ಕೆನಡಾ ಪ್ರಜೆ ವಿಡಿಯೋ ಬಳಿಕೆ ಎಚ್ಚೆತ್ತ ಜಿಬಿಎ: ಇಂದಿರಾನಗರದ 12ನೇ ಮುಖ್ಯ ರಸ್ತೆಯ ಫುಟ್‌ಪಾತ್‌ಗಳ ದುರಸ್ತಿ

ಇಂದಿರಾನಗರದ 12ನೇ ಮುಖ್ಯ ರಸ್ತೆಯ ಫುಟ್‌ಪಾತ್ ದುಸ್ಥಿತಿ ಬಗ್ಗೆ ಕೆನಡಾ ಪ್ರಜೆ ಫ್ರೀಸೆನ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಾಮಗಾರಿ ನಡೆಸಿ ಸಮಸ್ಯೆ ಸರಪಡಿಸಿದೆ. ಆ ಬೆನ್ನಲ್ಲೇ ಮತ್ತೊಂದು ವಿಡಿಯೋ ಹಂಚಿಕೊಂಡು GBA ಕೈಗೊಂಡ ಕಾಮಗಾರಿಯನ್ನು ಫ್ರೀಸೆನ್ ಶ್ಲಾಘಿಸಿದ್ದಾರೆ. ಆದರೆ, ಈ ದುರಸ್ತಿ ತಾತ್ಕಾಲಿಕವಾಗಿದ್ದು, 2027ರ ಆರಂಭದಲ್ಲಿ GBA 12ನೇ ಮೇನ್ ರಸ್ತೆಯನ್ನು ಸಂಪೂರ್ಣವಾಗಿ ಪುನರ್ ಅಭಿವೃದ್ಧಿಪಡಿಸುವವರೆಗೆ ಮಾತ್ರ ಈ ಪರಿಹಾರ ಇರಲಿದೆ ಎಂದು ಹೇಳಿದ್ದಾರೆ.

ಕೆನಡಾ ಪ್ರಜೆ ವಿಡಿಯೋ ಬಳಿಕೆ ಎಚ್ಚೆತ್ತ ಜಿಬಿಎ: ಇಂದಿರಾನಗರದ 12ನೇ ಮುಖ್ಯ ರಸ್ತೆಯ ಫುಟ್‌ಪಾತ್‌ಗಳ ದುರಸ್ತಿ
ಫುಟ್​​ಪಾತ್​​ ದುರಸ್ತಿ ಮಾಡಿರುವುದು
Image Credit source: caleb_friesen X Account

Updated on: Oct 05, 2026 | 11:16 AM

ಬೆಂಗಳೂರು, ಅಕ್ಟೋಬರ್​​ 05: ಬೆಂಗಳೂರಿನ ಫುಟ್‌ಪಾತ್‌ಗಳ ದುಸ್ಥಿತಿಯ ಬಗ್ಗೆ ಕೆನಡಾ ಮೂಲದ ವ್ಯಕ್ತಿ ಮಾಡಿದ್ದ ವಿಡಿಯೋ ವೈರಲ್​​ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಅವುಗಳ ದುರಸ್ತಿ ಕಾರ್ಯ ನಡೆಸಿದೆ. ಇಂದಿರಾನಗರದ 12ನೇ ಮುಖ್ಯ ರಸ್ತೆಯ ಫುಟ್‌ಪಾತ್‌ಗಳ ದುಸ್ಥಿತಿಯ ಕುರಿತ ಕೆನಡಾ ಪ್ರಜೆ ಫ್ರೀಸೆನ್ ವಿಡಿಯೋ ಮಾಡಿದ್ದರು. ಬೇರೆ ಯಾವುದೇ ದೇಶದಲ್ಲಿದ್ದರೂ ಇಂತಹ ಫುಟ್‌ಪಾತ್‌ ಇರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ದೇಶದ ಪ್ರಮುಖ ಟೆಕ್ ನಗರಗಳಲ್ಲಿ ಒಂದಾಗಿದ್ದು, ಹಲವು ಸ್ಟಾರ್ಟ್‌ಅಪ್‌ಗಳು ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಇಲ್ಲಿವೆ ಎಂದವರು ಉಲ್ಲೇಖಿಸಿದ್ದರು.

ದುರಸ್ತಿ ಮಾಡಿರುವ ವಿಡಿಯೋ ಹಂಚಿಕೊಂಡ ಜಿಬಿಎ

ಫ್ರೀಸೆನ್ ಅವರು ವಿಡಿಯೋದಲ್ಲಿ ತೋರಿಸಿದ್ದ ಫುಟ್‌ಪಾತ್‌ನ ಬಹುತೇಕ ಹಾನಿಗೊಳಗಾದ ಭಾಗಗಳನ್ನು ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿ ದುರಸ್ತಿ ಮಾಡಿದ್ದು, ಕೈಗೊಂಡ ಕಾಮಗಾರಿಯ ಪ್ರತಿಕ್ರಿಯಾ ವಿಡಿಯೋವನ್ನೂ ಪ್ರಾಧಿಕಾರ ಸಾರ್ವಜನಿಕವಾಗಿ ಹಂಚಿಕೊಂಡಿದೆ. ಇಂದಿರಾನಗರದ 12ನೇ ಮೇನ್ ರಸ್ತೆ ಇದೀಗ ದುರಸ್ತಿಯಾಗುತ್ತಿದೆ. ತ್ವರಿತವಾಗಿ ಸ್ಪಂದಿಸಿದ ದೊಮ್ಮಲೂರು ತಂಡ ಹಾಗೂ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್‌ಗೆ ಧನ್ಯವಾದಗಳು ಎಂದು ಪೋಸ್ಟ್​​ನಲ್ಲಿ ಜಿಬಿಎ ಬರೆದುಕೊಂಡಿದೆ.

ಇದನ್ನೂ ಓದಿ: ಇಂದಿನಿಂದ 60 ದಿನಗಳ ಕಾಲ ರೇಸ್ ಕೋರ್ಸ್ ರಸ್ತೆ ಬಂದ್: ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಫ್ರೀಸೆನ್ ಅವರ ವಿಡಿಯೋದಲ್ಲಿ ಏನಿತ್ತು?


ಹಾನಿಗೊಳಗಾದ ಫುಟ್‌ಪಾತ್‌ನಿಂದ ಉಂಟಾಗಿರುವ ಹಲವು ಅಡೆತಡೆಗಳನ್ನೂ ಫ್ರೀಸೆನ್ ವಿಡಿಯೋದಲ್ಲಿ ತೋರಿಸಿದ್ದರು. ಒಂದು ಭಾಗವು ಕ್ಷುದ್ರಗ್ರಹ ಬಡಿದ ಪರಿಣಾಮ ಉಂಟಾದ ಕುಳಿಯಂತಿದೆ ಎಂದು ಹೇಳಿದ್ದ ಅವರು, ಅದರಲ್ಲಿ ಜನರು ಕಸವನ್ನು ತಾತ್ಕಾಲಿಕ ಕಸದ ಬುಟ್ಟಿಯಂತೆ ಹಾಕಿರುವುದನ್ನೂ ಉಲ್ಲೇಖಿಸಿದ್ದರು. ಈ ರಸ್ತೆಯ ದುಸ್ಥಿತಿಯನ್ನು ಅಧಿಕಾರಶಾಹಿ ವೈಫಲ್ಯದ ಪರಿಣಾಮ ಎಂದವರು ದೂರಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ GBA, ದುರಸ್ತಿಗೂ ಮುನ್ನ ಹಾಗೂ ನಂತರದ ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ಹಂಚಿಕೊಂಡಿದೆ. ಆ ಬೆನ್ನಲ್ಲೇ ಮತ್ತೊಂದು ವಿಡಿಯೋ ಪೋಸ್ಟ್​​ ಮಾಡಿರುವ ಫ್ರೀಸೆನ್ , GBA ಕೈಗೊಂಡ ಕಾಮಗಾರಿಯನ್ನುಶ್ಲಾಘಿಸಿದ್ದಾರೆ. ಆದರೆ, ಈ ದುರಸ್ತಿ ತಾತ್ಕಾಲಿಕವಾಗಿದ್ದು 2027ರ ಆರಂಭದಲ್ಲಿ GBA 12ನೇ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ಪುನರ್ ಅಭಿವೃದ್ಧಿಪಡಿಸುವವರೆಗೆ ಮಾತ್ರ ಈ ಪರಿಹಾರ ಇರಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:38 am, Mon, 5 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us