ಪಟಾಕಿ ಸಿಡಿಸಿ ಸಂಭ್ರಮಿಸಿದಕ್ಕೆ ಗಲಾಟೆ; ರೇಣುಕಾಚಾರ್ಯ ಬೆಂಬಲಿಗರಿಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ
ಹೊನ್ನಾಳಿ ಕ್ಷೇತ್ರದಲ್ಲಿ ಶಾಂತನಗೌಡ ಗೆದ್ದ ಹಿನ್ನೆಲೆ ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತಿತ್ತು. ಈ ವೇಳೆ ಪಟಾಕಿ ಹಚ್ಚಿದ ವಿಚಾರಕ್ಕೆ ಕಾಂಗ್ರೆಸ್-BJP ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ.
ದಾವಣಗೆರೆ: ಚಾಕುವಿನಿಂದ ಇರಿದು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ. ಗಾಯಾಳು ಮಧು(24)ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್, ಪ್ರಕಾಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.
ಹೊನ್ನಾಳಿ ಕ್ಷೇತ್ರದಲ್ಲಿ ಶಾಂತನಗೌಡ ಗೆದ್ದ ಹಿನ್ನೆಲೆ ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತಿತ್ತು. ಈ ವೇಳೆ ಪಟಾಕಿ ಹಚ್ಚಿದ ವಿಚಾರಕ್ಕೆ ಕಾಂಗ್ರೆಸ್-BJP ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಆಗ ಮಾಜಿ ಶಾಸಕ ರೇಣುಕಾಚಾರ್ಯ ಬೆಂಬಲಿಗರು ಹಲ್ಲೆ ನಡೆಸಿದ್ದು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಚಾಕು ಇರಿಯಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು-ಸೋಲು ಕಂಡವರು
ಹೊಸಕೋಟೆ ಅಂಗಳದಲ್ಲಿ ‘ರಕ್ತ ರಾಜಕೀಯ’
ಬೆಂಗಳೂರಿನ ಎಲ್ಲಾ ಕ್ಷೇತ್ರಗಳದ್ದು ಒಂದು ಲೆಕ್ಕವಾದ್ರೆ, ಹೊಸಕೋಟೆ ಲೆಕ್ಕವೇ ಬೇರೆ. ಇಲ್ಲಿ ದಶಕಗಳಿಂದಲೂ ಎಂಟಿಬಿ ಮತ್ತು ಬಚ್ಚೇಗೌಡ ಕುಟುಂಬದ ನಡುವೆ ಪ್ರತಿಷ್ಟೆ ಇದ್ದೇ ಇದೆ. ಈ ಬಾರಿಯೂ ಇಲ್ಲಿ ಇಬ್ಬರ ನಡುವೆ ಬಿಗ್ ಫೈಟ್ ಆಗಿತ್ತು. ಈ ಫೈಟ್‌ನಲ್ಲಿ ಎಂಟಿಬಿ ನಾಗರಾಜ್ ಸೋತಿದ್ರೆ, ಶರತ್ ಬಚ್ಚೇಗೌಡ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ರಿಸಲ್ಟ್ ಬರ್ತಿದ್ದಂತೆ ರಾತ್ರಿ ಇದೇ ವಿಚಾರವಾಗಿ ಹೊಸಕೋಟೆ ತಾಲೂಕಿನ ಡಿ ಶೆಟ್ಟಿಹಳ್ಳಿಯಲ್ಲಿ ಕೃಷ್ಣಪ್ಪ ಹಾಗೂ ಗಣೇಶಪ್ಪ ಅನ್ನೋ ಸಹೋದರರ ನಡುವೆ ಗಲಾಟೆಯಾಗಿತ್ತು. ನೀನು ಪಕ್ಷದಲ್ಲಿ ಇದ್ದುಕೊಂಡೇ ಬಿಜೆಪಿಗೆ ಮೋಸ ಮಾಡಿದ್ದೀ ಅಂತಾ ಎಂಟಿಬಿ ಬೆಂಬಲಿಗ ಕೃಷ್ಣಪ್ಪ ತನ್ನ ಸಹೋದರನನ್ನ ಪ್ರಶ್ನಿಸಿದ್ದ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ಗಣೇಶಪ್ಪನ ಮಗ ಆದಿತ್ಯಾ ಮತ್ತು ಕೆಲವರು ಕೃಷ್ಣಪ್ಪನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ರು. ಕುಡುಗೋಲಿನಿಂದ ಅಟ್ಯಾಕ್ ಮಾಡಿದ್ರು. ಇದ್ರಿಂದ ಗಾಯಗೊಂಡ ಕೃಷ್ಣಪ್ಪನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತಾದ್ರೂ ಬದುಕುಳಿಯಲಿಲ್ಲ.
ಇನ್ನು ಹೋಸಕೋಟೆ ತಾಲೂಕಿನ ಕೊಡಹಳ್ಳಿ ಕುರುಬರಹಳ್ಳಿ, ಶಿವನಾಪುರ, ತಮ್ಮರಸನಹಳ್ಳಿ, ನೆರಗನಹಳ್ಳಿ ಸೇರಿದಂತೆ ಹಲವಡೆ ಶರತ್ ಬಚ್ಚೇಗೌಡ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಾ ಎಂಟಿಬಿ ಬೆಂಬಲಿಗರ ಮನೆಗಳ ಮುಂದೆ ಪಟಾಕಿ ಸಿಡಿಸಿದ್ರು. ಈ ವೇಳೆ ಮನೆ ಕಾಂಪೌಂಡ್ ಒಳಗೆ ಪಟಾಕಿ ಹಾಕಿದ್ರಂತೆ. ಹೀಗಾಗಿ ಮನೆ ಮುಂದೆ ಪಟಾಕಿ ಸಿಡಿಸಬೇಡಿ ಅಂತ ಹೇಳಿದಕ್ಕೆ, ಗಲಾಟೆಯಾಗಿದೆ. ಇದ್ರಿಂದ ಕೆರಳಿದ ಎಂಟಿಬಿ ಬೆಂಬಲಿಗರು ನಂದಗುಡಿ ಪೊಲೀಸ್ ಠಾಣೆ ಮುಂದೆ ಕೃಷ್ಣಪ್ಪನ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ರು.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:31 am, Mon, 15 May 23