
ಬೆಂಗಳೂರು, ಜನವರಿ 12: ಜೆ.ಪಿ. ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎನ್ನುವ ಖಾಸಗಿ ಕಂಪನಿ ಹೊರಡಿಸಿದ್ದ ಉದ್ಯೋಗಾವಕಾಶ ಪ್ರಕಟಣೆಯಲ್ಲಿ ಕನ್ನಡ ಗೊತ್ತಿಲ್ಲದ ಅಭ್ಯರ್ಥಿಗಳಿಗೆ ಆದ್ಯತೆ ಎಂಬ ಸಾಲು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಪನಿಯವರ ಮನಸ್ಥಿತಿಗೆ ಎಕ್ಸ್ನಲ್ಲಿ ಭಾರಿ ವಿರೋಧಗಳು ವ್ಯಕ್ತವಾಗಿದ್ದವು. ಖಾಸಗಿ ಕಂಪನಿಗಳಿಗೆ ಬದುಕೋಕೆ ಕನ್ನಡ ನೆಲ ಬೇಕು, ಆದ್ರೆ ಉದ್ಯೋಗ ಮಾಡಲು ಕನ್ನಡಿಗರು ಬೇಡವಾ? ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಬೆನ್ನಲ್ಲೇ ಖಾಸಗಿ ಕಂಪನಿ ಕನ್ನಡಿಗರ ಕ್ಷಮೆ ಕೇಳಿದೆ.
ಕನ್ನಡ ಬರದವರು ಕೆಲಸಕ್ಕೆ ಬೇಕು ಎಂಬ ಪೋಸ್ಟ್ ಬಗ್ಗೆ ‘ಸ್ಕಿಲ್ಸ್ ಸೋನಿಕ್ಸ್’ ಕಂಪನಿ ಇದೀಗ ಸ್ಪಷ್ಟನೆ ನೀಡಿದೆ. ಕೊಲ್ಕತ್ತಾ ಬ್ರಾಂಚ್ ಕಡೆಯಿಂದ ಈ ಪೋಸ್ಟ್ ಹಾಕಲಾಗಿದೆ. ಅದರಿಂದ ಕನ್ನಡಿಗರಿಗೆ ನೋವಾಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿ ಪ್ರಮಾದಗಳು ನಡೆಯದಂತೆ ನೋಡಿಕೊಳ್ತೇವೆ ಎಂಬ ಭರವಸೆಯನ್ನೂ ಕನ್ನಡಿಗರಿಗೆ ಕೊಟ್ಟಿದೆ.
ಇದನ್ನೂ ಓದಿ: ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ; ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
I do not agree with this mandate. I always believe that companies will give preference to locals if they have the required skills. If not, then such policies are detrimental to businesses https://t.co/zXRz3IMDB0
— Kiran Mazumdar-Shaw (@kiranshaw) January 7, 2026
ಈ ನಡುವೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರ ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಆಂಧ್ರದ ಮಾದರಿ ಕನ್ನಡಿಗರಿಗೆ ಮೀಸಲಾತಿ ಜಾರಿ ಮಾಡಲು ಆಗ್ರಹ ಕೇಳಿಬಂದಿದೆ. ಆದ್ರೆ ಇದಕ್ಕೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ನಿಯಮಕ್ಕೆ ನಾನು ಒಪ್ಪುವುದಿಲ್ಲ. ಯಾರಿಗೆ ಪ್ರತಿಭೆ ಇದೆಯೋ ಅಂಥವರಿಗೆ ಅವಕಾಶ ಸಿಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆಯೂ ಇದೇ ಅಭಿಪ್ರಾಯವನ್ನು ಉದ್ಯಮಿ ಕಿರಣ್ ಮಜುಂದಾರ್ ಶಾ ವ್ಯಕ್ತಪಡಿಸಿದ್ದರು ಅನ್ನೋದಿಲ್ಲಿ ಗಮನಾರ್ಹ. ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ದೊಡ್ಡ ಮಟ್ಟದ ಆಗ್ರಹ ವ್ಯಕ್ತವಾಗ್ತಿರೋ ಈ ಹೊತ್ತಲ್ಲಿ ಕಿರಣ್ ಮಜುಂದಾರ್ ಶಾ ಅವರ ಅಭಿಪ್ರಾಯದ ಬಗ್ಗೆಯೂ ಪರ-ವಿರೋಧ ಚರ್ಚೆಗಳು ಶುರುವಾಗಿವೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:56 pm, Mon, 12 January 26