ಮಗನ ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿದ್ದೇಕೆ? ಕಾರಣ ತಿಳಿಸಿದ ಇಂದ್ರಜಿತ್ ಲಂಕೇಶ್

ಮೊದಲ ಚಿತ್ರಕ್ಕಾಗಿ ಸಮರ್ಜಿತ್​ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಕ್ಸ್​ ಪ್ಯಾಕ್​ ಆ್ಯಬ್ಸ್​ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಅವರು ಈಗಾಗಲೇ ನಟನೆ, ಡ್ಯಾನ್ಸ್, ಫೈಟ್ ತರಬೇತಿ ಪಡೆದಿದ್ದಾರೆ. ಈ ಮೂಲಕ ಸಂಪೂರ್ಣ ತಯಾರಿಯೊಂದಿಗೆ ಅವರ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಮಗನ ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿದ್ದೇಕೆ? ಕಾರಣ ತಿಳಿಸಿದ ಇಂದ್ರಜಿತ್ ಲಂಕೇಶ್
ಲಂಕೇಶ್-ಸಾನ್ಯಾ-ಸಮರ್ಜಿತ್
Follow us
ರಾಜೇಶ್ ದುಗ್ಗುಮನೆ
|

Updated on: Aug 31, 2023 | 12:23 PM

ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಮಗ ಸಮರ್ಜಿತ್ ಲಂಕೇಶ್ (Samarjit Lankesh) ಅವರು ‘ಗೌರಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು (ಆಗಸ್ಟ್​ 31) ಬೆಳಗ್ಗೆ 10 ಗಂಟೆಗೆ ‘ಗೌರಿ’ ಸಿನಿಮಾದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಇಂದ್ರಜಿತ್ ಅವರು ಉತ್ತರ ನೀಡಿದ್ದಾರೆ. ಸಿನಿಮಾ ತಂಡದ ಸದಸ್ಯರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

‘ನಾನು ಇಲ್ಲಿ ಸಿನಿಮಾ ಮುಹೂರ್ತ ನೆರವೇರಿಸಲು ಕಾರಣ ಇದೆ. ‘ಐಶ್ವರ್ಯಾ’ ಚಿತ್ರದ ಮುಹೂರ್ತ ಇಲ್ಲಿಯೇ ನೆರವೇರಿತ್ತು. 2005ರಲ್ಲಿ ಮುಹೂರ್ತ ಆಗಿತ್ತು. ಈ ಚಿತ್ರಕ್ಕೆ ಉಪೇಂದ್ರ ಹೀರೋ, ದೀಪಿಕಾ ಪಡುಕೋಣೆ ನಾಯಕಿ. ಇದು ದೀಪಿಕಾ ಅವರ ಮೊದಲ ಸಿನಿಮಾ. ಅವರು ಇಂಟರ್​ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅದೇ ರೀತಿ ಇಂದು ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಐಯ್ಯರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಬೆಳೆಯುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು ಇಂದ್ರಜಿತ್.

‘ನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆ. ಲಂಕೇಶ್ ಪತ್ರಿಕೆ ಹುಟ್ಟಿದ್ದು ಬಸವನಗುಡಿಯಲ್ಲಿ. ಈ ಕಾರಣದಿಂದ ಚಿತ್ರದ ಮುಹೂರ್ತ ವಿಶೇಷ ಎನಿಸಿದೆ. ನಾನು ಸಾಕಷ್ಟು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದೇನೆ. ನಿಮ್ಮ ಪ್ರೀತಿ ಹಾಗೆಯೇ ಇರಲಿ’ ಎಂದು ಇಂದ್ರಜಿತ್ ಕೋರಿಕೊಂಡರು.

ಇದನ್ನೂ ಓದಿ: ಇಂದ್ರಜಿತ್​ ಲಂಕೇಶ್​ ಪುತ್ರನ ಮೊದಲ ಸಿನಿಮಾ ಹೆಸರು ‘ಗೌರಿ’; ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ

ಮೊದಲ ಚಿತ್ರಕ್ಕಾಗಿ ಸಮರ್ಜಿತ್​ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಕ್ಸ್​ ಪ್ಯಾಕ್​ ಆ್ಯಬ್ಸ್​ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಅವರು ಈಗಾಗಲೇ ನಟನೆ, ಡ್ಯಾನ್ಸ್, ಫೈಟ್ ತರಬೇತಿ ಪಡೆದಿದ್ದಾರೆ. ಈ ಮೂಲಕ ಸಂಪೂರ್ಣ ತಯಾರಿಯೊಂದಿಗೆ ಅವರ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಟಿ ಸಾನ್ಯಾ ಐಯ್ಯರ್​ಗೆ ಇದು ಮೊದಲ ಸಿನಿಮಾ. ಈಗಾಗಲೇ ಅವರು ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಭಾಗಿ ಆಗಿ ಅವರು ಗಮನ ಸೆಳೆದರು. ಈಗ ಅವರಿಗೆ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ