ನಕಲಿ ಮೆಡಿಸಿನ್ ದಂಧೆ ಬಗ್ಗೆ ಮತ್ತಷ್ಟು ಕರಾಳ ಸತ್ಯ ಅನಾವಣರ: ಟರ್ಕಿವರೆಗೂ ಲಿಂಕ್​​ ಬಗ್ಗೆ ಮಾಹಿತಿ ಬಹಿರಂಗ

ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣದ ತನಿಖೆ ವೇಳೆ ಅಂತಾರಾಷ್ಟ್ರೀಯ ಲಿಂಕ್ ಪತ್ತೆಯಾಗಿದ್ದು, ಟರ್ಕಿಯಿಂದ ನಕಲಿ ಲೇಬಲ್ ತರಿಸಿ 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ದಂಧೆಯ ಅಸಲಿ ಕಿಂಗ್‌ಪಿನ್ ವೀರೇಶ್ ಜೈನ್ ಎಂಬ ಶಂಕೆ ವ್ಯಕ್ತವಾಗಿದ್ದು, ಮಂಗಳವಾರದ ನಂತರ ಆತನನ್ನು ಕಸ್ಟಡಿಗೆ ಪಡೆದು ಎಸ್​ಐಟಿ ಅಸಲಿ ವಿಚಾರಣೆ ಆರಂಭಿಸಲಿದೆ ಎನ್ನಲಾಗಿದೆ.

ನಕಲಿ ಮೆಡಿಸಿನ್ ದಂಧೆ ಬಗ್ಗೆ ಮತ್ತಷ್ಟು ಕರಾಳ ಸತ್ಯ ಅನಾವಣರ: ಟರ್ಕಿವರೆಗೂ ಲಿಂಕ್​​ ಬಗ್ಗೆ ಮಾಹಿತಿ ಬಹಿರಂಗ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Sep 13, 2026 | 10:46 AM

ಬೆಂಗಳೂರು, ಸೆಪ್ಟೆಂಬರ್​​ 13: ನಕಲಿ ಮೆಡಿಸಿನ್ ದಂಧೆ ಕೇಸ್ ಬಗ್ಗೆ ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಹಿರಂಗೊಂಡಿವೆ. ಈ ದಂಧೆ ಕೇವಲ ರಾಜ್ಯ ಅಥವಾ ರಾಷ್ಟ್ರಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಮಟ್ಟದವರೆಗೆ ವ್ಯಾಪಿಸಿದೆ ಎಂಬುದು ಗೊತ್ತಾಗಿದೆ. ನಕಲಿ ಔಷಧಿಗಳಿಗೆ ಲೇಬಲ್​​ಗಳು ಟರ್ಕಿ ದೇಶದಿಂದ ಬರುತ್ತಿತ್ತು. ಸಮುದ್ರ ಮಾರ್ಗದ ಮೂಲಕ ಇವುಗಳ ಆಮದು ಕಾರ್ಯ ನಡೆಯುತ್ತಿತ್ತು. ಆ ಮೂಲಕ ಬ್ರ್ಯಾಂಡೆಡ್ ಮೆಡಿಸಿನ್ ಕಂಪನಿ ಲೇಬಲ್ ಬಳಸಿ ವಂಚನೆ ಅವ್ಯಾಹತವಾಗಿ ನಡೆಯುತ್ತಿತ್ತು ಎಂಬುದು ತಿಳಿದುಬಂದಿದೆ. ಅಲ್ಲದೆ ಟರ್ಕಿ ನಕಲಿ ಔಷಧಿಗಳ ಅಕ್ರಮಕ್ಕೆ ದೊಡ್ಡ ಮಾರುಕಟ್ಟೆಯಾಗಿದ್ದು, ಕ್ಯಾನ್ಸರ್ ಔಷಧಿಗಳನ್ನು ಅಕ್ರಮವಾಗಿ ರಫ್ತು ಮಾಡುವ ದೊಡ್ಡ ಜಾಲವಿದೆ ಎಂಬುದನ್ನು ಜಾಗತಿಕ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ ಎನ್ನಲಾಗಿದೆ.

ನಕಲಿ ಮೆಡಿಸಿನ್ ದಂಧೆಗೆ ಬೆಂಗಳೂರಿನ ವೀರೇಶ್ ಜೈನ್​ ಕಿಂಗ್ ಪಿನ್ ಎಂಬ ಶಂಕೆ

ಮತ್ತೊಂದೆಡೆ ನಕಲಿ ಮೆಡಿಸಿನ್ ದಂಧೆಗೆ ಬೆಂಗಳೂರಿನ ವೀರೇಶ್ ಜೈನ್ ಕಿಂಗ್ ಪಿನ್ ಎಂಬ ಶಂಕೆ ವ್ಯಕ್ತವಾಗಿದ್ದು, ಈತ ಮೆಡಿಕಲ್ ರೆಪ್ ಆಗಿ ಕೆಲಸ ಮಾಡ್ತಿದ್ದ. ಪ್ರಶಾಂತ್ ಸೇರಿದಂತೆ ಆರೋಪಿಗಳ ಜತೆಗೆ ವೀರೇಶ್​​ಗೆ ನಂಟಿದ್ದು, ಆರೋಪಿಗಳೆಲ್ಲ ಸೇರಿಕೊಂಡು ಸಂಘಟಿತವಾಗಿ ನಕಲಿ ಮೆಡಿಸನ್ ದಂಧೆ ನಡೆಸುತ್ತಿದ್ದರು. ತಮ್ಮದೇ ಫಾರ್ಮಾ ಓಫನ್ ಮಾಡಿ ದಂಧೆ ನಡೆಸುತ್ತಿದ್ದ ಇವರು, 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡುತ್ತಿದ್ದರು. ಆ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ನಕಲಿ‌ ಮೆಡಿಸಿನ್ ಮಾರಾಟ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಆರೋಪಿ ವೀರೇಶ್ ಜೈನ್ ಸದ್ಯ ಪರಸ್ಪರ ಅಗ್ರಹಾರ ಜೈಲು ಸೇರಿದ್ದು, ಮಂಗಳವಾರದ ನಂತರ ಆತನನ್ನು ಕಸ್ಟಡಿಗೆ ಪಡೆದು ಎಸ್​ಐಟಿ ಅಸಲಿ ವಿಚಾರಣೆ ಆರಂಭಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಮನಗರ ನಕಲಿ ಔಷಧ ಜಾಲ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿ 6 ರಾಜ್ಯಗಳ 10 ಕಡೆ ಕರ್ನಾಟಕ ಎಸ್‌ಐಟಿ ದಾಳಿ

ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ಮತ್ತು ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದವು. ಕರ್ನಾಟಕ, ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣದಲ್ಲಿ ಕಾರ್ಯಾಚರಣೆ ನಡೆದಿತ್ತು. ಸುಮಾರು 80ರಿಂದ 100 ಅಧಿಕಾರಿಗಳ ತಂಡ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ನಕಲಿ ಫಾರ್ಮ್‌ಗಳ ಕಚೇರಿಗಳು, ಔಷಧ ಸಂಗ್ರಹ ಸ್ಥಳಗಳು ಹಾಗೂ ಜಾಲಕ್ಕೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಆ ಬೆನ್ನಲ್ಲೇ ನಕಲಿ ಮೆಡಿಸಿನ್​​ ದಂಧೆ ಬಗ್ಗೆ ಮತ್ತಷ್ಟು ಕರಾಳ ಸತ್ಯಗಳು ಅನಾವರಣಗೊಂಡಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us