ಅಮಾನತ್ತಾಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2022 | 4:57 PM

ಸಸ್ಪೆಂಡ್ ಆಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R​.ಪುರ ಠಾಣೆ ನಂದೀಶ್​ ಮೃತ ಇನ್ಸ್​ಪೆಕ್ಟರ್.

ಅಮಾನತ್ತಾಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ ಸಾವು
ಇನ್ಸ್​ಪೆಕ್ಟರ್​ ನಂದೀಶ್​
Follow us on

ಬೆಂಗಳೂರು: ಸಸ್ಪೆಂಡ್ (suspend) ಆಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ (heart attack) ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R​.ಪುರ ಠಾಣೆ ಇನ್ಸ್​ಪೆಕ್ಟರ್​ ನಂದೀಶ್​ ಮೃತ ಇನ್ಸ್​ಪೆಕ್ಟರ್. ಹೃದಯಾಘಾತದಿಂದ ಕೆ.ಆರ್​.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಂದೀಶ್‌ ಮೈಸೂರಿನ ಹುಣಸೂರು ಮೂಲದವರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ವಾರವಷ್ಟೇ ಇನ್ಸ್​ಪೆಕ್ಟರ್​ ನಂದೀಶ್ ಸಸ್ಪೆಂಡ್​ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್​ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.

ವ್ಯಕ್ತಿಯೋರ್ವನ ಗಮನ ಬೇರೆಡೆ ಸೆಳೆದು ₹7 ಲಕ್ಷ ರೂ. ದರೋಡೆ

ರಾಯಚೂರು: ವ್ಯಕ್ತಿಯೋರ್ವನ ಗಮನ ಬೇರೆಡೆ ಸೆಳೆದು ₹7 ಲಕ್ಷ ರೂ. ದರೋಡೆ ಮಾಡಿರುವಂತಹ ಘಟನೆ ಮಾನ್ವಿ ಪಟ್ಟಣದ ಬ್ಯಾಂಕ್​ ಆಫ್​​ ಬರೋಡಾ ಶಾಖೆ ಬಳಿ ನಡೆದಿದೆ. ಖಾಜಾ ಹುಸೇನ್ ಎಂಬುವವರ 7 ಲಕ್ಷ ರೂ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್​ನಲ್ಲಿ ಹಣ ಬಿಡಿಸಿಕೊಳ್ಳುವುದನ್ನು ಕಿಡಿಗೇಡಿಗಳು ಗಮನಿಸಿದ್ದು, ಬ್ಯಾಂಕ್ ಹೊರಗೆ ಹುಸೇನ್ ಬಳಿ ಇದ್ದ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಬಳಿಕ ಆರೋಪಿಗಳನ್ನು ಚೇಸ್ ಮಾಡಿ ಹಿಡಿಯಲು ಯುವಕರು ಯತ್ನಿಸಿದ್ದಾರೆ. ಆದರೆ ಕಿಡಿಗೇಡಿಗಳ ಬಳಿ ಇದ್ದ ಮಾರಕಾಸ್ತ್ರ ನೋಡಿ ಸುಮ್ಮನಾಗಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪತಿ ನೇಣಿಗೆ ಶರಣು

ಮಂಗಳೂರು: ಪತ್ನಿಯ ಕತ್ತು ಹಿಸುಕಿ ಕೊಂದು ಪತಿ ನೇಣಿಗೆ ಶರಣಾಗಿರುವಂತಹ ಘಟನೆ ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ನಡೆದಿದೆ. ಪಿಲಾರು ನಿವಾಸಿ ಶೋಭಾ ಪೂಜಾರಿ(45) ಕೊಲೆಯಾದ ಮಹಿಳೆ. ಶಿವಾನಂದ(55) ನೇಣಿಗೆ ಶರಣಾದ ಪತಿ. ಪೈಂಟರ್ ಕೆಲಸ ಮಾಡುತ್ತಿದ್ದ ಶಿವಾನಂದಗೆ ಪತ್ನಿ ‌ಮೇಲೆ ಸಂಶಯ ಎನ್ನಲಾಗಿದೆ. ಅನೇಕ ಬಾರಿ ಸಂಶಯ ಪಟ್ಟು ಪತ್ನಿ ಜೊತೆ ಜಗಳ ಮಾಡಿದ್ದ. ದಂಪತಿಗೆ ವಿವಾಹಿತ ಮಗಳು ಮತ್ತು ಒಬ್ಬ ಪುತ್ರ ಇದ್ದಾನೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರೈಲುಗಳಲ್ಲಿ ಸರ ಕಳ್ಳತನ ಮಾಡುತ್ತಿದ್ದವ ಅರೆಸ್ಟ್

ಮದ್ಯಪಾನದ ಚಟ, ಡ್ರಗ್ಸ್ ಖರೀದಿಗೆ ರೈಲುಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಗಾರಪೇಟೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಿಟಕಿ ಪಕ್ಕ ಕುಳಿತಿರುವವರನ್ನೇ ಟಾರ್ಗೆಟ್ ಮಾಡಿ ಈ ಕಳ್ಳರು ಸರಗಳ್ಳತನ ಮಾಡುತ್ತಿದ್ದರು. ಮನೋಜ್ ಹಾಗೂ ದರ್ಶನ್ ಬಂಧಿತ ಆರೋಪಿಗಳು. ಮೆಮೂ ರೈಲುಗಳಲ್ಲಿ ರಾತ್ರಿ ವೇಳೆ ಹೊಂಚು ಹಾಕಿ ಕುಳಿತಿರುತ್ತಿದ್ದ ಆರೋಪಿಗಳು, ಪ್ಲಾಟ್ ಫಾರಂಗೆ ಬರುವ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕಿಟಕಿ ಪಕ್ಕ ಇರುವವರಿಂದ ಸರ ಎಗರಿಸುತ್ತಿದ್ದರು. ಕಿಟಕಿ‌ ಒಳಗೆ ಕೈ ಹಾಕಿ ಪ್ರಯಾಣಿಕರ ಕತ್ತಿನಲ್ಲಿ ಚಿನ್ನದ ಸರ ಎಗರಿಸುತ್ತಿದ್ದರು. ಚೆನ್ನೈ- ಬೆಂಗಳೂರು ಮೇಲ್, ತಿರುಪತಿ- ಚಾಮರಾಜನಗರ ಎಕ್ಸ್‌ಪ್ರೆಸ್‌ ನಲ್ಲಿ ಸರಗಳ್ಳತನ ಮಾಡಿದ್ದಾರೆ. ಬಂಧಿತರಿಂದ 51 ಸಾವಿರ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:44 pm, Thu, 27 October 22