AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದವರ ಕಾರು ಅಪಘಾತ: ಐವರ ಸಾವು

ಆಂಧ್ರಪ್ರದೇಶದ ತೋಟಪಲ್ಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನ ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದೆ. ತಿರುಪತಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಎರಿಟಿಕಾ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದವರ ಕಾರು ಅಪಘಾತ: ಐವರ ಸಾವು
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Apr 28, 2025 | 3:38 PM

Share

ಬೆಂಗಳೂರು, ಏಪ್ರಿಲ್​ 28: ಆಂಧ್ರ ಪ್ರದೇಶ (Andhra Pradesh) ಕಾಣಿಪಾಕಂ ಸಮೀಪದ ತೋತಾಪಲ್ಲಿಯಲ್ಲಿ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲ ಬೆಂಗಳೂರು (Bengaluru) ಮೂಲದವರು ಎಂದು ತಿಳಿದುಬಂದಿದೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಓರ್ವ ಮಗು ಮೃತಪಟ್ಟಿದೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಿಟಿಕಾ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ತಿರುಪತಿಯಿಂದ (Tirupati) ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಬೈಕ್ ಸವಾರರ ಸಾವು

ತುಮಕೂರು: ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಗರದ ಅಂತರಸನಹಳ್ಳಿ ಮಾರ್ಕೆಟ್ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ತಿಪ್ಪೇಸ್ವಾಮಿ (28) ಮತ್ತು ಪಾವಗಡ ತಾಲೂಕಿನ ನಾಗಲಮಡಿಕೆಯ ಪ್ರದೀಪ್ (23) ಮೃತ ದುರ್ದೈವಿಗಳು. ಯುವಕರು ಪವನ್ ಹುಂಡೈ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಯಲ್ಲಾಪುರದಿಂದ ಶಿರಾ ಗೇಟ್ ಕಡೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತುಮಕೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು, ಮದ್ವೆ ಮನೆಯಲ್ಲಿ ಸೂತಕ

ಇದನ್ನೂ ಓದಿ
Image
ಬೀದಿ ಕಾಮಣ್ಣರ ಹಾವಳಿ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ಬಂಧನ
Image
ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ
Image
ಸಾರಿಗೆ ಬಸ್‌ಗಳಲ್ಲಿ ಜಾಹೀರಾತು: ಸಿಎಂ ಕಚೇರಿಯಿಂದ ಬಂತು ಖಡಕ್ ಸೂಚನೆ
Image
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ

ಮತ್ತೊಂದು ಪ್ರಕರಣದಲ್ಲಿ ತುಮಕೂರು ಹೊರವಲಯದ ರಿಂಗ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಭರತ್ (29) ಮೃತ ದುರ್ದೈವಿ. ಮೃತ ಭರತ್ ತುಮಕೂರು ನಗರದ ಉಪ್ಪಾರಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿವೇಕ ಬಿರಾದಾರ
ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ