ಪ್ರಧಾನಿ ಆಗಮನ: ರಸ್ತೆ, ಸುಣ್ಣ ಬಣ್ಣಕ್ಕೆ 2 ಕೋಟಿ ಖರ್ಚು ಮಾಡಿದ ಬಿಬಿಎಂಪಿ

ಪ್ರಧಾನಿ ಆಗಮನ: ರಸ್ತೆ, ಸುಣ್ಣ ಬಣ್ಣಕ್ಕೆ 2 ಕೋಟಿ ಖರ್ಚು ಮಾಡಿದ ಬಿಬಿಎಂಪಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ 2ದಿನದ ಪ್ರವಾಸ ಕೈಗೊಂಡಿದ್ದಾರೆ. ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದು, ದೆಹಲಿಯಿಂದ ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಹೀಗಾಗಿ, ಸಿಲಿಕಾನ್ ಸಿಟಿ ಮೋದಿ ಆಗಮನಕ್ಕೆ ಸಜ್ಜಾಗಿದೆ. ಪ್ರಧಾನಿ ಬಂದು ಹೋಗುವ ರಸ್ತೆಗಳಿಗೆ ಬಿಬಿಎಂಪಿ ರಾತ್ರೋರಾತ್ರಿ ಕಲರ್ ಪೇಂಟಿಂಗ್ ಮಾಡಿಸಿದೆ. ಕಿತ್ತೋದ ರಸ್ತೆಗಳಿಗೆ ಡಾಂಬರ್ ಹಾಕಿಸಿದೆ. 2 ಕೋಟಿ ಖರ್ಚು ಮಾಡಿ ಮೋದಿ ಸಂಚರಿಸುವ ರಸ್ತೆಗಳಿಗೆ, ಗೋಡೆಗಳಿಗೆ ಸುಣ್ಣ ಬಣ್ಣದ ವ್ಯವಸ್ಥೆ ಮಾಡಿ ಸ್ವಚ್ಛತೆ ಕಾಪಾಡಲಾಗಿದೆ. ಪ್ರಧಾನಿ ಆಗಮನದಿಂದ ನಗರಕ್ಕೆ ಸ್ವಚ್ಛತಾ ಭಾಗ್ಯ ಸಿಕ್ಕಂತಾಗಿದೆ.

ಹೆಚ್ಎಎಲ್, ಸುರಂಜನದಾಸ್ ರಸ್ತೆ, ದೊಮ್ಮಲೂರು ಮುಖ್ಯ ರಸ್ತೆ ಸೇರಿದಂತೆ ಪ್ರಧಾನಿ ಸಂಚರಿಸುವ ರಸ್ತೆಗಳು ಫುಲ್ ಕ್ಲೀನ್ ಆಗಿವೆ. ರಸ್ತೆ ಕ್ಲೀನ್, ಪೇಂಟಿಂಗ್, ಗುಂಡಿ ಮುಚ್ಚಲು ಬಿಬಿಎಂಪಿ ಎರಡೂವರೆ ಕೋಟಿ ಖರ್ಚು ಮಾಡಿದೆ. ಕಿತ್ತೊದ ರಸ್ತೆ ಸರಿಪಡಿಸುವಂತೆ ವರ್ಷಗಟ್ಟಲೆ ದೂರು ಕೊಟ್ರು ಕ್ಯಾರೆ ಎನ್ನದ ಬಿಬಿಎಂಪಿ ಪಿಎಂಗಾಗಿ ರಾತ್ರೋ ರಾತ್ರಿ ಹೊಸ ರಸ್ತೆ ನಿರ್ಮಾಣ, ಫುಟ್ ಪಾಟ್, ಡಿವೈಡರ್ಸ್ ಗೆ ಪೇಂಟಿಂಗ್ ಮಾಡಿಸಿದೆ.

Click on your DTH Provider to Add TV9 Kannada