ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಫೈಟ್: ಪ್ರಿಯಾಂಕ್ ಖರ್ಗೆ ಕೂಗು ಬೆನ್ನಲ್ಲೇ ತೇಲಿಬಂತು ತಂದೆಯ ಹೆಸರು, ಪೋಸ್ಟರ್ಸ್ ವೈರಲ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಲಿ, ಖರ್ಗೆ ಸಿಎಂ ಆಗಲು ಎಲ್ಲರೂ ಬೆಂಬಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖರ್ಗೆ ಪರ ಕ್ಯಾಂಪೇನ್ಗಳು ಹೆಚ್ಚಾಗಿವೆ.
ಕಲಬುರಗಿ: ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ(Karnataka Assembly Elections 2023) ಮತದಾನದಂದು ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷಕ್ಕೆ ವೊಟ್ ಹಾಕಿ ಬಹುಮತದಿಂದ ಗೆಲ್ಲಿಸಿದೆ. ಬಿಜೆಪಿಗೆ ಮುಖಭಂಗವಾಗುವಂತೆ 136 ಸೀಟ್ಗಳನ್ನು ಗೆದ್ದಿರುವ ಕಾಂಗ್ರೆಸ್ ಪಾಳೆಯದಲ್ಲೀಗ ಸಿಎಂ ಯಾರಾಗ್ತಾರೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆ ಶಿವಕುಮಾರ್(DK Shivakumar) ನಡುವೆ ಸಿಎಂ ಕುರ್ಚಿಗಾಗಿ ಮಲ್ಲಯುದ್ಧವೇ ನಡೆಯುತ್ತಿದ್ದು ಮತ್ತೊಂದೆಡೆ ಪ್ರಿಯಾಂಕ್ ಖರ್ಗೆ(Priyank Kharge) ಸಿಎಂ ಆಗಬೇಕು ಎನ್ನುವ ಅಭಿಯಾನಗಳು ನಡೆಯುತ್ತಿವೆ. ಈಗ ಮತ್ತೊಂದು ಬೆಳವಣಿಗೆ ಎಂಬಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರು ಸಿಎಂ ಆಗಲಿ ಎಂಬ ಕ್ಯಾಂಪೇನ್ ಶುರುವಾಗಿದೆ.
ಹೌದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಲಿ, ಖರ್ಗೆ ಸಿಎಂ ಆಗಲು ಎಲ್ಲರೂ ಬೆಂಬಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖರ್ಗೆ ಪರ ಕ್ಯಾಂಪೇನ್ಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ತಮ್ಮ ಆಗ್ರಹ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತರಾಗಿರೋ ಮಲ್ಲಿಕಾರ್ಜುನ ಖರ್ಗೆ ಅವರು ಸದ್ಯ ತಾನು ಸಿಎಂ ರೇಸ್ನಲ್ಲಿ ಇಲ್ಲಾ ಅಂತ ಹೇಳಿದ್ದಾರೆ. ಆದ್ರೂ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಅಂತ ಖರ್ಗೆ ಬೆಂಬಲಿಗರು ಬಯಸುತ್ತಿದ್ದಾರೆ.
ಇದನ್ನೂ ಓದಿ: ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್
ಹೆಚ್ಚಾದ ದಲಿತ ಸಿಎಂ ಕೂಗು
ಡಿಕೆ ಶಿವಕುಮಾರ್ ಪರ ಒಕ್ಕಲಿಗ ಮುಖಂಡರು, ಮಠಾಧೀಶರು ಬೆಂಬಲ ಸೂಚಿಸಿದ್ರೆ, ಸಿದ್ದರಾಮಯ್ಯ ಪರ ಕುರುಬ ಸಮುದಾಯ ಬ್ಯಾಟ್ ಬೀಸಿದೆ. ಈ ಮಧ್ಯೆ ದಲಿತ ಸಿಎಂ ಕೂಗು ಜೋರಾಗಿದೆ. ಇತ್ತೀಚೆಗೆ ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಚಿತ್ತಾರಪುರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಿಯಾಂಕ್ ಖರ್ಗೆಯವರಿಗೆ ಮುಖ್ಯಮಂತ್ರಿ ಮಾಡಬೇಕೆಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದರು. ಅಪ್ಪನ ಕನಸಲ್ಲೆ ಕೋಟ್ಯಂತರ ಕನ್ನಡಿಗರ ಕನಸು, ಅನ್ನೋ ಪೋಸ್ಟರ್ಗಳು ವೈರಲ್ ಆಗಿದ್ದವು. ಆದ್ರೆ ಈಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಜಾರಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:15 am, Mon, 15 May 23