ಸಿ.ಡಿ.ಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಶಂಕೆ: ಡೆತ್ ನೋಟ್ ನಲ್ಲಿ 5 ಪುಟ ಮಿಸ್ಸಿಂಗ್! ಆ ವಿಡಿಯೋಗಳ ಕಾಟ ಏನು?

Kanchugal Bandemutt Basavalinga Swamiji: ಬೆಂಗಳೂರು ಮೂಲದ ಮಹಿಳೆಯನ್ನ ಬಳಸಿ ಹನಿಟ್ರ್ಯಾಪ್ ಮಾಡಲಾಗಿದೆ. ಕಷ್ಟ ಹೇಳಿಕೊಂಡು ಸ್ನೇಹ ಬೆಳೆಸಿದ್ದ ಆ ಮಹಿಳೆ, ಸ್ನೇಹದ ಬಳಿಕ ಸ್ವಾಮೀಜಿಯೊಂದಿಗೆ ಅನ್ಯೋನ್ಯತೆ ಬೆಳೆಸಿದ್ದಳು. ಬಸವಲಿಂಗ ಸ್ವಾಮೀಜಿ ಮಹಿಳೆಯ ಮಾತಿಗೆ ಮರುಳಾಗಿದ್ದರು. ಸಿ.ಡಿ.ಗಳಿಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ.

ಸಿ.ಡಿ.ಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಶಂಕೆ: ಡೆತ್ ನೋಟ್ ನಲ್ಲಿ 5 ಪುಟ ಮಿಸ್ಸಿಂಗ್! ಆ ವಿಡಿಯೋಗಳ ಕಾಟ ಏನು?
ಸಿ.ಡಿ.ಗಳಿಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಶಂಕೆ:
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 26, 2022 | 12:21 PM

ರಾಮನಗರ: ಕಂಚುಗಲ್ ಬಂಡೇಮಠದ ಬಸವಲಿಂಗಶ್ರೀ ‌ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ (Kanchugal Bandemutt Basavalinga Swamiji Suicide) ಸ್ವಾಮೀಜಿ ಬರೆದಿಟ್ಟಿರುವ ಡೆತ್ ನೋಟ್ ಸಂಪೂರ್ಣ ಮಾಹಿತಿ ಟಿವಿ9 ಗೆ ದೊರೆತಿದೆ. ಆರಂಭಕ್ಕೆ ಸ್ಥೂಲವಾಗಿ ಹೇಳಬೇಕು ಅಂದರೆ ಅಸಲಿಗೆ ಪೊಲೀಸರಿಗೆ ಸಿಕ್ಕಿದ್ದು ಮೂರು‌ ಪುಟ. ದೂರಿನಲ್ಲಿ ಎರಡು ಪುಟ ಎಂದು ನಮೂದು ಮಾಡಿದರು. ಆದರೆ ಸ್ವಾಮೀಜಿ ಬರೆದಿದ್ದು (Suicide Death Note) ಎಂಟು ಪುಟಗಳು ಎನ್ನಲಾಗಿದೆ! ಉಳಿದ ಐದು ಪುಟಗಳು ಮಿಸ್ಸಿಂಗ್ ಆಗಿವೆ. ಆದರೆ ಅದೊಬ್ಬನ ಕೈ ಸೇರಿದೆಯಂತೆ ಉಳಿದ ಐದು ಪುಟಗಳು ಆ ಐದು ಪುಟಗಳಲ್ಲಿ ಇದೆ ಮಹತ್ವದ, ಮತ್ತಷ್ಟು ಸ್ಫೋಟಕ ಸತ್ಯಗಳು.

ಇನ್ನು, ಬಸವಲಿಂಗಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬಂಡೇಮಠದ ಕಡೆಯಿಂದ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ರಾಮನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Ramnagara SP) ಸಂತೋಷ್ ಬಾಬು ಟಿವಿ9 ಗೆ ಹೇಳಿಕೆ ನೀಡಿದ್ದು, ಆತ್ಮಹತ್ಯೆ ಸ್ಥಳದಲ್ಲಿ 3 ಪುಟಗಳ ಡೆತ್​ನೋಟ್​​ ಪತ್ತೆಯಾಗಿದೆ. ಡೆತ್​ನೋಟ್​ನಲ್ಲಿ ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಡೆತ್​ನೋಟ್​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ ಆಗಿದೆ. ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಬಹಿರಂಗಪಡಿಸಲ್ಲ. ಶ್ರೀಗಳು ಬಳಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಎರಡೂ ಮೊಬೈಲ್​ಗಳು ಕೂಡ ಲಾಕ್ ಆಗಿವೆ. ನಮಗೆ ಸಿಕ್ಕ ಡೆತ್​ನೋಟ್, ವೈರಲ್​ ಆದ ಫೋಟೋಗೂ ವ್ಯತ್ಯಾಸವಿದೆ. ಡೆತ್​ನೋಟ್​ ಸಿಕ್ಕಿ ನಮ್ಮ ಗಮನಕ್ಕೆ ತರದಿದ್ರೆ ಕೇಸ್​ ಹಾಕ್ತೇವೆ. ಡೆತ್​ನೋಟ್​, ಮೊಬೈಲ್ ಫೋನ್​ FSLಗೆ ಕಳುಹಿಸಲಾಗುವುದು. ಮಠದ ಮೇಲೆ ಯಾರೂ ಸಂಶಯ ವ್ಯಕ್ತಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.

ಶ್ರೀಗಳಿಗೆ ಇದ್ದ ಬೆದರಿಕೆ ಕರೆಗಳ ಬಗ್ಗೆ ಜನರು ಮಾತಾಡ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಸ್ವಾಮೀಜಿ ವಿಡಿಯೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ರಾಮನಗರದಲ್ಲಿ ಎಸ್​ಪಿ ಸಂತೋಷ್ ಬಾಬು ಹೇಳಿದ್ದಾರೆ.

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಿಕ್ಕಿತಾ ಮೆಗಾ ಟ್ವಿಸ್ಟ್?

ಬಂಡೆಮಠದ ಬಸವಲಿಂಗ ಶ್ರೀ ಹನಿಟ್ರ್ಯಾಪ್​ಗೆ ಬಲಿಯಾದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಸಿ.ಡಿ.ಗಳಿಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಸಮಾಜದ ಮುಖಂಡನಿಂದಲೇ ಶ್ರೀಗಳ ವಿರುದ್ಧ ಮಸಲತ್ತು ನಡೆದಿತ್ತಾ? ಬೆಂಗಳೂರು ಮೂಲದ ಮಹಿಳೆಯನ್ನ ಬಳಸಿ ಹನಿಟ್ರ್ಯಾಪ್ ಮಾಡಲಾಗಿದೆಯಾ? ಕಷ್ಟ ಹೇಳಿಕೊಂಡು ಸ್ವಾಮೀಜಿ ಸ್ನೇಹ ಬೆಳೆಸಿದ್ದ ಆ ಮಹಿಳೆ, ಸ್ನೇಹದ ಬಳಿಕ ಸ್ವಾಮೀಜಿಯೊಂದಿಗೆ ಅನ್ಯೋನ್ಯತೆ ಬೆಳೆಸಿದ್ದಳು. ಬಸವಲಿಂಗ ಸ್ವಾಮೀಜಿ ಮಹಿಳೆಯ ಮಾತಿಗೆ ಮರುಳಾಗಿದ್ದರು. ಹಲವು ಬಾರಿ ಸ್ವಾಮೀಜಿ ಜೊತೆ ಮಹಿಳೆ ವಿಡಿಯೋ ಕಾಲ್ ಮಾಡಿದ್ದಾಳೆ. ಅದನ್ನು ವಿಡಿಯೋ ರೆಕಾರ್ಡಿಂಗ್ ಸಹ ಮಾಡಿಕೊಂಡಿದ್ದಾಳೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಒಂದಲ್ಲ.. ಎರಡಲ್ಲ ಆರು ತಿಂಗಳಿನಿಂದ ನಡೆದಿತ್ತು ಸಂಚು

ಸ್ವಾಮೀಜಿಯನ್ನ ಖೆಡ್ಡಾಗೆ ಕೆಡವಲು ಮಹಾ ಮಸಲತ್ತು ನಡೆದಿತ್ತು. ಒಂದಲ್ಲ.. ಎರಡಲ್ಲ ಆರು ತಿಂಗಳಿನಿಂದ ನಡೆದಿತ್ತು ಆ ಮಹಾ ಸಂಚು. 10 ದಿನಗಳ ಹಿಂದೆ ಸಿ.ಡಿ ಇರುವ ಬಗ್ಗೆ ಶ್ರೀಗಳ ಗಮನಕ್ಕೆ ತರಲಾಗಿತ್ತು/. ಸಿ.ಡಿ ಇರುವ ಬಗ್ಗೆ ಆ ಮುಖಂಡ ಶ್ರೀಗಳ ಬಳಿ ಪ್ರಸ್ತಾಪಿಸಿದ್ದನಂತೆ. ಸಮಾಜದ ಆ ಮುಖಂಡನೇ ಸಿ.ಡಿ ಇರುವ ಬಗ್ಗೆ ಹೇಳಿದ್ದನಂತೆ. ಸ್ವಾಮೀಜಿಯ ಅಪ್ತರು ಮತ್ತು ಭಕ್ತರಿಗೆ ಸಿ.ಡಿ ಬಗ್ಗೆ ತಿಳಿಸಿದ್ದನಂತೆ ಆ ಮುಖಂಡ. ಸದರಿ ಸಿ.ಡಿ ಇರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಬಸವಲಿಂಗ ಸ್ವಾಮೀಜಿ ಖಿನ್ನತೆಗೆ ಒಳಗಾಗಿದ್ದರಂತೆ.

ಸಿ.ಡಿ ಬಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ತೇಜೋವಧೆಗೆ ಪ್ಲ್ಯಾನ್

ಸಿ.ಡಿ ಬಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಬಸವಲಿಂಗ ಸ್ವಾಮೀಜಿ ತೇಜೋವಧೆಗೆ ಹುನ್ನಾರ ನಡೆದಿತ್ತಂತೆ. ಅನಾಮಧೇಯ ವ್ಯಕ್ತಿ, ಮತ್ತೋರ್ವ ಸ್ವಾಮೀಜಿ ಕೂಡ ಅದಕ್ಕೆ ಸಾಥ್ ನೀಡಿದ್ದರಂತೆ. ಆದರೆ ಆ ಮಹಾ ಮಸಲತ್ತು ಬಂಡೆಮಠದ ಗದ್ದುಗೆಗಾಗಿ ನಡೆದಿತ್ತಂತೆ..! ಈ ಕಾರಣಕ್ಕೆ ವಿಡಿಯೋ ವೈರಲ್​ ಮಾಡಿದ್ದರ ಬಗ್ಗೆ ಮಾಹಿತಿಯಿದೆ. ಈಗ, ಸ್ವಾಮೀಜಿಗೆ ಸೆರಿದ ಇನ್ನೂ ನಾಲ್ಕೈದು ವಿಡಿಯೋಗಳಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಷಡ್ಯಂತ್ರಕ್ಕೆ ಹೆದರಿ ಡೆತ್​ ನೋಟ್​ ಬರೆದು ಸೂಸೈಡ್ ಮಾಡಿಕೊಂಡಿದ್ದಾರೆ ಸ್ವಾಮೀಜಿ ಎನ್ನಲಾಗಿದ್ದು, ಪೊಲೀಸ್ ಎಲ್ಲಾ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.

Published On - 12:18 pm, Wed, 26 October 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ