AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಬ್ರಿಟನ್‌ಗಿಂತಲೂ ದುಬಾರಿಯಾಯಿತೇ ಬೆಂಗಳೂರು? ಒಬ್ಬರ ಸಂಬಳಕ್ಕೆ ವಿದೇಶದಲ್ಲಿ ಮನೆ ಸಿಗುತ್ತೆ, ಇಲ್ಲಿ ಇಬ್ಬರದ್ದೂ ಸಾಲಲ್ಲ!

ಬೆಂಗಳೂರಿನಲ್ಲಿ ಇಬ್ಬರ ಸಂಬಳವಿದ್ದರೂ ಮನೆ ಕೊಳ್ಳಲಾಗದ ಮಹಿಳೆಯೊಬ್ಬರು UK ನಲ್ಲಿ ಕೇವಲ ಎರಡು ವರ್ಷದಲ್ಲಿ, ಒಬ್ಬರ ಸಂಬಳದಲ್ಲಿ ಸ್ವಂತ ಮನೆ ಖರೀದಿಸಿದ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ದುಬಾರಿ ರಿಯಲ್ ಎಸ್ಟೇಟ್, ಕಪ್ಪು ಹಣದ ಬೇಡಿಕೆ ಮತ್ತು ಪಾರದರ್ಶಕತೆ ಕೊರತೆ ಬಗ್ಗೆ ಈ ಪೋಸ್ಟ್ ಬೆಳಕು ಚೆಲ್ಲಿದೆ. ಮಧ್ಯಮ ವರ್ಗದ ಐಟಿ ಉದ್ಯೋಗಿಗಳಿಗೆ ಬೆಂಗಳೂರಿನಲ್ಲಿ ಮನೆ ಹೊಂದುವುದು ಸವಾಲಾಗಿದೆ ಎಂಬ ವಾಸ್ತವವನ್ನು ಇದು ಬಿಚ್ಚಿಟ್ಟಿದೆ.

ಬ್ರಿಟನ್‌ಗಿಂತಲೂ ದುಬಾರಿಯಾಯಿತೇ ಬೆಂಗಳೂರು? ಒಬ್ಬರ ಸಂಬಳಕ್ಕೆ ವಿದೇಶದಲ್ಲಿ ಮನೆ ಸಿಗುತ್ತೆ, ಇಲ್ಲಿ ಇಬ್ಬರದ್ದೂ ಸಾಲಲ್ಲ!
The Reality Of Bengaluru Real Estate
ಅಕ್ಷಯ್​ ಪಲ್ಲಮಜಲು​​
|

Updated on: May 15, 2026 | 4:04 PM

Share

ಬೆಂಗಳೂರು, ಮೇ,15: ಭಾರತದ ಐಟಿ ಹಬ್ ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಎಷ್ಟು ಕಷ್ಟ ಎಂಬ ಬಗ್ಗೆ ಮಹಿಳೆಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಇಬ್ಬರ ಸಂಬಳವಿದ್ದರೂ ಮನೆ ಖರೀದಿಸಲು ಸಾಧ್ಯವಾಗದ ಮಹಿಳೆ, ಯುಕೆ (UK) ಗೆ ತೆರಳಿದ ಕೇವಲ ಎರಡು ವರ್ಷದಲ್ಲಿ ಅಲ್ಲಿ ಸ್ವಂತ ಮನೆ ಖರೀದಿಸಿರುವುದಾಗಿ ತಿಳಿಸಿದ್ದಾರೆ.

“ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾವು ಇಬ್ಬರು ದುಡಿಯುತ್ತಿದ್ದರೂ ಒಂದು ಫ್ಲಾಟ್ ಖರೀದಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಬೆಂಗಳೂರಿನಲ್ಲಿ ನಮ್ಮಿಂದ ಮನೆ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಪ್ಲಾನ್​​ನ್ನು ಕೈಬಿಟ್ಟೆವು” ಎಂದು ಎಂದು ನೇಹಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆದರೆ ಬ್ರಿಟನ್‌ಗೆ ತೆರಳಿದ ಎರಡೇ ವರ್ಷಗಳಲ್ಲಿ, ಕೇವಲ ಒಬ್ಬರ ಸಂಬಳದಲ್ಲಿ ಮೂರು ಬೆಡ್‌ರೂಂನ ಸ್ವತಂತ್ರ ಮನೆ ಖರೀದಿಸಿರುವುದಾಗಿ ಅವರು ಹೇಳಿದ್ದಾರೆ. ಇದರಲ್ಲಿ ಎಲ್ಲಾ ಆಧುನಿಕ ಗೃಹೋಪಕರಣಗಳು, ಪಾರ್ಕಿಂಗ್ ಮತ್ತು ಸುಂದರವಾದ ವ್ಯೂ (View) ಕೂಡ ಇದೆ ಎಂದು ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಭಾರತದ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಾಗಿ ಕಂಡುಬರುವ ‘ಬ್ಲ್ಯಾಕ್ ಮನಿ’ (ಕಪ್ಪು ಹಣ) ಬೇಡಿಕೆ ಅಲ್ಲಿಲ್ಲ. 100% ಪಾರದರ್ಶಕತೆ ಮತ್ತು ಮೊದಲ ಬಾರಿ ಮನೆ ಖರೀದಿಸುವವರಿಗೆ ಸಿಗುವ ವಿಶೇಷ ರಿಯಾಯಿತಿಗಳು ಅಲ್ಲಿನ ವ್ಯವಸ್ಥೆಯನ್ನು ಸುಲಭಗೊಳಿಸಿವೆ ಎಂದು ಅವರು ಹೊಗಳಿದ್ದಾರೆ.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಈ ಪೋಸ್ಟ್ ಸುಮಾರು 4.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಅನೇಕರು ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಲ್ಲಿ ಬಿಸಿನೆಸ್‌ಮನ್‌ಗಳು ಮತ್ತು ಅಧಿಕಾರಿಗಳ ಬಳಿ ಹಣವಿರಬಹುದು, ಆದರೆ ಮಧ್ಯಮ ವರ್ಗದ ಐಟಿ ಉದ್ಯೋಗಿಗಳಿಗೆ ಮನೆ ಖರೀದಿಸುವುದು ಇಂದಿಗೂ ಸವಾಲೇ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA