‘ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ಇಲ್ಲ; ಸಾರ್ವಜನಿಕರು ಬೈಕ್ ಟ್ಯಾಕ್ಸಿ ಸೇವೆ ಪಡೆಯಬಾರದು’

ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆ ಬಗ್ಗೆ ಕೋರ್ಟ್​ನಲ್ಲಿ ಕೇಸ್​ ನಡೆಯುತ್ತಿದೆ. ನ್ಯಾಯಾಲಯ ಈ ಬಗ್ಗೆ ತೀರ್ಮಾನ ಮಾಡಲಿದೆ. ಆದ್ರೆ ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆಗೆ ಅವಕಾಶ ಇಲ್ಲ.

‘ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ಇಲ್ಲ; ಸಾರ್ವಜನಿಕರು ಬೈಕ್ ಟ್ಯಾಕ್ಸಿ ಸೇವೆ ಪಡೆಯಬಾರದು’
ಬೈಕ್ ಟ್ಯಾಕ್ಸಿ
Edited By:

Updated on: Jan 31, 2022 | 9:30 PM

ಬೆಂಗಳೂರು: ಬೈಕ್​ನ್ನು ಟ್ಯಾಕ್ಸಿ ಆಗಿ ಕಾರ್ಯಾಚರಣೆಗೆ ಅನುಮತಿ ನೀಡಿಲ್ಲ. ಆದ್ರೂ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆ ಮಾಡುತ್ತಿದೆ. ಇದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ. ಸಾರ್ವಜನಿಕರು ಇಂತಹ ಬೈಕ್ ಟ್ಯಾಕ್ಸಿ ಸೇವೆ ಪಡೆಯಬಾರದು. ಮೋಟಾರು ವಾಹನ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ಹೇಳಿಕೆ ನೀಡಿದ್ದಾರೆ.

ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆ ಬಗ್ಗೆ ಕೋರ್ಟ್​ನಲ್ಲಿ ಕೇಸ್​ ನಡೆಯುತ್ತಿದೆ. ನ್ಯಾಯಾಲಯ ಈ ಬಗ್ಗೆ ತೀರ್ಮಾನ ಮಾಡಲಿದೆ. ಆದ್ರೆ ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆಗೆ ಅವಕಾಶ ಇಲ್ಲ. ಜನರು ಯಾರೂ ಕೂಡ ಬೈಕ್ ಟ್ಯಾಕ್ಸಿ ಬಳಸಬಾರದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ಹೇಳಿದ್ದಾರೆ.

ಆರ್​ಟಿಒ ಅಧಿಕಾರಿಗಳಿಂದ ರ್ಯಾಪಿಡೊ ಗಾಡಿಗಳನ್ನು ಸೀಜ್ ಮಾಡಲಾಗಿದೆ. ಯಶವಂತಪುರ ಆರ್​ಟಿಓ ವ್ಯಾಪ್ತಿಯಲ್ಲಿ 100 ರ್ಯಾಪಿಡೊ ಗಾಡಿಗಳು ಸೀಜ್ ಮಾಡಲಾಗಿದೆ. ಸೀಜ್ ಆಗಿರುವ ಗಾಡಿಗಳನ್ನು ಸದ್ಯ ಪೀಣ್ಯ ಡ್ರೈವಿಂಗ್ ಟ್ರ್ಯಾಕ್ ಆವರಣದಲ್ಲಿ ನಿಲ್ಲಿಸಲಾಗಿದ್ದು ಸ್ಥಳಕ್ಕೆ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಹಾಗೂ ಯಶವಂತಪುರ ಆರ್​ಟಿಒ ಮಂಜುನಾಥ್ ಭೇಟಿ ನೀಡಿದ್ದಾರೆ.

ನಗರದಲ್ಲಿ ಅನಧಿಕೃತವಾಗಿ ಬೈಕ್ ಗಳು ಟ್ಯಾಕ್ಸಿಗಳಾಗಿ ಸಂಚಾರ ಮಾಡ್ತಿವೆ. ಪರ್ಸನಲ್ ಗಾಡಿಗಳು ವಾಣಿಜ್ಯ ವ್ಯವಹಾರ ಮಾಡ್ತಿವೆ. ಇದು ಕಾನೂನಿಗೆ ವಿರುದ್ದವಾಗಿವೆ. ಬೈಕ್ ಟ್ಯಾಕ್ಸಿ ಆಗಿ ಅನುಮತಿ ನೀಡಿಲ್ಲ ಎಂದು ಈ ವೇಳೆ ಅವರು ಹೇಳಿದ್ದಾರೆ. ಎಲ್ಲಾ ಕಡೆ ಅನಧಿಕೃತ ಬೈಕ್​ಗಳ ಜಪ್ತಿ ಕಾರ್ಯಾಚರಣೆ ಆಗ್ತಿದೆ. ರ್ಯಾಪಿಡೊ ಸಂಸ್ಥೆ ಬಗ್ಗೆ ನ್ಯಾಯಲಯದಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್​ನಲ್ಲಿ ತೀರ್ಮಾನ ಆಗಲಿದೆ. ಆದ್ರೆ ರ್ಯಾಪಿಡೊ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಜನರು ಯಾರೂ ಕೂಡ ರ್ಯಾಪಿಡೊ ಬಳಸಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೋಯಿಂಗ್ ನೀತಿ ಪುನರ್​ ಪರಿಶೀಲನೆ ಬಗ್ಗೆ ಚರ್ಚೆ; ರಾಂಗ್​ ಪಾರ್ಕಿಂಗ್​ಗೆ ಬೇರೆ ರೀತಿಯಲ್ಲಿ ಕ್ರಮ: ಕಮಲ್ ಪಂತ್ ಹೇಳಿಕೆ

ಇದನ್ನೂ ಓದಿ: ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ: ಸ್ಪಷ್ಟನೆ ನೀಡಿದ ಬಿಆರ್ ರವಿಕಾಂತೇಗೌಡ

Published On - 9:29 pm, Mon, 31 January 22