ರೇಣುಕಾಚಾರ್ಯ ಸಹೋದರನಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ‌ ವಿಸ್ತರಿಸಿದ ಹೈಕೋರ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 10, 2024 | 5:39 PM

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರಕೇಶ್ವರಯ್ಯ (MP Darakeswaraiah) ಅವರ ಪ್ರಯತ್ನಕ್ಕೆ ಹೈಕೊರ್ಟ್​ ತಡೆವೊಡ್ಡಿತ್ತು. ಅದನ್ನು ಇದೀಗ ಏ.16 ರವರೆಗೆ ವಿಸ್ತರಿಸಿ ನ್ಯಾಯಮೂರ್ತಿ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.

ರೇಣುಕಾಚಾರ್ಯ ಸಹೋದರನಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ‌ ವಿಸ್ತರಿಸಿದ ಹೈಕೋರ್ಟ್
ಹೈಕೋರ್ಟ್​
Follow us on

ಬೆಂಗಳೂರು, ಏ.10: ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರಕೇಶ್ವರಯ್ಯ (MP Darakeswaraiah) ಅವರ ಪ್ರಯತ್ನಕ್ಕೆ ಹೈಕೊರ್ಟ್​ ತಡೆವೊಡ್ಡಿತ್ತು. ಈ ಕುರಿತು ದಾಸರಹಳ್ಳಿಯ ಎಂ ಚಂದ್ರ ಬಿನ್​ ಮುನಿಯಪ್ಪ ಅವರು ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ನ್ಯಾಯಮೂರ್ತಿಗಳು ಸೋಮವಾರ(ಏ.8) ವಿಚಾರಣೆ ನಡೆಸಿದ್ದರು.

‘ಇವರು ಈ ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್​ ಅವರಿಂದ ಪಡೆದಿದ್ದ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದಾಗಿದ್ದು, ಈಗ ಪುನಃ ಬೆಂಗಳೂರು ದಕ್ಷಿಣ ತಹಶೀಲ್ದಾರ್​ಯಿಂದ ಇದೆ ರೀತಿಯ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಈ ಹಿನ್ನಲೆ ಇದು ಸಂಪೂರ್ಣ ಕಾನೂನು ಬಾಹಿರ ಆಗಿದ್ದು, ಮುಂದಿನ ವಿಚಾರಣೆವರೆಗೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಸದಂತೆ ಕೋರ್ಟ್​ ನಿರ್ಬಂಧ ವಿಧಿಸಿತ್ತು. ಅದನ್ನು ಇದೀಗ ಏ.16 ರವರೆಗೆ ವಿಸ್ತರಿಸಿ ನ್ಯಾಯಮೂರ್ತಿ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.

ಇದನ್ನೂ ಓದಿ:ದಾವಣಗೆರೆ ಬಿಜೆಪಿಯಲ್ಲಿನ ಭಿನ್ನಮತ ಶಮನ ಯತ್ನ ವಿಫಲ, ಕೋಪದಿಂದಲೇ ಹೋದ ಶಿಷ್ಯ ರೇಣುಕಾಚಾರ್ಯ

ಇನ್ನು ಪಕ್ಷೇತರವಾಗಿ ಸ್ಪರ್ಧೆಗೆ ಇಳಿದಿರುವ ಎಂ.ಪಿ.ದಾರಕೇಶ್ವರಯ್ಯ ಅವರು, ‘ನಾನು ಚಿತ್ರದುರ್ಗದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರು ನನ್ನ ಮೇಲೆ ವಿಶ್ವಾಸವಿಟ್ಟಿದ್ದು, ಅವರ ಅಪೇಕ್ಷೆಯ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜೊತೆಗೆ 2012 ರಲ್ಲಿಯೇ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಈವರೆಗೂ ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Wed, 10 April 24