ಬೆಂಗಳೂರಿನಲ್ಲಿ ಯುರೋ ಕ್ಯಾಬ್ಸ್​ ಸಂಸ್ಥೆಯಿಂದ ಟ್ರಾಫಿಕ್ ರೂಲ್ಸ್ ಬ್ರೇಕ್: 82 ಕ್ಯಾಬ್​​​​ಗಳಿಗೆ 1.16 ರೂ. ಲಕ್ಷ ರೂ. ದಂಡ

|

Updated on: Jun 15, 2023 | 9:17 AM

ಯೂರೋ ಕ್ಯಾಬ್ಸ್​(Euro Cabs) ಸಂಸ್ಥೆಯಿಂದ ವಿವಿಧೆಡೆ ಸಂಚಾರ ನಿಯಮ ಉಲ್ಲಂಘನೆಯಡಿಯಲ್ಲಿ ಹೆಣ್ಣೂರು ಠಾಣೆ ಪೊಲೀಸರು ಯೂರೋ ಕ್ಯಾಬ್ಸ್​ಗೆ ಸೇರಿದ 82 ಕ್ಯಾಬ್​​​​ಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ಬೆಂಗಳೂರಿನಲ್ಲಿ ಯುರೋ ಕ್ಯಾಬ್ಸ್​ ಸಂಸ್ಥೆಯಿಂದ ಟ್ರಾಫಿಕ್ ರೂಲ್ಸ್ ಬ್ರೇಕ್: 82 ಕ್ಯಾಬ್​​​​ಗಳಿಗೆ 1.16 ರೂ. ಲಕ್ಷ ರೂ. ದಂಡ
ಟ್ರಾಫಿಕ್​ ಫೈನ್​​ ಕಟ್ಟಿದ ಯುರೋ ಕ್ಯಾಬ್ಸ್​
Follow us on

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸದಂತೆ ಎಷ್ಟೇ ಎಚ್ಚರಿಕೆ ನೀಡಿದರೂ ಅದನ್ನ ಪಾಲಿಸುವವರ ಸಂಖ್ಯೆ ಕಡಿಮೆ. ಅದರಂತೆ ಇದೀಗ ಯೂರೋ ಕ್ಯಾಬ್ಸ್​(Euro Cabs) ಸಂಸ್ಥೆಯಿಂದ ವಿವಿಧೆಡೆ ಸಂಚಾರ ನಿಯಮ ಉಲ್ಲಂಘನೆಯಡಿಯಲ್ಲಿ ಹೆಣ್ಣೂರು ಠಾಣೆ ಪೊಲೀಸರು ದಂಡವನ್ನ ಸಂಗ್ರಹಿಸಿದ್ದಾರೆ. ಹೌದು ಯೂರೋ ಕ್ಯಾಬ್ಸ್​ಗೆ ಸೇರಿದ 82 ಕ್ಯಾಬ್​​​​ಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಂಡು, ಬರೊಬ್ಬರಿ 1.16 ಲಕ್ಷ ದಂಡ(Traffic Fine)ವನ್ನ ವಿಧಿಸಿದ್ದರು. ಈ ಕುರಿತು ಸಂಚಾರಿ ಪೊಲೀಸರು ಕಂಪನಿಗೆ ನೋಟಿಸ್ ನೀಡಿದ್ದು, ಕ್ಯಾಬ್ ಸಂಸ್ಥೆ ಅಧಿಕಾರಿಗಳು ಠಾಣೆಗೆ ಆಗಮಿಸಿ 1.16 ಲಕ್ಷ ದಂಡ ಪಾವತಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನ ಕ್ಷಣಾರ್ಧದಲ್ಲಿ ಕಳ್ಳತನ ಮಾಡ್ತಿದ್ದ ಆಸಾಮಿ ಬಂಧನ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನ ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದ ಆಸಾಮಿಯನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಂಧಿತ ಆರೋಪಿ. ಇತ ಬಾಣಸವಾಡಿ, ರಾಮೂರ್ತಿನಗರ ಸೇರಿ ಕೆಆರ್ ಪುರಂ ಸುತ್ತಾ ತನ್ನ ಕೈಚಳಕ ತೋರಿಸಿದ್ದ. ಇನ್ನು ಈ ಆರೋಪಿ ಆನಂದ್​ ಕದ್ದ ಬೈಕ್​ಗಳಲ್ಲಿ ವ್ಹೀಲಿಂಗ್ ಮಾಡಿ, ಬಳಿಕ ಕಡಿಮೆ ಹಣಕ್ಕೆ ಅದನ್ನ ಮಾರಾಟ ಮಾಡುತ್ತಿದ್ದ. ಸುಲಭವಾಗಿ ಹ್ಯಾಂಡಲ್ ಲಾಕ್ ಬ್ರೇಕ್ ಮಾಡಬಹುದು ಎಂದು ಹೆಚ್ಚು ಡಿಯೋ ಬೈಕ್​ಗಳನ್ನೇ ಇತ ಕಳ್ಳತನ ಮಾಡುತ್ತಿದ್ದ. ಇದೀಗ ಇತನನ್ನ ಬಂಧಿಸಿ, 12 ಲಕ್ಷ ಮೌಲ್ಯದ ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಅತ್ಯಾಧುನಿಕ ಕ್ಯಾಮೆರಾಗಳ ಕಣ್ಗಾವಲು

ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಿಯಾಯತಿ ನೀಡಿದ್ದ ಸರ್ಕಾರ

ಬೆಂಗಳೂರು: ಕೆಲ ತಿಂಗಳ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ದಂಡ ಪಾವತಿಸಲು ರಾಜ್ಯ ಸರ್ಕಾರ ಶೇ.50ರ ರಿಯಾಯಿತಿ ನೀಡಿದ್ದರು. ಜೊತೆಗೆ ಅದಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕ ಬೆನ್ನಲ್ಲೆ, ಮತ್ತೆ 15 ದಿನಗಳ ಕಾಲಾವಕಾಶ ನೀಡಿತ್ತು. ಹೌದು 2023 ರ ಫೆಬ್ರವರಿ 11ರ ವರೆಗೆ 15 ದಿನಗಳ ಕಾಲ ಶೇ 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು. ಈ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟುವ ಕಾಲಾವಕಾಶವನ್ನು ವಿಸ್ತರಿಸಬೇಕೆಂಬ ಬೇಡಿಕೆ ಇಟ್ಟಿದ್ದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ