Bengaluru: ತವರು ಮನೆಗೆ ಹೋದ ಪತ್ನಿಯನ್ನ ಕರೆದುಕೊಂಡ ಬರಲು ಹೋದ ಅಳಿಯನಿಂದ ಅತ್ತೆಗೆ ಚಾಕು ಇರಿತ

ತವರು ಮನೆಗೆ ಹೋದ ಪತ್ನಿಯನ್ನ ಕರೆದುಕೊಂಡ ಬರಲು ಹೋದ ಅಳಿಯನೇ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ.

Bengaluru: ತವರು ಮನೆಗೆ ಹೋದ ಪತ್ನಿಯನ್ನ ಕರೆದುಕೊಂಡ ಬರಲು ಹೋದ ಅಳಿಯನಿಂದ ಅತ್ತೆಗೆ ಚಾಕು ಇರಿತ
ಆರೋಪಿ ಅಳಿಯ

Updated on: Jun 14, 2023 | 9:14 AM

ಬೆಂಗಳೂರು: ಅಳಿಯನೇ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿ(Bengaluru)ನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ. ಆರೋಪಿ ಅಳಿಯ ಮನೋಜ್ ತನ್ನ ಪತ್ನಿ ವರ್ಷಿತಾಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮನನೊಂದು ತವರು ಮನೆಗೆ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕರೆತರಲು ಹೋಗಿದ್ದ ಅಳಿಯ ಮನೋಜ್ ಹೋಗಿದ್ದಾನೆ. ಈ ಸಂದರ್ಭದಲ್ಲಿ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಅಳಿಯ ಮನೋಜ್​ ಅತ್ತೆ ಗೀತಾಗೆ ಚಾಕು ಇರಿದು ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.

ತಮ್ಮನಿಂದಲೇ ಅಣ್ಣನ ಕೊಲೆ ಪ್ರಕರಣ; ಆರೋಪಿ ವಶಕ್ಕೆ

ಬೆಂಗಳೂರು: ನಿನ್ನೆ(ಜೂ.13) ಪುಲಕೇಶಿನಗರದಲ್ಲಿ ನಡೆದಿದ್ದ ತಮ್ಮನಿಂದಲೇ ಅಣ್ಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ವಿಜಯ್ ಎಂಬುವವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತಿದ್ದ ಮೃತ ಕಾರ್ತಿಕ್. ಇದೇ ವಿಚಾರವಾಗಿ ಸಹೋದರನೊಂದಿಗೆ ವಿಜಯ್​ಗೆ ಗಲಾಟೆಯಾಗಿತ್ತು. ಗಲಾಟೆ ಮಧ್ಯೆ ಕಾರ್ತಿಕ್​ ಚಾಕುವಿನಿಂದ ಇರಿದಿದ್ದ. ಸದ್ಯ ಪೊಲೀಸರು ಸಹೋದರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ವಿಜಯಪುರ ಕಾಂಗ್ರೆಸ್ ಜಲಾಂದೋಲನ ಸಮಾವೇಶದಲ್ಲಿ ಇಬ್ಬರಿಗೆ ಚಾಕು ಇರಿತ ಆರೋಪ

ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲೇ‌ ಸಾವು

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ‌ ಸಾವನ್ನಪ್ಪಿದ್ದಾರೆ. ಶಿವು ನಾಯಕ್, ಪರಮೇಶ್ ಮೃತ ದುರ್ದೈವಿಗಳು‌. ಇನ್ನು ಐವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದ್ದು, ಇವರು ಸ್ನೇಹಿತನ ಮದುವೆಗೆ ತೆರಳಿ ವಾಪಸ್ ಕೊರಟಗೆರೆ ಹಾಗೂ ಕೊಡಿಗೇನಹಳ್ಳಿಗೆ ವಾಪಸ್ ಬರುತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ