ಬೆಂಗಳೂರು: ಪ್ರಸಾದ ತಯಾರಿಸುವ ವೇಳೆ ಅಗ್ನಿ ಅವಘಡ, ಗಾಯಗೊಂಡಿದ್ದ ದೇವಸ್ಥಾನದ ಅರ್ಚಕ‌ ಸಾವು

| Updated By: ವಿವೇಕ ಬಿರಾದಾರ

Updated on: Nov 25, 2022 | 11:23 PM

ಬೆಂಗಳೂರಿನ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ವೇಳೆ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಅರ್ಚಕ‌ ಮೃತಪಟ್ಟಿದ್ದಾರೆ.

ಬೆಂಗಳೂರು: ಪ್ರಸಾದ ತಯಾರಿಸುವ ವೇಳೆ ಅಗ್ನಿ ಅವಘಡ, ಗಾಯಗೊಂಡಿದ್ದ ದೇವಸ್ಥಾನದ ಅರ್ಚಕ‌ ಸಾವು
ಅಗ್ನಿ ಅವಘಢದಲ್ಲಿ ಮೃತಪಟ್ಟ ಅರ್ಚಕ‌
Follow us on

ಬೆಂಗಳೂರು: ಪ್ರಸಾದ ತಯಾರಿಸುವ ವೇಳೆ ಅಗ್ನಿ ಅವಘಡ ಸಂಭವಿಸಿ ದೇವಸ್ಥಾನದ ಅರ್ಚಕ‌ ಮೃತಪಟ್ಟಿರುವ ಘಟನೆ ಬೆಂಗಳೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿನಡೆದಿದೆ. ಜಯನಗರ 4th ಬ್ಲಾಕ್‌ನಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದ ಅರ್ಚಕರಾಗಿದ್ದ ನಾಗಯ್ಯ ಮೃತ ದುರ್ವೈವಿ.

ನವೆಂಬರ್ 18ರಂದು ಎಂದಿನಂತೆ ದೇವಸ್ಥಾನಕ್ಕೆ ಹೋಗಿದ್ದ ಅರ್ಚಕ ನಾಗಯ್ಯ, ಹಿಂಬಾಗದ ಕೋಣೆಯಲ್ಲಿ ಪ್ರಸಾದ ಮಾಡಲು ಹೋಗಿದ್ದಾರೆ. ಆ ವೇಳೆ ಗ್ಯಾಸ್ ಲೀಕ್ ಆಗಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅರ್ಚಕ ನಾಗಯ್ಯ ಅವರನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ನವೆಂಬರ್ 23) ಕೊನೆಯುಸಿರೆಳೆದಿದ್ದಾರೆ.

ನವೆಂಬರ್ 18ರಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ಅರ್ಚಕ ನಾಗಯ್ಯ, ದೇವಸ್ಥಾನದ ಹಿಂಬಾಗದ ಕೋಣೆಯಲ್ಲಿ ಪ್ರಸಾದ ಮಾಡಲು ತೆರಳಿದ್ದಾರೆ. ಈ ವೇಳೆ ಗ್ಯಾಸ್ ಆನ್ ಮಾಡಿ ಬೆಂಕಿಪೊಟ್ಟಣಕ್ಕಾಗಿ ಹುಡುಕಿದ್ದಾರೆ. ಸಿಗದಿದ್ದಕ್ಕೆ ರೂಮ್​ನಲ್ಲಿದ್ದ ಬೆಂಕಿಪಟ್ಟಣ ತೆಗೆದುಕೊಂಡು ಬರಲು ಹೋಗಿದ್ದರು. ಆದ್ರೆ, ಅಷ್ಟೊತ್ತಿಗೆ ಗ್ಯಾಸ್ ಲೀಕ್ ಆಗಿದ್ದು, ಅದನ್ನು ಗಮನಿಸದೇ ಕಡ್ಡಿ ಹಚ್ಚಿದ್ದಾರೆ. ಪರಿಣಾಮ ಏಕಾಏಕಿ ಬೆಂಕಿ ಹೊತ್ತಿಕೊಂಡು ಅಗ್ನಿ ಅವಘಡ ಸಂಭವಿಸಿದೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Published On - 11:16 pm, Fri, 25 November 22