ಚಮಕ್​ ನೀಡಿ ಎಸ್ಕೇಪ್​ ಆಗ್ತಿದ್ದ ತ್ರಿಬಲ್​ ರೈಡಿಂಗ್ ಪುಂಡರ ಬೆನ್ನಟ್ಟಿದ BBMP Marshals

| Updated By: ಆಯೇಷಾ ಬಾನು

Updated on: Jun 15, 2020 | 4:20 PM

ಬೆಂಗಳೂರು: ದೇಶಾದ್ಯಂತ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಹಾಗಾಗಿ ಈ ಮಹಾಮಾರಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲರೂ ಮಾಸ್ಕ್​ ಧರಿಸಿಕೊಂಡು ಓಡಾಡಬೇಕೆಂದು ನಿಯಮ ಕೂಡ ಜಾರಿ ಮಾಡಿದೆ. ಹಾಗಿದ್ರೂ ಕೂಡ ಕೆಲವರು ಇದಕ್ಕೆ ಡೋಂಟ್​ ಕೇರ್​ ಅನ್ನುತ್ತಾ ಓಡಾಡ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಇಂಥವರನ್ನು ಹಿಡಿದು ದಂಡ ವಿಧಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಆಶ್ಚರ್ಯವೆಂದರೆ ಕೆಲವು ರಾಜ್ಯಗಳಲ್ಲಿ ಜಮೆಯಾದ ದಂಡದ ಮೊತ್ತ ಕೋಟ್ಯಂತರ ರೂಪಾಯಿಗಳಾಗಿವೆ. ಉದಾಹರಣೆಗೆ ಚಂಡೀಗಢದಲ್ಲಿ 3 ಕೋಟಿ, ಓಡಿಶಾದಲ್ಲಿ 1 ಕೋಟಿ ರೂಪಾಯಿಯಷ್ಟು […]

ಚಮಕ್​ ನೀಡಿ ಎಸ್ಕೇಪ್​ ಆಗ್ತಿದ್ದ ತ್ರಿಬಲ್​ ರೈಡಿಂಗ್ ಪುಂಡರ ಬೆನ್ನಟ್ಟಿದ BBMP Marshals
Follow us on

ಬೆಂಗಳೂರು: ದೇಶಾದ್ಯಂತ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಹಾಗಾಗಿ ಈ ಮಹಾಮಾರಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲರೂ ಮಾಸ್ಕ್​ ಧರಿಸಿಕೊಂಡು ಓಡಾಡಬೇಕೆಂದು ನಿಯಮ ಕೂಡ ಜಾರಿ ಮಾಡಿದೆ. ಹಾಗಿದ್ರೂ ಕೂಡ ಕೆಲವರು ಇದಕ್ಕೆ ಡೋಂಟ್​ ಕೇರ್​ ಅನ್ನುತ್ತಾ ಓಡಾಡ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಇಂಥವರನ್ನು ಹಿಡಿದು ದಂಡ ವಿಧಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಆಶ್ಚರ್ಯವೆಂದರೆ ಕೆಲವು ರಾಜ್ಯಗಳಲ್ಲಿ ಜಮೆಯಾದ ದಂಡದ ಮೊತ್ತ ಕೋಟ್ಯಂತರ ರೂಪಾಯಿಗಳಾಗಿವೆ. ಉದಾಹರಣೆಗೆ ಚಂಡೀಗಢದಲ್ಲಿ 3 ಕೋಟಿ, ಓಡಿಶಾದಲ್ಲಿ 1 ಕೋಟಿ ರೂಪಾಯಿಯಷ್ಟು ದಂಡ ಪಾವತಿಸಿರುವ ಬಗ್ಗೆ ವರದಿಯಾಗಿದೆ.

ತ್ರಿಬಲ್ ರೈಡಿಂಗ್ ಮಾಡ್ತಿದ್ದ ಪುಂಡರ ಹಿಂದೆ ಚೇಸ್​!
ಬೆಂಗಳೂರಿನಲ್ಲೂ ನಮ್ಮ ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್​ ಹಾಕದವರನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ. ಹಾಗೆಯೇ ಇಂದೂ ಸಹ ಬ್ಯಾರಿಕೇಡ್​ ಹಾಕಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು. ಇದೆ ವೇಳೆ ಬೈಕ್​ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಮೂವರು ಪುಂಡ ಮಹಾಶಯರು ಅಲ್ಲಿಗೆ ಬಂದರು. ಮುಂದಕ್ಕೆ ಸಾಗಿದರೆ ನಮ್ಮನೂ ಹಿಡಿದು ಫೈನ್ ಜಡೀತಾರೆ ಅಂತಾ ಯೋಚಿಸಿ ಹೇಗಾದ್ರೂ ಮಾಡಿ ತಪ್ಪಿಸಿಕೊಳ್ಬೇಕು ಅಂತಾ ಅಲ್ಲೇ ಪ್ಲಾನ್​ ಮಾಡಿದ್ರು. ಬ್ಯಾರಿಕೇಡ್​ ಬಳಿ ಬಂದ ಪುಂಡರನ್ನು ತಡೆಯಲು ಮುಂದಾದ ಮಾರ್ಷಲ್​ಗಳಿಗೆ ಚಮಕ್​ ಕೊಟ್ಟು ಎಸ್ಕೇಪ್​ ಆದರು. ಆದರೆ ತಪ್ಪಿಸಿಕೊಂಡ್ವಿ ಅಂತಾ ಅಂದುಕೊಂಡವರಿಗೆ ಶಾಕ್​ ಕಾದಿತ್ತು. ತಕ್ಷಣವೇ ಮಾರ್ಷಲ್​ಗಳು ಅವರನ್ನು ಬೆನ್ನಟ್ಟಿ ಹಿಡಿದರು.

 

Published On - 1:37 pm, Mon, 15 June 20