರ
|

Updated on: Aug 31, 2023 | 2:05 PM

Share
ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಟೀಂ ಇಂಡಿಯಾ ತನ್ನ ಏಷ್ಯಾಕಪ್‌ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೆ ರೋಹಿತ್ ಬಳಗ ನಿನ್ನೆ ಬೆಂಗಳೂರಿನಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಿದೆ.

1 / 11
2017 ರ ನಂತರ ಟೀಂ ಇಂಡಿಯಾದ ಪರಿಪೂರ್ಣ ತಂಡ ಮೊದಲ ಬಾರಿಗೆ ಶ್ರೀಲಂಕಾಕ್ಕೆ ಪ್ರಯಾಣಿಸಿದೆ. 2021 ರಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಿತ್ತಾದರೂ, ಆ ತಂಡದಲ್ಲಿ ಪ್ರಮುಖ ಆಟಗಾರರಿರಲಿಲ್ಲ.

2 / 11
ಇನ್ನು ಈ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇದರಲ್ಲಿ ಗುಂಪು ಹಂತದ ಪಂದ್ಯಗಳನ್ನು ಪಲ್ಲೆಕೆಲೆಯಲ್ಲಿ ಆಡಲಿದ್ದು, ಆ ಬಳಿಕ ಸೂಪರ್ 4 ಹಂತದ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.

3 / 11
ಭಾರತ ಸೂಪರ್ ಹಂತಕ್ಕೆ ಅರ್ಹತೆ ಪಡೆದರೆ ಮುಂದಿನ ಸುತ್ತಿನ ಎಲ್ಲಾ ಮೂರು ಪಂದ್ಯಗಳನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಲಿದೆ. ಒಟ್ಟಾರೆಯಾಗಿ, ಭಾರತ ಹಾಗೂ ಶ್ರೀಲಂಕಾ 1985 ರಿಂದ 89 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಭಾರತ 45 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇನ್ನುಳಿದ 35 ಪಂದ್ಯಗಳಲ್ಲಿ ಸೋತಿದೆ.

4 / 11
ಹಾಗೆಯೇ ಶ್ರೀಲಂಕಾ ವಿರುದ್ಧ ಅವರ ನೆಲದಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿರುವ ಭಾರತ ಇದರಲ್ಲಿ 28 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, 30 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

5 / 11
ಇನ್ನು ಪಲ್ಲೆಕೆಲೆ ಮತ್ತು ಕೊಲಂಬೊದಲ್ಲಿ  ಏಷ್ಯಾಕಪ್ ಪಂದ್ಯಗಳನ್ನು ಆಡಲಿರುವ ಭಾರತ. ಈ ಎರಡು ಮೈದಾನಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದೆ ಎಂಬುದನ್ನು ನೋಡುವುದಾದರೆ.. ಭಾರತ ಇಲ್ಲಿಯವರೆಗೆ ಪಲ್ಲೆಕೆಲೆಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

6 / 11
ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಒಂದು ಪಂದ್ಯ ಗೆದ್ದಿರುವ ಭಾರತ, ಉಳಿದೆರಡು ಪಂದ್ಯಗಳನ್ನು ಚೇಸ್ ಮಾಡುವ ಮೂಲಕ ಗೆದ್ದುಕೊಂಡಿದೆ. ಈ ಮೈದಾನದಲ್ಲಿ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಪರ ಅತ್ಯಂತ ಯಶಸ್ವಿ ಆಟಗಾರರೆನಿಸಿಕೊಂಡಿದ್ದಾರೆ.

7 / 11
ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ 2017 ರಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ 54 ಮತ್ತು 124* ರನ್ ಗಳಿಸಿದರೆ, ಬುಮ್ರಾ ಅವರು 2017 ರಲ್ಲಿ ಇಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ ಕಬಳಿಸಿ ಮಿಂಚಿದ್ದಾರೆ.

8 / 11
ಇನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣಕ್ಕೆ ಬಂದರೆ, ಇಲ್ಲಿ ಭಾರತ 46 ಏಕದಿನ ಪಂದ್ಯಗಳನ್ನು ಆಡಿದ್ದು, 19 ಪಂದ್ಯಗಳಲ್ಲಿ ಸೋತಿದ್ದು 23 ಪಂದ್ಯಗಳಲ್ಲಿ ಗೆದ್ದಿದೆ. ನಾಲ್ಕು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

9 / 11
ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 10 ರಂದು ಈ ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಮೈದಾನದಲ್ಲಿ ಈ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, 2004 ರಲ್ಲಿ ನಡೆದ ಪಂದ್ಯದಲ್ಲಿ ಭಾರತ 59 ರನ್‌ಗಳಿಂದ ಸೋತಿತ್ತು.

10 / 11
ಭಾರತ ಇಲ್ಲಿ ಕೊನೆಯದಾಗಿ 2021 ರಲ್ಲಿ ಧವನ್ ನಾಯಕತ್ವದಲ್ಲಿ ಆಡಿತ್ತು. ಕೊನೆಯದಾಗಿ ಭಾರತ ಇಲ್ಲಿ ಆಡಿರುವ ಮೂರು ಏಕದಿನ ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಗೆದ್ದಿದೆ. ಈ ಮೈದಾನದಲ್ಲಿ ಭಾರತ ಪರ ವಿರಾಟ್ ಕೊಹ್ಲಿ 131 ಮತ್ತು 110* ರನ್, ರೋಹಿತ್ 104 ಮತ್ತು 16 ರನ್​ ಸಿಡಿಸಿ ಮಿಂಚಿದ್ದಾರೆ.

11 / 11
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್

ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್

ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು

ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ

ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ

ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?