ವೀಕೆಂಡ್ ಮಸ್ತಿ.. ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರು ಓಡಿಸಿದ್ದಕ್ಕೆ ಸಿಕ್ತು ಬಿಸಿ ಬಿಸಿ ಕಜ್ಜಾಯ!

ಬೆಂಗಳೂರು: ವೀಕೆಂಡ್​ ಮಸ್ತಿಯಲ್ಲಿ ಭಾನುವಾರ ಅಡ್ಡಾದಿಡ್ಡಿಯಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದವನಿಗೆ ಸ್ಥಳೀಯರಿಂದ ಸಖತ್ತು ಗೂಸಾ ಬಿದ್ದ ಘಟನೆ RT ನಗರದಲ್ಲಿ ನಡೆದಿದೆ. ಗೂಸಾ ತಿಂದ ಇಬ್ಬರ ಹೆಸರು ತಿಳಿದು ಬಂದಿಲ್ಲ. ಆದರೆ, ಸ್ಥಳೀಯರ ಪ್ರಕಾರ ಇಬ್ಬರೂ RT ನಗರದ ಮರಿ ಪುಢಾರಿಗಳೆಂದು ಹೇಳಲಾಗ್ತಿದೆ. ಗೆಳತಿಯರನ್ನ ಇಂಪ್ರೆಸ್​ ಮಾಡುವ ಭರದಲ್ಲಿ ಅಡ್ಡಾದಿಡ್ಡಿ​.. ಭಾನುವಾರವಾಗಿದ್ದ ನಿನ್ನೆ ಏರಿಯಾದಲ್ಲಿ ರಸ್ತೆಗಳು ಖಾಲಿ ಇದೆ ಅಂತಾ ತಮ್ಮ ದುಬಾರಿ ಲ್ಯಾಂಬೋರ್ಗಿನಿ ಕಾರ್​ನಲ್ಲಿ ಗೆಳತಿಯರ ಜತೆ ಜಾಲಿ ರೈಡ್ ಹೊರಟಿದ್ದರು. ಇದೇ ವೇಳೆ ತಮ್ಮ […]

ವೀಕೆಂಡ್ ಮಸ್ತಿ.. ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರು ಓಡಿಸಿದ್ದಕ್ಕೆ ಸಿಕ್ತು ಬಿಸಿ ಬಿಸಿ ಕಜ್ಜಾಯ!
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 4:22 PM

ಬೆಂಗಳೂರು: ವೀಕೆಂಡ್​ ಮಸ್ತಿಯಲ್ಲಿ ಭಾನುವಾರ ಅಡ್ಡಾದಿಡ್ಡಿಯಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದವನಿಗೆ ಸ್ಥಳೀಯರಿಂದ ಸಖತ್ತು ಗೂಸಾ ಬಿದ್ದ ಘಟನೆ RT ನಗರದಲ್ಲಿ ನಡೆದಿದೆ. ಗೂಸಾ ತಿಂದ ಇಬ್ಬರ ಹೆಸರು ತಿಳಿದು ಬಂದಿಲ್ಲ. ಆದರೆ, ಸ್ಥಳೀಯರ ಪ್ರಕಾರ ಇಬ್ಬರೂ RT ನಗರದ ಮರಿ ಪುಢಾರಿಗಳೆಂದು ಹೇಳಲಾಗ್ತಿದೆ.

ಗೆಳತಿಯರನ್ನ ಇಂಪ್ರೆಸ್​ ಮಾಡುವ ಭರದಲ್ಲಿ ಅಡ್ಡಾದಿಡ್ಡಿ​.. ಭಾನುವಾರವಾಗಿದ್ದ ನಿನ್ನೆ ಏರಿಯಾದಲ್ಲಿ ರಸ್ತೆಗಳು ಖಾಲಿ ಇದೆ ಅಂತಾ ತಮ್ಮ ದುಬಾರಿ ಲ್ಯಾಂಬೋರ್ಗಿನಿ ಕಾರ್​ನಲ್ಲಿ ಗೆಳತಿಯರ ಜತೆ ಜಾಲಿ ರೈಡ್ ಹೊರಟಿದ್ದರು. ಇದೇ ವೇಳೆ ತಮ್ಮ ಜೊತೆಗಿದ್ದ ಗೆಳತಿಯರನ್ನ ಇಂಪ್ರೆಸ್​ ಮಾಡುವ ಭರದಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಲು ಶುರುಮಾಡಿದರಂತೆ. ಇದರಿಂದ ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು ಮತ್ತು ಸ್ಥಳೀರಿಗೆ ಬಹಳ ತೊಂದರೆಯಾಗಿ ಇಬ್ಬರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ್ರು.

ಮಾತಿಗೆ ಮಾತು ಬೆಳೆದು ಕೊನೆಗೆ ಇಬ್ಬರನ್ನು ಕಾರಿನಿಂದ ಹೊರಗೆಳೆದು ಧರ್ಮದೇಟು ಸಹ ಕೊಟ್ಟರು. ಜತೆಗೆ ಈ ಪ್ರಸಂಗವನ್ನು ವಿಡಿಯೋ ಮಾಡಿ ಬೆಂಗಳೂರು ಪೊಲೀಸರಿಗೆ  ಟ್ವಿಟ್ಟರ್ ಮುಖಾಂತರ ಪೊಸ್ಟ್ ಮಾಡಿದ್ರು.

ಕಮಿಷನರ್ ಭಾಸ್ಕರ್ ರಾವ್​ರಿಂದ ಕ್ರಮಕ್ಕೆ ಸೂಚನೆ ವಿಡಿಯೋ ಗಮನಿಸಿದ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರು ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಚಾರಿ ಉತ್ತರ ವಿಭಾಗದ ಡಿಸಿಪಿ ಸಾರ ಫಾತಿಮಾಗೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ವಿಡಿಯೋವನ್ನು ಪರಿಶೀಲಿಸಿರುವ ಸಂಚಾರಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

Published On - 2:33 pm, Mon, 15 June 20

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ