ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಹತ್ತಿಸಿದ್ದ ಪ್ರಕರಣ; ಆರೋಪಿ ಆದಿಕೇಶವ ಬಂಧನ

ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಹತ್ತಿಸಿದ್ದ ಪ್ರಕರಣ; ಆರೋಪಿ ಆದಿಕೇಶವ ಬಂಧನ
ದಿವಂಗತ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ

ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾಪುರ ಠಾಣೆ ಪೊಲೀಸರಿಂದ ಇದೀಗ ಆರೋಪಿ ಸೆರೆ ಹಿಡಿಯಲಾಗಿದೆ. ನಾಯಿ ಕಂಡರೆ ಆಗಲ್ಲ ಅದಕ್ಕೆ ಸಾಯಿಸಿದೆ ಎಂದು ಆದಿಕೇಶವ ಹೇಳಿರುವ ಬಗ್ಗೆ ಮಾಹಿತಿ ಲಭಿಸಿದೆ.

TV9kannada Web Team

| Edited By: ganapathi bhat

Jan 31, 2022 | 7:28 PM

ಬೆಂಗಳೂರು: ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಹತ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಆದಿಕೇಶವಲು ನಾಯ್ಡು‌ ಮೊಮ್ಮಗ ಆದಿಕೇಶವ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ. ಬೆಂಗಳೂರಿನ ಸಿದ್ದಾಪುರ ಠಾಣೆ ಪೊಲೀಸರಿಂದ ಆರೋಪಿ ಸೆರೆ ಹಿಡಿಯಲಾಗಿದೆ. ಜನವರಿ 26 ರಂದು ಜಯನಗರ 1ನೇ ಹಂತದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ಆರೋಪಿ ಸೆರೆಹಿಡಿಯಲಾಗಿದೆ.

ರಸ್ತೆ ಬದಿ‌ ಮಲಗಿದ್ದ ನಾಯಿ ಮೇಲೆ ಆರೋಪಿ ಆದಿಕೇಶವ ಕಾರು ಹತ್ತಿಸಿದ್ದ. ಘಟನೆ ಹಿನ್ನೆಲೆ ಸ್ಥಳೀಯ ಬದ್ರಿ ಎಂಬಾತ ಸಿದ್ದಾಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾಪುರ ಠಾಣೆ ಪೊಲೀಸರಿಂದ ಇದೀಗ ಆರೋಪಿ ಸೆರೆ ಹಿಡಿಯಲಾಗಿದೆ. ನಾಯಿ ಕಂಡರೆ ಆಗಲ್ಲ ಅದಕ್ಕೆ ಸಾಯಿಸಿದೆ ಎಂದು ಆದಿಕೇಶವ ಹೇಳಿರುವ ಬಗ್ಗೆ ಮಾಹಿತಿ ಲಭಿಸಿದೆ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪ್ರಾರ್ಥನಾ ಮಂದಿರ 15 ದಿನಗಳಲ್ಲಿ ತೆರವುಗೊಳಿಸಲು ಆಗ್ರಹ

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪ್ರಾರ್ಥನಾ ಮಂದಿರ ವಿಚಾರಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್ ಬೆಂಗಳೂರು ನಗರ ಘಟಕದಿಂದ ಪತ್ರ ಬರೆಯಲಾಗಿದೆ. ರೈಲ್ವೆ ಸಚಿವರು, ನೈರುತ್ಯ ರೈಲ್ವೆ ವಿಭಾಗೀಯ ನಿರ್ವಾಹಕರಿಗೆ ಪತ್ರ ಬರೆಯಲಾಗಿದೆ. ಪ್ರಾರ್ಥನಾ ಮಂದಿರ 15 ದಿನಗಳಲ್ಲಿ ತೆರವುಗೊಳಿಸಲು ಪತ್ರದ ಮುಖೇನ ಆಗ್ರಹ ವ್ಯಕ್ತಪಡಿಸಲಾಗಿದೆ.

ಇತರ ಅಪರಾಧ ಸುದ್ದಿಗಳು

ಕೋಲಾರ: ದೂರುದಾರರು ಪೊಲೀಸ್ ಠಾಣೆಗೆ‌ ಬಂದಾಗ ಪ್ರಕರಣ ದಾಖಲು‌ ಮಾಡದೆ‌ ಕರ್ತವ್ಯ ಲೋಪ ಆರೋಪದಲ್ಲಿ ಇಲ್ಲಿನ ಗ್ರಾಮಾಂತರ‌ ಪೊಲೀಸ್ ಠಾಣೆಯ ಆನಂದ್ ಕುಮಾರ್ ಹಾಗೂ ಡಿಎಆರ್​​ನಲ್ಲಿ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಪದೇ‌ಪದೆ ಗೈರು ಹಾಜರಾದ ಹಿನ್ನೆಲೆ ವೈ.ಎಂ. ಸರ್ವೇಶ್ ಅಮಾನತು ಮಾಡಲಾಗಿದೆ. ಈ ಬಗ್ಗೆ ಎಸ್​ಪಿ ‌ದೇವರಾಜ್‌ ಆದೇಶ ನೀಡಿದ್ದಾರೆ.

ರಾಮನಗರ: ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಆಗಿದೆ. ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆಗೈದು ಮೃತದೇಹ‌ ಸುಟ್ಟು ಹಾಕಿರುವ ಬಗ್ಗೆ ತಿಳಿದುಬಂದಿದೆ. ಸಾತನೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರ ಗ್ರಾಮದಲ್ಲಿ ಚಿಕ್ಕಮಗಳೂರು ಮೂಲದ ಪವಿತ್ರಾ(23) ನೇಣಿಗೆ ಶರಣಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಮಕ್ಕಳಾಗಲ್ಲವೆಂದು ನಿಂದಿಸಿದ ಹಿನ್ನೆಲೆ ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿಯಲ್ಲಿ ಮನೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಭಾಗ್ಯ (33) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರಾಮು ಮಾದನಾಯಕನಹಳ್ಳಿ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ ದರ್ಪ; ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ

ಇದನ್ನೂ ಓದಿ: ಗದಗ: ಸರ್ಕಾರಿ ಶಾಲೆ ಶಿಕ್ಷಕ ಶಾಲೆಗೆ ಚಕ್ಕರ್ ಹಾಕಿ ಮರಳು ದಂಧೆಯಲ್ಲಿ ಭಾಗಿ ಆರೋಪ! ಮೂರು ತಿಂಗಳಿನಿಂದ ಗಣಿತ ಪಾಠ ಕೇಳದ ಮಕ್ಕಳು

Follow us on

Related Stories

Most Read Stories

Click on your DTH Provider to Add TV9 Kannada