ಮಾಜಿ ಸಚಿವ ರಾಮಲಿಂಗಾರೆಡ್ಡಿಗೆ ಶುರುವಾಯ್ತು ಕೊರೊನಾ ಆತಂಕ!
ಬೆಂಗಳೂರು: ಕೊರೊನಾ ವೈರಸ್ ಕಣ್ಣಿಗೆ ಕಾಣದಿದ್ದರೂ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಆ ಭಯದಿಂದಲೇ ನಡೆಯಬಾರದ ಘಟನೆಗಳು ನಡೀತಿವೆ. ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿಗೂ ಕೊರೊನಾ ಆತಂಕ ಶುರುವಾಗಿದೆ. ಯಾಕಂದ್ರೆ ತಮ್ಮ ನೆರೆಮನೆಯ ನಿವಾಸಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಈಗ ರಾಮಲಿಂಗಾರೆಡ್ಡಿ ಅವರಿಗೆ ಈ ಸೋಂಕು ತನಗೂ ತಗುಲಿರಬಹುದಾ ಎಂಬ ಆತಂಕ ಹೆಚ್ಚಾಗಿದೆ. ಸೋಂಕಿತ ವ್ಯಕ್ತಿ ಚಿಕ್ಕಪೇಟೆಯಲ್ಲಿ ತರಕಾರಿ ಮಂಡಿ ನಡೆಸುತ್ತಿದ್ದ ವ್ಯಾಪಾರಿ. ಸದ್ಯ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಲಕ್ಕಸಂದ್ರದ […]
ಬೆಂಗಳೂರು: ಕೊರೊನಾ ವೈರಸ್ ಕಣ್ಣಿಗೆ ಕಾಣದಿದ್ದರೂ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಆ ಭಯದಿಂದಲೇ ನಡೆಯಬಾರದ ಘಟನೆಗಳು ನಡೀತಿವೆ. ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿಗೂ ಕೊರೊನಾ ಆತಂಕ ಶುರುವಾಗಿದೆ. ಯಾಕಂದ್ರೆ ತಮ್ಮ ನೆರೆಮನೆಯ ನಿವಾಸಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಈಗ ರಾಮಲಿಂಗಾರೆಡ್ಡಿ ಅವರಿಗೆ ಈ ಸೋಂಕು ತನಗೂ ತಗುಲಿರಬಹುದಾ ಎಂಬ ಆತಂಕ ಹೆಚ್ಚಾಗಿದೆ.
ಸೋಂಕಿತ ವ್ಯಕ್ತಿ ಚಿಕ್ಕಪೇಟೆಯಲ್ಲಿ ತರಕಾರಿ ಮಂಡಿ ನಡೆಸುತ್ತಿದ್ದ ವ್ಯಾಪಾರಿ. ಸದ್ಯ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಲಕ್ಕಸಂದ್ರದ ನಿವಾಸದ ಮುಂದೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಕಾರು, ಬೈಕ್ಗಳಿಗೆ ರಾಸಾಯನಿಕ ಸಿಂಪಡಿಸುತ್ತಿದ್ದಾರೆ.
Published On - 12:50 pm, Mon, 15 June 20