ಬೆಂಗಳೂರು: ದೇವಾಲಯ, ಮಸೀದಿ, ಚರ್ಚ್ ತೆರೆಯುವುದರ ಜೊತೆಗೆ ಧಾರ್ಮಿಕ ಚಟುವಟಿಕೆಗಳನ್ನು ಪುನಾರಂಭಿಸೋಕೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ನಿರ್ಧಾರ ಭಕ್ತರಲ್ಲಿ ಸಂತಸ ತಂದಿದೆ. 3 ತಿಂಗಳಿಂದ ಕಾಲ ದೇವರ ದರ್ಶನ ಪಡೆದು, ಪ್ರಾರ್ಥನೆಯಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದ ಭಕ್ತಗಣಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ.
ಹೆಬ್ಬಾಳದಲ್ಲಿ ಸಾಮೂಹಿಕ Drive-in ಪ್ರಾರ್ಥನೆ!
ಅದರಂತೆಯೇ ಫ್ರೀಡೌನ್ನ ಮೊದಲನೇ ಭಾನುವಾರವಾಗಿದ್ದ ಇಂದು ರಾಜ್ಯದ ಕ್ರೈಸ್ತ ಬಾಂಧವರೆಲ್ಲಾ ತಮ್ಮ ಚರ್ಚ್ಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಆದರೆ ನಗರದ ಹೆಬ್ಬಾಳದ ಓಪನ್ ಗ್ರೌಂಡ್ ಒಂದರಲ್ಲಿ ಆಯೋಜಿಸಲಾಗಿದ್ದ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ಸ್ವಲ್ಪ ವಿಭಿನ್ನವಾಗಿಯೇ ಇತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಕೇಂದ್ರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದ ಈ ಭಕ್ತ ಸಮೂಹ ಒಂದು ಸ್ಪೆಷಲ್ ಡ್ರೈವ್-ಇನ್ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದರು.
ಹಾಗೆಯೇ ಎತ್ತರದ ಸ್ಟೇಜ್ವೊಂದನ್ನು ನಿರ್ಮಿಸಿ ಚರ್ಚ್ ಪಾದ್ರಿಯ ಸಂದೇಶವನ್ನು ಎಲ್ಲರಿಗೂ ಕಾಣುವಂತೆ ದೊಡ್ಡ LED ಸ್ಕ್ರೀನ್ ಮೇಲೆಯೂ ಸಹ ಪ್ರದರ್ಶಿಸಲಾಯಿತು. ಗ್ರೌಂಡ್ ಸುತ್ತಲ್ಲೂ ಲೌಡ್ಸ್ಪೀಕರ್ ಅಳವಡಿಸಿ ಭಕ್ತರಿಗೆ ಪ್ರೇಯರ್ ಸ್ಪಷ್ಟವಾಗಿ ಕಾಣಸಿಗುವಂತೆ ವ್ಯವಸ್ಥೆ ಕೂಡ ಮಾಡಲಾಗಿತ್ತು.
Published On - 4:38 pm, Sun, 14 June 20