AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ನಟಿಯ ಅರೆನಗ್ನ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡಿದ್ದವ ಮೇಕಪ್ ಮ್ಯಾನ್

ಆನ್ಲೈನ್ ಯುಗದಲ್ಲಿ ಎಲ್ಲವೂ ಆನ್ಲೈನ್, ಇಲ್ಲಿ ಅಪರಿಚಿತರ ಸ್ನೇಹ, ವಿಡಿಯೋ ಕಾಲ್ ಹಾಗು ಲೈವ್ ಸ್ಟ್ರೀಮಿಂಗ್ ಮಾಡೊದು, ಜೊತೆಗೆ ಒಂದಷ್ಟು ಹಣ ಮಾಡೋ ಮೊಂಡು ಧೈರ್ಯ ಮಾಡುವುದು ಈಗ ಹೊಸದಾಗಿ ಶುರುವಾದ ಟ್ರೆಂಡ್. ಈಗ ಈ ಲೀಸ್ಟ್ ನಲ್ಲಿ ಇರುವ ಟ್ಯಾಂಗೋ ಅನ್ನೊ ಆಪ್ ನಲ್ಲಿ ಲೈವ್ ಡ್ಯಾನ್ಸ್ ಮಾಡಿ , ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ತಗಲಾಕಿಕೊಂಡಿದ್ದಾರೆ.

ಬೆಂಗಳೂರು: ನಟಿಯ ಅರೆನಗ್ನ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡಿದ್ದವ ಮೇಕಪ್ ಮ್ಯಾನ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 27, 2022 | 3:54 PM

Share

ಬೆಂಗಳೂರು: ಈಗ ಸೋಶಿಯಲ್ ಮೀಡಿಯಾ ಅಂದ್ರೆ ಕೇವಲ ಒಂದೆರಡು ಆಪ್ ಗಳಾಗಿ ಉಳಿದಿಲ್ಲ.ನಾಯಿ ಕೊಡೆಗಳಂತೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವಾರು ಸೋಶಿಯಲ್ ಮೀಡಿಯಾ ಆಪ್ ಗಳು ಇದ್ದಾವೆ. ಇದರಲ್ಲಿ ಒಂದಷ್ಟು ಫಾಲೋವರ್ಸ್ ಅಥವಾ subscribers ಗಳನ್ನು ಹೊಂದಿದ್ದೆ ಅಲ್ಲಿ ಹಣ ಮಾಡ್ಬಹುದು ಎನ್ನುವುದು ಈ ಆಪ್ ಗಳ ಲೆಕ್ಕಾಚಾರ. ಹೀಗಾಗಿ ಒಂದಷ್ಟು ಟಿಕ್​ ಟಾಕ್​ ಸ್ಟಾರ್​ಗಳು ಹಾಗೂ ನಟಿಯರು ಲೈವ್​ ಸ್ಟ್ರೀಮಿಂಗ್​​ ಆ್ಯಪ್​ಗಳಲ್ಲಿ ಅರೆ ನಗ್ನ ಹಾಗೂ ನಗ್ನವಾಗಿ ಕಾಣಿಸಿಕೊಳ್ತಿದ್ದಾರೆ.

ಕೆಲ ಟಿಕ್​ಟಾಕ್ ಸ್ಟಾರ್ಸ್ ಮತ್ತು ನಟಿಯರು ಲೈವ್​ ಸ್ಟ್ರೀಮಿಂಗ್​​ ಆ್ಯಪ್​ಗಳಲ್ಲಿ ಅರೆನಗ್ನ ಹಾಗೂ ನಗ್ನವಾಗಿ ಕಾಣಿಸಿಕೊಂಡು ಹಣ ಪಡೀತಿದ್ದಾರೆ. ಹೀಗೆ ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ಟ್ಯಾಂಗೊ ಎಂಬ ಆ್ಯಪ್​ನಲ್ಲಿ ತನ್ನ ಖಾತೆ ತೆರೆದು ಅರೆನಗ್ನ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಂಡಿದ್ದ ಓರ್ವ ನಟಿಗೆ ಅದನ್ನ ಕಳಿಸಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದೆ ಹೋದರೆ, ಅವುಗಳನ್ನು ಫೇಸ್ ಬುಕ್ ನಲ್ಲಿ ಹಾಗೂ ವಾಟ್ಸಪ್​​ ಮೂಲಕ ಕುಟುಂಬಕ್ಕೆ ಕಳಿಸುವುದಾಗಿ ಬ್ಲಾಕ್​ ಮೇಲ್​ ಮಾಡ್ತಿದ್ದ. ಈ ಸಂಬಂಧ ಆ ನಟಿ ಈಶಾನ್ಯ ವಿಭಾಗದ ಸೆನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ತನಿಖೆ ನಡೆಸಿದ ಪೊಲೀಸ್ರು ಭುವನೇಶ್ವರಿ ನಗರದ ನಿವಾಸಿಯಾಗಿರುವ ಮೇಕಪ್​ಮ್ಯಾನ್ ಮಹಾಂತೇಶ್​ನನ್ನ ಬಂಧಿಸಿದ್ದಾರೆ. ಅಷ್ಟಕ್ಕೂ ಆರೋಪಿ ನಟಿಗೆ ಸಂಬಂಧಿಯೇ ಆಗಬೇಕು ಆಗ ಮೇಕಪ್​ ಕೂಡ ಮಾಡಿದ್ದ ಅನ್ನೋದು ಗೊತ್ತಾಗಿದೆ.

ಸಿ.ಡಿ.ಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಶಂಕೆ: ಡೆತ್ ನೋಟ್ ನಲ್ಲಿ 5 ಪುಟ ಮಿಸ್ಸಿಂಗ್! ಆ ವಿಡಿಯೋಗಳ ಕಾಟ ಏನು?

ಬ್ಲಾಕ್ ಮೇಲ್ ಮಾಡಿದ್ದವ ನಟಿಯ ಮೇಕಪ್ ಮ್ಯಾನ್…!

ಇಲ್ಲಿ ಯಾರು ನಂಬಿಕಸ್ಥರೋ ಅವರೆ ಮೋಸಗಾರರು, ಯಾಕಂದ್ರೆ ಮಹಾಂತೇಶ. ಭುವನೇಶ್ವರಿ ನಗರದ ನಿವಾಸಿಯಾಗಿರುವ ಈತ ಈಗ ಬ್ಲಾಕ್​ ಮೇಲ್ ಗೆ ಒಳಗಾಗಿದ್ದ ನಟಿಯ ಮೇಕಪ್​ ಮ್ಯಾನ್​. ನಟಿ ದೂರು ನೀಡುವ ಹಿಂದೆ ಬಹಳ ಸಮಯದಿಂದ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡ್ತಿದ್ದ. ಅಷ್ಟೇ ಅಲ್ಲ ಆಕೆಯ ಹತ್ತಿರದ ಸಂಬಂಧಿಯೂ ಅಗಿದ್ದ, ಹೀಗಾಗಿ . ಈ ಸಲಿಗೆಯಿಂದಲೇ ನಟಿಯ ಬಗ್ಗೆ ಈತನಿಗೆ ತುಂಬಾ ಮಾಹಿತಿ ಇತ್ತು. ಹೀಗಾಗಿ ಆಕೆಯ ಮೊಬೈಲ್ ಸಹ ಇವನ ಹತ್ತಿರ ಇರ್ತಿತ್ತು. ಇದರಿಂದ ನಟಿ ಲೈವ್​ ಸ್ಟ್ರೀಮಿಂಗ್​ ಆ್ಯಪ್​ನಲ್ಲಿ ಖಾತೆ ಹೊಂದಿರುವ ವಿಷಯ ಹಾಗೂ ಈ ಖಾತೆಯ ಬಗ್ಗೆ ಮನೆಯವರಿಗೆ ಮಾಹಿತಿ ಇಲ್ಲ ಅನ್ನೋದನ್ನೂ ತಿಳಿದುಕೊಂಡಿದ್ದ.

ಜೊತೆಗೆ ಆಕೆಯ ಖಾತೆಯ ಹೆಸರನ್ನು ತಿಳಿದುಕೊಂಡು ಅದರಲ್ಲಿ ಬರುವ ಆಕೆಯ ಅರೆ ನಗ್ನ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಂಡಿದ್ದ. ನಂತರ ಅವುಗಳನ್ನ ಇಟ್ಟುಕೊಂಡು ಬ್ಲಾಕ್​ ಮೇಲ್​ ಮಾಡಲು ಹೊಸ ನಂಬರ್​ ಖರೀದಿಸಿದ್ದ. ನಂತರ ವಾಟ್ಸಪ್​ ಮೂಲಕ ವಿಡಿಯೋ ಹಾಗೂ ಅರೆ ನಗ್ನ ಫೋಟೋ ಕಳುಹಿಸಿ 30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹೊಸ ನಂಬರ್​ನಿಂದ ಬಂದ ಮೆಸೇಜ್​ ಹಾಗೂ ವಿಡಿಯೋ ನೋಡಿ ಗಾಬರಿಗೊಂಡ ನಟಿ ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಕರಣದ ತನಿಖೆ ಆರಂಭಿಸಿದ ಸೆನ್​ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಜೊತೆಗೆ ಆರೋಪಿಯ ಮೊಬೈಲ್​ ಹಾಗೂ ಸಿಮ್​ ಕಾರ್ಡ್​ ಅನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ಬಂಧನದ ನಂತರ ಆತ ತನ್ನ ಸಂಬಂಧಿಯಾಗಿದ್ದ ಮೇಕಪ್​ ಮ್ಯಾನ್​ ಅನ್ನೋದು ನಟಿಗೆ ಗೊತ್ತಾಗಿದೆ. ಹಣ ಸಿಗತ್ತೆ ಅಂತ ಟ್ಯಾಂಗೋ ಆಪ್ ನಲ್ಲಿ ಕುಣಿಯುತ್ತಿದ್ದ ನಟಿಗೆ ಈಗ ಶಾಕ್ ಅಗಿದೆ.

ವರದಿ : ಪ್ರಜ್ವಲ್ ಟಿವಿ9