ಬೆಂಗಳೂರು-ಗುವಾಹಟಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ; ಕೆಲ ಕಾಲ ಜನರಲ್ಲಿ ಆತಂಕ

Bengaluru-Guwahati express: ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನ S-7 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿತ್ತು. ಸುಮಾರು 20 ನಿಮಿಷಗಳ ಕಾಲ ಸಿಂಹಾಚಲಂ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗಿತ್ತು, ಅಗ್ನಿ ಶಾಮಕ ದಳ ಸಿಬ್ಬಂದಿ ರೈಲನ್ನು ಪರಿಶೀಲಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

ಬೆಂಗಳೂರು-ಗುವಾಹಟಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ; ಕೆಲ ಕಾಲ ಜನರಲ್ಲಿ ಆತಂಕ
ಬೆಂಗಳೂರು-ಗುವಾಹಟಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ

Updated on: Sep 22, 2024 | 10:43 AM

ಬೆಂಗಳೂರು, ಸೆ.22: ಬೆಂಗಳೂರು-ಗುವಾಹಟಿ ಎಕ್ಸ್​ಪ್ರೆಸ್​ (Bengaluru-Guwahati Express) ರೈಲಿನಲ್ಲಿ ಬೆಂಕಿ, ಹೊಗೆ (Smoke) ಕಾಣಿಸಿಕೊಂಡಿದೆ. ಆಂಧ್ರಪ್ರದೇಶದ ಸಿಂಹಾಚಲಂ ರೈಲು ನಿಲ್ದಾಣದಲ್ಲಿ ರೈಲಿನ ಸ್ಲೀಪರ್​ ಕೋಚ್​ನಲ್ಲಿ ಏಕಾಏಕಿ ಬೆಂಕಿ (Fire) ಕಾಣಿಸಿಕೊಂಡ ಘಟನೆ ನಡೆದಿದ್ದು ಬೆಂಕಿ ಕಾಣಿಸುತ್ತಿದ್ದಂತೆ ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ಶನಿವಾರ ಸಂಜೆ, 12509 ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್‌ನಲ್ಲಿ ಸಿಂಹಾಚಲಂ ರೈಲು ನಿಲ್ದಾಣದಲ್ಲಿ S-7 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದಾರೆ. ತಕ್ಷಣವೇ ಪ್ರಯಾಣಿಕರನ್ನು ಕೋಚ್ ನೀಂದ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ ವಿವಿಧ ಕಂಪನಿಗಳಲ್ಲಿ ತಯಾರಾಗುವ ತುಪ್ಪ ಪರೀಕ್ಷಿಸಲು ನಿರ್ಧರಿಸಿದ ಸರ್ಕಾರ

ಅಗ್ನಿಶಾಮಕ ದಳ ಸಿಬ್ಬಂದಿ ಪರಿಶೀಲನೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸದ್ಯ ಇದುವರೆಗೂ ಯಾವುದೇ ಗಾಯಗಳು ವರದಿಯಾಗಿಲ್ಲ. ಇನ್ನು ಈ ಘಟನೆಯಿಂದಾಗಿ ರೈಲು ಕೆಲ ಗಂಟೆಗಳ ಕಾಲ ವಿಳಂಬವಾಗಿದ್ದು ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ರೈಲು ಹೊರಟಿದೆ. ರೈಲ್ವೆ ಅಧಿಕಾರಿಗಳು ಬ್ರೇಕ್ ಬೈಂಡಿಂಗ್‌ನಿಂದ ಹೊಗೆಗೆ ಕಾರಣವಾಗಿದ್ದು, ಬೆಂಕಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಡಿವಿಜನಲ್ ರೈಲ್ವೇ ಮ್ಯಾನೇಜರ್ ಸೌರಭ್ ಪ್ರಸಾದ್ ಅವರು ಅವಘಡದ ಬಗ್ಗೆ ಮಾಹಿತಿ ನೀಡಿದ್ದಾರೆ. S-7 ಕೋಚ್‌ನಲ್ಲಿನ ತಾತ್ಕಾಲಿಕ ಬ್ರೇಕ್ ಸಿಸ್ಟಮ್ ದೋಷದಿಂದ ಹೊಗೆ ಬಂದಿದೆ. ರೈಲು 20 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ರಾತ್ರಿ 9:30 ಕ್ಕೆ ಸಿಂಹಾಚಲದಿಂದ ರೈಲು ಹೊರಟಿತು ಎಂದು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ