ವಾಹನ ಸವಾರರ ಗಮನಕ್ಕೆ: ಕರಗ ಶಕ್ತ್ಯೋತ್ಸವ ಅಂಗವಾಗಿ ಈ ರಸ್ತೆಯ ಮಾರ್ಗ ಬದಲಾವಣೆ

ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪರಂಪರೆಯ ಹೆಗ್ಗುರುತು ಸಾರುವ ಬೆಂಗಳೂರು ಕರಗ (Bengaluru Karaga) ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರು ಕರಗ ಮಹೋತ್ಸವದ ಪ್ರಮುಖ ಭಾಗವಾದ ಹಸಿ ಕರಗ ಇಂದು (ಮಾರ್ಚ್ 31) ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಆರಂಭಗೊಂಡು, ಧರ್ಮರಾಯಸ್ವಾಮಿ ದೇವಾಲಯದಲ್ಲಿ (Dharmaraya swamy temple) ರಾತ್ರಿಯಿಡೀ ನಡೆಯುವ ವಿಶೇಷ ಪೂಜೆಗೆ ಸಜ್ಜಾಗಿದೆ. ಹೀಗಾಗಿ ನಾಳೆ ಅಂದರೆ ಏಪ್ರಿಲ್ 1ರಂದು ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಯಾವೆಲ್ಲಾ ರಸ್ತೆ ಬಂದ್ ಆಗಲಿವೆ ಎನ್ನುವ ವಿವರ ಇಲ್ಲಿದೆ.

ವಾಹನ ಸವಾರರ ಗಮನಕ್ಕೆ: ಕರಗ ಶಕ್ತ್ಯೋತ್ಸವ ಅಂಗವಾಗಿ ಈ ರಸ್ತೆಯ ಮಾರ್ಗ ಬದಲಾವಣೆ
Bengaluru Karaga
Edited By:

Updated on: Mar 31, 2026 | 10:07 PM

ಬೆಂಗಳೂರು, (ಮಾರ್ಚ್ 31): ಈಗಾಗಲೇ ಬೆಂಗಳೂರು ಕರಗ ಶಕ್ತ್ಯೋತ್ಸವ (Bengaluru Karaga 2026) ಶುರುವಾಗಿದ್ದು, ನಾಳೆ (ಏ.1) ಕರ್ಪೂರ ಪೂಜೆ ನೆರವೇರಲಿದ್ದು, ಬಳಿಕ ಬುಧವಾರ ಮಧ್ಯರಾತ್ರಿ 12.30ರಿಂದ ಹೂವಿನ ಕರಗದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 1ರ ರಾತ್ರಿ 9 ರಿಂದ ಮರುದಿನ ಅಂದರೆ ಏಪ್ರಿಲ್ ಬೆಳಗ್ಗೆ 7 ರವರೆಗೆ ಕರಗ ಉತ್ಸವ ಹೊರಡುವ ಕೆಲವು ರಸ್ತೆಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಈ ಕೆಳಗೆ ನೀಡಿರುವ ರಸ್ತೆಗಳಲ್ಲಿ ಸಂಚರಿಸುವ ಬದಲು ಬೇರೆ ಮಾರ್ಗವಾಗಿ ತೆರಳಬೇಕು.

ಯಾವೆಲ್ಲಾ ರಸ್ತೆಯ ಮಾರ್ಗ ಬದಲು?

ಮಾರ್ಕೆಟ್ ಸರ್ಕಲ್​ನಿಂದ ಅವೆನ್ಯೂ ಸರ್ಕಲ್​ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್​ವರೆಗೂ ರಸ್ತೆ ಏಪ್ರಿಲ್ 1ರ ರಾತ್ರಿ 9ರಿಂದ ಏಪ್ರಿಲ್ 2ರ ಬೆಳಗ್ಗೆ 7ರವರೆಗೆ ಬಂದ್ ಇರಲಿದೆ. ಹೀಗಾಗಿ SPG ರಸ್ತೆ, ಟೌನ್​ ಹಾಲ್ ಹಾಗೂ ಕೆಂಪೇಗೌಡ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕೆಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಕರಗ ದೇಗುಲದಿಂದ ಹೊರಟು ಮರಳಿ ಬರುವವರಿಗೆ ಅಕ್ಕಿಪೇಟೆ, ಓಟಿಸಿ ಮುಖ್ಯ ರಸ್ತೆಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಇದರಿಂದ ಈ ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಬೇಕು ಎಂದು ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ನೋಡಿ: Bengaluru Karaga: ಇಂದು ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ; ಹಸಿ ಕರಗ ಹೊತ್ತು ದ್ರೌಪದಿ ದೇವಿ ದರ್ಶನ!

ದೇಗುಲಕ್ಕೆ ಕಮಿಷನರ್ ಭೇಟಿ

ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು ಪೊಲೀಸ್ ಕಮಿಷನರ್ ಗೆ ಜಂಟಿ ಪೊಲೀಸ್ ಆಯುಕ್ತ ವಂಶೀಕೃಷ್ಣ, ಡಿಸಿಪಿ ಅಕ್ಷಯ್, ಯತೀಶ್ ಎನ್ ಸಾಥ್ ನೀಡಿದ್ದು, ಈ ವೇಳೆ ಕಗರ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಕರಗ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕಣ್ಗಾವಲು

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಕರಗ ಬೆಂಗಳೂರಿನ ಕೇಂದ್ರ ಹಾಗೂ ಪಶ್ಚಿಮ ಭಾಗದಲ್ಲಿ ಸುಮಾರು 22 ಕಿ.ಲೋ. ದೂರ ಸಾಗಲಿದೆ. ಹೀಗಾಗಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಗದುದ್ದಕ್ಕೂ ಸಿಸಿಟಿವಿ ಅಳವಡಿಸಲಾಗಿದೆ. ಹಾಗೇ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇನ್ನು ಕರಗ ಭದ್ರತೆಗೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us