ಬನ್ನೇರುಘಟ್ಟ ಉದ್ಯಾನದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಆನೆ ಸಹ ಸಾವು

|

Updated on: Apr 21, 2023 | 2:03 PM

ನಗರ: ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿನ್ನೆ(ಏ.20) ತಾಯಿ ಆನೆ ಭ್ರೂಣದಲ್ಲೇ ಮರಿಯಾನೆ ಮೃತಪಟ್ಟಿತ್ತು. ಆದರೀಗ ಇಂದು(ಏ.21) ಮಧ್ಯಾಹ್ನ 12:13 ಕ್ಕೆ 47 ವರ್ಷದ ಸುವರ್ಣ ಆನೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

ಬನ್ನೇರುಘಟ್ಟ ಉದ್ಯಾನದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಆನೆ ಸಹ ಸಾವು
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟ ಆನೆ
Follow us on

ಬೆಂಗಳೂರು : ಜಿಲ್ಲೆಯ ಆನೇಕಲ್(Anekal) ತಾಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ(Bannerghatta National Park and Zoo) ನಿನ್ನೆ(.20) ತಾಯಿ ಆನೆ ಭ್ರೂಣದಲ್ಲೇ ಮರಿಯಾನೆ ಮೃತಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಇಂದು(.21) ಮಧ್ಯಾಹ್ನ 12:13 ಕ್ಕೆ 47 ವರ್ಷದ ಸುವರ್ಣ ಆನೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ನಿನ್ನೆ ಭ್ರೂಣದಲ್ಲೇ ಮರಿ ಮೃತಪಟ್ಟಿದ್ದು, ಪ್ರಾಣಿ‌ ಶಸ್ತ್ರ ‌ಚಿಕಿತ್ಸೆ ತಜ್ಞರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿ, ಆಪರೇಶನ್ ಮಾಡುವ ಮೂಲಕ ಮೃತಪಟ್ಟ ಮರಿಯನ್ನ ಪಶುವೈದ್ಯರು ತೆಗೆದಿದ್ದರು. ಆದರೆ ಮರಿ ಮೃತಪಟ್ಟಿದ್ದರಿಂದ ಆನೆ ದೇಹದಲ್ಲಿ ಇನ್ಫೆಕ್ಷನ್ ಹರಡಿಕೊಂಡು ಇದೀಗ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದೆ.

ಸುವರ್ಣ ಅಗಲಿಕೆಗೆ ಪಾರ್ಕ್​ನಲ್ಲಿ ನೀರವ ಮೌನ

ನಿನ್ನೆ ಪ್ರಸವ ವೇದನೆ ಮುಗಿದರೂ ಮರಿ ಜನನ ಆಗದ ಹಿನ್ನೆಲೆ ವೈದ್ಯರು ಆನೆ ಹೊಟ್ಟೆ ತಪಾಸಣೆ ಮಾಡಿದ್ದರು. ಈ ವೇಳೆ ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಸುವರ್ಣ ಜೀವ ಉಳಿಸಲು ವೈದ್ಯರು ಪ್ರಯತ್ನ ಪಟ್ಟಿದ್ದಾರೆ. ಕಳೆದ ರಾತ್ರಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಸುವರ್ಣಳಿಗೆ ಪ್ರಾಣಿ ಶಸ್ತ್ರ ಚಿಕಿತ್ಸೆ ತಜ್ಞರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ತಾಯಿ ಆನೆ ಉಳಿಸಿಕೊಳ್ಳಲು ವೈದ್ಯರು ಶತತ ಪ್ರಯತ್ನ ಮಾಡಿದ್ದರು. ಆನೆಯ ಸ್ಥಿತಿ ಕಂಡು ಪಾರ್ಕ್ ಸಿಬ್ಬಂದಿಗಳು ಕಳವಳಕ್ಕೊಳಗಾಗಿದ್ದರು. ಇದೀಗ ಸುವರ್ಣಳ ಅಗಲಿಕೆಗೆ ಪಾರ್ಕ್​ನಲ್ಲಿ ನೀರವ ಮೌನ ವ್ಯಕ್ತವಾಗಿದೆ.

ಇದನ್ನೂ ಓದಿ:ಮೈಸೂರಿನಲ್ಲಿ ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಆನೆ ಸಾವು

ಅತಿ ಹೆಚ್ಚು ಆನೆ ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣಳನ್ನ ಬನ್ನೇರುಘಟ್ಟ ‌ಬಯಲಾಜಿಕಲ್ ಪಾರ್ಕ್ ಒಳಗಡೆ‌ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಹಲವಾರು ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ದಾಖಲೆ ಆದಾಯ ಗಳಿಸಿದೆ. 2022-23‌ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಒಟ್ಟು 53 ಕೋಟಿ, 89 ಲಕ್ಷ, 75‌ ಸಾವಿರದಷ್ಟು ಆದಾಯವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಗಳಿಸಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ