Bengaluru: ಪತ್ನಿ-ಪುತ್ರನ ಹತ್ಯೆಗೆ ಯತ್ನಿಸಿ ಬಳಿಕ ಚಾಕುವಿನಿಂದ ತನ್ನ ಕುತ್ತಿಗೆಗೆ ತಾನೇ ಚುಚ್ಚಿಕೊಂಡ ಮದ್ಯ ವ್ಯಸನಿ ಟೆಕ್ಕಿ

| Updated By: ರಮೇಶ್ ಬಿ. ಜವಳಗೇರಾ

Updated on: Mar 20, 2023 | 8:47 AM

ಸಾಫ್ಟ್​ವೆರ್​ ಇಂಜಿನಿಯರ್‌ ಹುದ್ದೆಯನ್ನು ಬಿಟ್ಟು ಮನೆಯಲ್ಲೇ ಎಣ್ಣೆ ಹೊಡೆಯುತ್ತಿರುವುದನ್ನು ಪತ್ನಿ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನೂ ಕುತ್ತಿಗೆಗೆ ಚಾಕು ಚುಚ್ಚಿಕೊಂಡಿದ್ದಾನೆ. ಈ ಬಗ್ಗೆ ಇನ್ನಷ್ಟು ವಿವರ ಈ ಕೆಳಗಿನಂತಿದೆ.

Bengaluru: ಪತ್ನಿ-ಪುತ್ರನ ಹತ್ಯೆಗೆ ಯತ್ನಿಸಿ ಬಳಿಕ ಚಾಕುವಿನಿಂದ ತನ್ನ ಕುತ್ತಿಗೆಗೆ ತಾನೇ ಚುಚ್ಚಿಕೊಂಡ ಮದ್ಯ ವ್ಯಸನಿ ಟೆಕ್ಕಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು (ಮಾ.20) :  ಮದ್ಯ ವ್ಯಸನಿಯಾಗಿದ್ದ  ಸಾಫ್ಟ್​ವೆರ್​ ಇಂಜಿನಿಯರ್‌ (Softwear engineer) ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಪತ್ನಿ ಹಾಗೂ ಪುತ್ರನ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ತಾನೂ ಸಹ ಚಾಕುವಿನಿಂದ ಕುತ್ತಿಗೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರದ ಹರ್ಷ (45), ಸುಧಾರಾಣಿ (38), ಪ್ರಥಮ್‌ (12) ಗಾಯಗೊಂಡಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಲವ್ವಿಡವ್ವಿಗೆ ಅಡ್ಡಿಯಾದ ಸ್ವಂತ ತಮ್ಮನನ್ನೇ ಕೊಂದು 20 ಪೀಸ್​ ಮಾಡಿದ್ದ ಅಕ್ಕ, ಮರ್ಡರ್‌ ಮಿಸ್ಟ್ರಿಯ ಸ್ಫೋಟಕ ಮಾಹಿತಿ ಬಯಲು..!

ತುಮಕೂರು ಮೂಲದ ಹರ್ಷ ಹಾಗೂ ಬಳ್ಳಾರಿ ಮೂಲದ ಸುಧಾರಾಣಿ ವೃತ್ತಿಯಲ್ಲಿ ಸಾಫ್ಟ್​ವೆರ್​ ಇಂಜಿನಿಯರ್‌ ಎಂಜಿನಿಯರ್‌ ಗಳಾಗಿದ್ದು, 12 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ 12 ವರ್ಷದ ಪುತ್ರ ಇದ್ದಾನೆ. ಕಳೆದ 10 ವರ್ಷಗಳಿಂದ ರಾಜರಾಜೇಶ್ವರಿ ನಗರದಲ್ಲಿ ದಂಪತಿ ನೆಲೆಸಿದ್ದರು. ಇತ್ತೀಚೆಗೆ ಕುಡಿತದ ಚಟಕ್ಕೆ ಬಿದ್ದಿದ್ದ ಹರ್ಷ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜತೆಗೆ ಜಗಳ ಮಾಡುತ್ತಿದ್ದ. ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಹರ್ಷ, ಮದ್ಯಪಾನ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದ. ಈ ಬಗ್ಗೆ ಪತ್ನಿ ಪ್ರಶ್ನೆ ಮಾಡಿದರೆ ಜಗಳ ತೆಗೆದು ಆಕೆಯ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದ ಹರ್ಷ, ಸುಖಾಸುಮ್ಮನೆ ಪತ್ನಿಯ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಚಾಕು ತೆಗೆದು ಪತ್ನಿಯ ಕುತ್ತಿಗೆ ಚುಚ್ಚಿದ್ದಾನೆ. ಈ ಜಗಳವನ್ನು ನೋಡುತ್ತಾ ಅಳುತ್ತಿದ್ದ ಪುತ್ರನ ಕುತ್ತಿಗೆಗೂ ಚಾಕುವಿನಿಂದ ಚುಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ತನ್ನ ಕುತ್ತಿಗೆಗೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸಂಬಂಧಿಕರು ಹಾಗೂ ಸ್ಥಳೀಯರು ಮೂವರನ್ನು ಆಸ್ಪತ್ರಗೆ ಕರೆದೊಯ್ದಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ