ಅಶೋಕದಲ್ಲಿ ಚಿನ್ನಾಭರಣ ಕಳವು, ಸಿಬ್ಬಂದಿ ವಿರುದ್ಧ ದೂರು

|

Updated on: Jan 02, 2020 | 4:07 PM

ಬೆಂಗಳೂರು: ನಗರದ ಐಷಾರಾಮಿ ಹೋಟೆಲ್ ಲಲಿತಾ ಅಶೋಕ್​ನಲ್ಲಿ ಕಳ್ಳತನವಾಗಿದೆ. ಹೋಟೆಲ್ ರೂಂನಲ್ಲಿದ್ದ 50 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಸಕ್ಕಾಗಿ ಬಂದಿದ್ದ ದೆಹಲಿ ಮೂಲದ ಕುಶಾಂಗ್ರ ಶರ್ಮ ದಂಪತಿ, ಅಶೋಕ ಹೋಟೆಲ್​ನಲ್ಲಿ ರೂಂ ಪಡೆದು ತಂಗಿದ್ರು. ದಂಪತಿ ಇಲ್ಲದ ವೇಳೆ ರೂಂ ಕ್ಲೀನ್ ಮಾಡೋದಕ್ಕೆ ಬಂದಿದ್ದ ಹೌಸ್ ಕೀಪಿಂಗ್ ಸಿಬ್ಬಂದಿ ಬೆಡ್ ಬಳಿ ಇಟ್ಟಿದ್ದ ಚಿನ್ನಾಭರಣ ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 50 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದ್ದು, ಬಂಗಾರದ ಚೈನ್, 2ಲಾಕೆಟ್, […]

ಅಶೋಕದಲ್ಲಿ ಚಿನ್ನಾಭರಣ ಕಳವು, ಸಿಬ್ಬಂದಿ ವಿರುದ್ಧ ದೂರು
Follow us on

ಬೆಂಗಳೂರು: ನಗರದ ಐಷಾರಾಮಿ ಹೋಟೆಲ್ ಲಲಿತಾ ಅಶೋಕ್​ನಲ್ಲಿ ಕಳ್ಳತನವಾಗಿದೆ. ಹೋಟೆಲ್ ರೂಂನಲ್ಲಿದ್ದ 50 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಸಕ್ಕಾಗಿ ಬಂದಿದ್ದ ದೆಹಲಿ ಮೂಲದ ಕುಶಾಂಗ್ರ ಶರ್ಮ ದಂಪತಿ, ಅಶೋಕ ಹೋಟೆಲ್​ನಲ್ಲಿ ರೂಂ ಪಡೆದು ತಂಗಿದ್ರು.

ದಂಪತಿ ಇಲ್ಲದ ವೇಳೆ ರೂಂ ಕ್ಲೀನ್ ಮಾಡೋದಕ್ಕೆ ಬಂದಿದ್ದ ಹೌಸ್ ಕೀಪಿಂಗ್ ಸಿಬ್ಬಂದಿ ಬೆಡ್ ಬಳಿ ಇಟ್ಟಿದ್ದ ಚಿನ್ನಾಭರಣ ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 50 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದ್ದು, ಬಂಗಾರದ ಚೈನ್, 2ಲಾಕೆಟ್, ರುದ್ರಾಕ್ಷಿ ಇರುವ ಚಿನ್ನದ ಚೈನ್ ಕಳವಾಗಿದೆ. ದಂಪತಿ ಇಬ್ಬರು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಹೋಟೆಲ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

Published On - 3:44 pm, Thu, 2 January 20