ನಾವು ಜೊತೆಗೂಡಿ ಊಟ ಮಾಡುವುದನ್ನೂ ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗುತ್ತಿಲ್ಲ: ಡಾ ಸಿಎನ್ ಅಶ್ವಥ್ ನಾರಾಯಣ

ನಾವು ಜೊತೆಗೂಡಿ ಊಟ ಮಾಡುವುದನ್ನೂ ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗುತ್ತಿಲ್ಲ: ಡಾ ಸಿಎನ್ ಅಶ್ವಥ್ ನಾರಾಯಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 10, 2024 | 4:20 PM

ತಾವೆಲ್ಲ ಒಟ್ಟಿಗೆ ಸೇರಿ ಊಟ ಮಾಡೋದು ಸಹ ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗಿಲ್ಲ. ಅನಾವಶ್ಯಕವಾಗಿ ವಿಷಯವನ್ನು ಹಿಗ್ಗಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಒಂದು ಸರಳ ಔತಣ ಕೂಟಕ್ಕೆ ಅಡಚಣೆ ಉಂಟು ಮಾಡಿದೆ ಎಂದು ಅಶ್ವಥ್ ನಾರಾಯಣ ಹೇಳಿದರು. ತಾವು ಜೊತೆಗೂಡಿ ಊಟ ಮಾಡುವುದು ಕಾಂಗ್ರೆಸ್ ನಾಯಕರಿಗೆ ನೋಡಲಾಗುತ್ತಿಲ್ಲವಲ್ಲ ಅಂತ ಔತಣ ಕೂಟವನ್ನೇ ರದ್ದುಮಾಡಿದ್ದೇವೆ, ಅವರಿಗೆ ಈಗ ಖುಷಿಯಾಗಿರಬಹುದು ಎಂದು ಬಿಜೆಪಿ ಶಾಸಕ ಹೇಳಿದರು.

ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಯುಗಾದಿ ಹೊಸತಡುಕು ಪ್ರಯುಕ್ತ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ತೋಟದ ಮನೆಯಲ್ಲಿ ಊಟಕ್ಕೆ ಸೇರಿದ್ದ ಸಂದರ್ಭವನ್ನು ಕಾಂಗ್ರೆಸ್ ಸರ್ಕಾರ (Congress government) ರೇಡ್ ಮಾಡಿಸುವ ಮೂಲಕ ಹಾಳು ಮಾಡಿದೆ ಎಂದು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಹೇಳಿದರು. ನಗರಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಯುಗಾದಿ ನಾಡಿನ ಸಮಸ್ತ ಜನತೆಗೆ ದೊಡ್ಡ ಹಬ್ಬ, ಅದನ್ನು ಆಚರಿಸಲು ತೋಟದ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಅಲ್ಲಿ ಸೇರಿದ್ದು ಕೇವಲ ಜೆಡಿಎಸ್ ಕಾರ್ಯಕರ್ತರು ಮಾತ್ರ; ಹೊರಗಿನವರು ಯಾರೂ ಇರಲಿಲ್ಲ. ತಾವೆಲ್ಲ ಒಟ್ಟಿಗೆ ಸೇರಿ ಊಟ ಮಾಡೋದು ಸಹ ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗಿಲ್ಲ. ಅನಾವಶ್ಯಕವಾಗಿ ವಿಷಯವನ್ನು ಹಿಗ್ಗಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಒಂದು ಸರಳ ಔತಣ ಕೂಟಕ್ಕೆ ಅಡಚಣೆ ಉಂಟು ಮಾಡಿದೆ ಎಂದು ಅಶ್ವಥ್ ನಾರಾಯಣ ಹೇಳಿದರು. ತಾವು ಜೊತೆಗೂಡಿ ಊಟ ಮಾಡುವುದು ಕಾಂಗ್ರೆಸ್ ನಾಯಕರಿಗೆ ನೋಡಲಾಗುತ್ತಿಲ್ಲವಲ್ಲ ಅಂತ ಔತಣ ಕೂಟವನ್ನೇ ರದ್ದುಮಾಡಿದ್ದೇವೆ, ಅವರಿಗೆ ಈಗ ಖುಷಿಯಾಗಿರಬಹುದು ಎಂದು ಬಿಜೆಪಿ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಿಕೆ ಸಹೋದರರು ಮಾಡುವ ಟೀಕೆಗಳಿಗೆ ಮತದಾರರೇ ಉತ್ತರ ನೀಡಲಿದ್ದಾರೆ: ಡಾ ಸಿಎನ್ ಮಂಜುನಾಥ್