ಸಾರಿಗೆ ಮುಷ್ಕರ ವೇಳೆ ವಜಾ ಆಗಿದ್ದ 62 ಬಿಎಂಟಿಸಿ ನೌಕರರ ಮರುನೇಮಕ; ಆದೇಶ ಪ್ರತಿ ವಿತರಣೆ

| Updated By: ಆಯೇಷಾ ಬಾನು

Updated on: Apr 11, 2022 | 2:31 PM

ವಜಾ ಆಗಿದ್ದ 62 ಬಿಎಂಟಿಸಿ ನೌಕರರಿಗೆ ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ ಮರುನೇಮಕ ಆದೇಶ ಪ್ರತಿ ನೀಡಲಾಗಿದೆ. ಆದೇಶ ಪ್ರತಿ ವಿತರಣೆ ಕಾರ್ಯಕ್ರಮದಲ್ಲಿ ಬಿಎಂಟಿಸಿ ಎಂಡಿ ಅನ್ಬುಕ್ ಕುಮಾರ್, ಉಪಾಧ್ಯಕ್ಷ ವೆಂಕಟೇಶ್, ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕಿ ರಾಧಿಕ ಉಪಸ್ಥಿತರಿದ್ದರು.

ಸಾರಿಗೆ ಮುಷ್ಕರ ವೇಳೆ ವಜಾ ಆಗಿದ್ದ 62 ಬಿಎಂಟಿಸಿ ನೌಕರರ ಮರುನೇಮಕ; ಆದೇಶ ಪ್ರತಿ ವಿತರಣೆ
ಬಿಎಂಟಿಸಿ ( ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಸಾರಿಗೆ ಮುಷ್ಕರ ವೇಳೆ ವಜಾ ಆಗಿದ್ದ ನೌಕರರನ್ನು ಮರುನೇಮಕ ಮಾಡಿಕೊಳ್ಳುವ ಆದೇಶ ಪ್ರತಿ ವಿತರಣೆ ಮಾಡಲಾಗಿದೆ. ವಜಾ ಆಗಿದ್ದ 62 ಬಿಎಂಟಿಸಿ ನೌಕರರಿಗೆ ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ ಮರುನೇಮಕ ಆದೇಶ ಪ್ರತಿ ನೀಡಲಾಗಿದೆ. ಆದೇಶ ಪ್ರತಿ ವಿತರಣೆ ಕಾರ್ಯಕ್ರಮದಲ್ಲಿ ಬಿಎಂಟಿಸಿ ಎಂಡಿ ಅನ್ಬುಕ್ ಕುಮಾರ್, ಉಪಾಧ್ಯಕ್ಷ ವೆಂಕಟೇಶ್, ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕಿ ರಾಧಿಕ ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟನೆಗೆ ಬರಬೇಕಿದ್ದ ಸಾರಿಗೆ ಸಚಿವ ಶ್ರೀರಾಮುಲು ಗೈರಾಗಿದ್ದಾರೆ.

ವಜಾ ಮಾಡಿದ್ದವರ ಮರುನೇಮಕ
ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೊದಲ ಬಾರಿಗೆ 100 ನೌಕರರು, ಬಳಿಕ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಷ್ಕರದಲ್ಲಿ 1,610 ಜನ ಭಾಗಿಯಾಗಿ ತೊಂದರೆಗೀಡಾಗಿದ್ದರು. ಮರು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಮ್ಮ ಕುಟುಂಬವನ್ನು ನೋಡಿ ಮರು ನೇಮಕ ಮಾಡುತ್ತಿದ್ದೇವೆ. ನಿಮ್ಮ ಜೊತೆ ಮುಷ್ಕರ ಮಾಡಿದವರು ಈಗ ಓಡಿ ಹೋದರು. ಆದರೆ, ಇಂದು‌ ನಿಮ್ಮ ಜೊತೆಗೆ ನಿಂತಿದ್ದು ನಮ್ಮ ಸರ್ಕಾರ. ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಈ ಹಿಂದೆ ಮರು ನೇಮಕಾತಿ ಪ್ರಕಿಯೆ ವೇಳೆ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಬುದ್ದಿವಾದ ಹೇಳಿದ್ದರು.

ಸಿಎಂ ಅಣತಿಯಂತೆ ನೌಕರರ ಮರುನೇಮಕ ಮಾಡಿಕೊಳ್ತಿದ್ದೇವೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಅವಕಾಶ ಕೊಡಲಾಗಿದೆ. ಮತ್ತೆ ಆ ರೀತಿಯ ತಪ್ಪು ಮಾಡಲು ಹೋಗಬೇಡಿ. ಮತ್ತೆ ಮುಷ್ಕರ ಅಂದ್ರೆ ನಾವ್ಯಾರೂ ಜೊತೆಯಲ್ಲಿ ಇರೋದಿಲ್ಲ. ಮುಂದಿನ ತಿಂಗಳಿಂದ ಸರಿಯಾಗಿ ಸಂಬಳ ನೀಡುತ್ತೇವೆ. ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಸಾಕಷ್ಟು ಬಾರಿ ಈ ಬಗ್ಗೆ ನಾನು ಎಂಡಿಗಳನ್ನು ಕರೆದು ಮಾತಾಡಿದ್ದೆ. ಮುಷ್ಕರ ಪ್ರಾರಂಭ ಆಗೋದು ಸುಲಭ, ಆದರೆ ಪ್ರಾರಂಭದ ನಂತರ ಅದನ್ನು ನಿಲ್ಲಿಸಲು ಆಗಲ್ಲ ಎಂದಿದ್ದರು.

ಇದನ್ನೂ ಓದಿ: ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಬೆಂಗಳೂರು ನಗರ ವಿವಿ ​

ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ- ಮಾಜಿ ಸಿಎಂ ಯಡಿಯೂರಪ್ಪ