ಮಹಾಮೈತ್ರಿಕೂಟ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದ ನಿತಿಶ್​ ಕುಮಾರ್​ಗೆ ಮುಜುಗರ ತರಿಸಿದ ಬ್ಯಾನರ್

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಿ ಪುನಃ ಅಧಿಕ್ಕಾರಕ್ಕೇರಬೇಕೆಂದು 26 ಪ್ರತಿಕ್ಷಗಳು ಬೆಂಗಳೂರಲ್ಲಿ ಸಭೆ ನಡೆಸಿವೆ. ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರು ಕೂಡ ಭಾಗಿಯಾಗಿದ್ದಾರೆ. ಇದೀಗ ನಗರದಲ್ಲಿ ಅವರು ಮುಜುಗುರಕ್ಕೆ ಈಡಾಗುವ ಪ್ರಸಂಗವೊಂದು ನಡೆದಿದೆ.

ಮಹಾಮೈತ್ರಿಕೂಟ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದ ನಿತಿಶ್​ ಕುಮಾರ್​ಗೆ ಮುಜುಗರ ತರಿಸಿದ ಬ್ಯಾನರ್
ಸಿಎಂ ನಿತೀಶ್​ ಕುಮಾರ್​ ವಿರುದ್ಧ ಪೋಸ್ಟರ್​

Updated on: Jul 18, 2023 | 9:17 AM

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿಯನ್ನು ಮಣಿಸಿ ಪುನಃ ಅಧಿಕ್ಕಾರಕ್ಕೇರಬೇಕೆಂದು 26 ಪ್ರತಿಕ್ಷಗಳು ಬೆಂಗಳೂರಲ್ಲಿ (Bengalur) ಸಭೆ ನಡೆಸಿವೆ. ಸಭೆಯಲ್ಲಿ ಬಿಹಾರ (Bihar) ಮುಖ್ಯಮಂತ್ರಿ ನಿತೀಶ್​ ಕುಮಾರ್ (Nitish Kumar) ಅವರು ಕೂಡ ಭಾಗಿಯಾಗಿದ್ದಾರೆ. ಇದೀಗ ಅವರು ಮುಜುಗುರಕ್ಕೆ ಈಡಾಗುವ ಪ್ರಸಂಗವೊಂದು ನಡೆದಿದೆ. ನಗರದ ತಾಜ್​​​ವೆಸ್ಟ್ ಎಂಡ್​​ ​ಹೋಟೆಲ್ ಸಮೀಪ” ಬಿಹಾರದಲ್ಲಿ ಇತ್ತೀಚಿಗೆ ಕುಸಿದಿದ್ದ “ಸುಲ್ತಾನ್ ಗಂಜ್ ಸೇತುವೆ”ಯ ಪೋಸ್ಟರ್ ಹಾಕಿ “ಅಸ್ಥಿರ ಪ್ರಧಾನಿ ಅಭ್ಯರ್ಥಿ” ಎಂದು ವ್ಯಂಗ್ಯ ಮಾಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪೋಸ್ಟರ್​ ತೆರವುಗೊಳಿಸಿದ್ದಾರೆ.

ಸೋಮವಾರ ಸಾಯಂಕಾಲದಿಂದ ತಾಜ್​​​ವೆಸ್ಟ್ ಎಂಡ್​​ ​ಹೋಟೆಲ್​​ನಲ್ಲಿ ವಿರೋಧ ಪಕ್ಷ ನಾಯಕರ ಸಭೆ ಆರಂಭವಾಗಿದೆ.ಸಭೆ ಆರಂಭವಾಗುತ್ತಿದ್ದಂತೆ ಹೊರಗಡೆ ಸಿಎಂ ನಿತೀಶ್​ ಕುಮಾರ್​ ಅವರನ್ನು ಅಣುಕಿಸುವ ಪೋಸ್ಟರ್​ ಹಾಕಲಾಗಿತ್ತು.ಇನ್ನು ನಿನ್ನೆಯ (ಜು.17) ವಿರೋಧ ಪಕ್ಷದ ನಾಯಕರ ಔತಣಕೂಟ ಸಭೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಆರಂಭವಾಗಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಎಂಕೆ ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್, ಹೇಮಂತ್ ಸೋರೆನ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಭಾಗಿಯಾಗಿದ್ದರು.

ಇಂದು (ಜು.18) ಬೆಳಿಗ್ಗೆ ಪ್ರಾರಂಭವಾಗುವ ಔಪಚಾರಿಕ ಸಭೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಮಗಳು ಸುಪ್ರಿಯಾ ಸುಳೆ ಅವರೊಂದಿಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಘಟಬಂಧನಕ್ಕಾಗಿ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ IAS ಅಧಿಕಾರಿಗಳು: ಕುಮಾರಸ್ವಾಮಿ ಕಿಡಿ

ನಿನ್ನೆಯ ಸಭೆಯಲ್ಲಿ ವಿರೋಧ ಪಕ್ಷಗಳು ದೇಶಕ್ಕಾಗಿ ನಾವು ಒಂದಾಗಿದ್ದೇವೆ (ಯುನೈಟೆಡ್ ವಿ ಸ್ಟ್ಯಾಂಡ್) ಎಂದು ಸಾರಿವೆ. ಹಾಗೂ ಈ ಸಭೆ ಗೇಮ್​ ಚೇಂಜರ್​​ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ. ಇನ್ನು ಈ ಸಭೆಯಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (ಆರ್‌ಜೆಡಿ), ಅಖಿಲೇಶ್ ಯಾದವ್ (ಎಸ್‌ಪಿ), ಉದ್ಧವ್ ಠಾಕ್ರೆ (ಶಿವಸೇನೆ-ಯುಬಿಟಿ), ಫಾರೂಕ್ ಅಬ್ದುಲ್ಲಾ (ಎನ್‌ಸಿ) ಮತ್ತು ಮೆಹಬೂಬಾ ಮುಫ್ತಿ (ಪಿಡಿಪಿ) ಇದ್ದರು. ಸೀತಾರಾಮ್ ಯೆಚೂರಿ (ಸಿಪಿಐ-ಎಂ), ಡಿ ರಾಜಾ (ಸಿಪಿಐ), ಜಯಂತ್ ಚೌಧರಿ (ಆರ್‌ಎಲ್‌ಡಿ) ಮತ್ತು ಎಂಡಿಎಂಕೆ ಸಂಸದ ವೈಕೊ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 am, Tue, 18 July 23