ಬೆಂಗಳೂರು: ಅಪಾರ್ಟ್ಮೆಂಟ್ವೊಂದರ 10ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ (Student) ಆತ್ಮಹತ್ಯೆ (Sucide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಗವಾರ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮೋಹಿನ್ ಮೃತ ವಿದ್ಯಾರ್ಥಿ. ಖಾಸಗಿ ಶಾಲೆಯ ಸಿಬ್ಬಂದಿ ಬೈದಿದ್ದರಿಂದ ಮೋಹಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ನಿವಾಸಿ ಯಾಸೀನ್ ಆರೋಪ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ವಿರುದ್ಧವೂ ಬೇಜವಾಬ್ದಾರಿ ಕಾರ್ಯ ಆರೋಪ ಕೇಳಿ ಬರುತ್ತಿದೆ. ವಿದ್ಯಾರ್ಥಿಯನ್ನು 10ನೇ ಮಹಡಿವರೆಗೆ ತೆರಳಲು ಅವಕಾಶ ನೀಡಿದ್ದೇಕೆ ಎಂದು ಆಕ್ರೋಶ ಯಾಸೀನ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ವಿದ್ಯಾರ್ಥಿ ಮೋಹಿನ್ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Tue, 8 November 22