ಬೆಂಗಳೂರು, ಡಿ.22: ನಗರದ ಅಂಧ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್(Toilet Cleaning) ಮಾಡಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ‘ ಚಾಕ್ಲೆಟ್, ಚಿಕ್ಕಿ ಕೊಟ್ಟು ಟಾಯ್ಲೆಟ್ ಕ್ಲೀನ್ ಮಾಡುವುದಕ್ಕೆ ಹೇಳುತ್ತಿದ್ದರಂತೆ ಎಂದು ವಿರೋಧ ಪಕ್ಷದ ನಾಯಕ R.ಆಶೋಕ್(R Ashoka) ಹೇಳಿದ್ದಾರೆ. ಇಂದು ಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ‘ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಪೊಲೀಸರು ಕೂಡ ಬಂದಿದ್ದಾರೆ. ನಾನು ಶಿಕ್ಷಕರ ಜೊತೆ ಮಾತನಾಡಿದ್ದೇನೆ. ಕಳೆದ ಹಲವು ತಿಂಗಳಿಂದ ಎಸ್ಡಿಎಂ ಇಲ್ಲದ ಕಾರಣ, ಶೌಚಾಲಯ ಸ್ವಚ್ಛತೆ ಮಾಡುವವರು ಇರಲಿಲ್ಲ. ಹಾಗಾಗಿ ಮಕ್ಕಳಿಂದ ಕ್ಲಿನಿಂಗ್ ಮಾಡಿಸಿದ್ದಾಗಿ ಹೇಳಿದ್ದಾರಂತೆ.
ಇನ್ನು ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ 600 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಎಸ್ಸಿ, ಎಸ್ಟಿ ಹಾಗೂ ಹಿಂದೂಳಿದ ಸಮುದಾಯಕ್ಕೆ ಸೇರಿದ ಮಕ್ಕಳು ಹೆಚ್ಚಾಗಿ ಇದ್ದಾರೆ. ಶಿಕ್ಷಕರು ಬಂದು ನಿತ್ಯ ಶೌಚಾಲಯ ಯಾರು ಕ್ಲೀನ್ ಮಾಡುತ್ತಿರಾ ಎಂದು ಕೇಳುತ್ತಿದ್ದರಂತೆ, ಮಕ್ಕಳಿಗೆ ಗ್ಲೌಸ್ ಇಲ್ಲದೆ, ಚಪ್ಪಲಿ ಇಲ್ಲದೆ ಪೆನಾಯಿಲ್ ಕೊಟ್ಟಿದ್ದಾರೆ. ಇದರಿಂದ ಕಳೆದ ಹಲವು ದಿನಗಳಿಂದ ಮಕ್ಕಳ ಕೈ ಉರಿತಾಯಿದೆಯಂತೆ. ಮಕ್ಕಳು ಭಯ ಇಲ್ಲದೆ ನಮ್ಮ ಮುಂದೆ ದೂರು ನೀಡಿದ್ದಾರೆ. ಮೊನ್ನೆ ಕೋಲಾರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಈಗ ಈ ಘಟನೆ ನಡೆದಿದೆ ಎಂದು ಸರ್ಕಾರದ ವಿರುದ್ದ ಆರ್ ಅಶೋಕ ಫುಲ್ ಗರಂ ಆಗಿದ್ದಾರೆ.
ಇಂತಹ ಘಟನೆಗಳನ್ನೇಲ್ಲ ನೋಡುತ್ತಿದ್ದರೆ, ಸರ್ಕಾರ ಮಲಗಿದ್ದೇಯಾ? ಎಂಬ ಪ್ರಶ್ನೆ ಮೂಡಿದೆ. ಸರ್ಕಾರ ಈ ಕುರಿತು ಯಾಕೆ ಎಚ್ಚೆತ್ತುಕೊಂಡಿಲ್ಲ. ಮೊನ್ನೆ ಅಧಿವೇಶನ ನಡೆಯುವಾಗಲೇ ಭ್ರೂಣ ಹತ್ಯೆ, ಬೆಳಗಾವಿಯಲ್ಲಿ ಮಹಿಳೆಯ ಬೆತ್ತಲೆ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೆಲ್ಲ ನೋಡುತ್ತಿದ್ದರೆ, ಸರ್ಕಾರ ಸತ್ತುಹೋಗಿದೆಯಾ?, ಸರ್ಕಾರಕ್ಕೆ ಇದೊಂದು ಛಿಮಾರಿ ಹಾಕಿದ ಹಾಗೇ ಎಂದು ಆರ್ ಅಶೋಕ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ