ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ ದರ್ಪ; ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ

ಕಾರು ಹತ್ತಿಸಿದ್ದರಿಂದ ವಿಲವಿಲ ಒದ್ದಾಡಿ ಬೀದಿನಾಯಿ ಪ್ರಾಣಬಿಟ್ಟಿತ್ತು. ಆದಿಕೇಶವುಲು ನಾಯ್ಡು ಮೊಮ್ಮಗನ ವಿಕೃತಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಬದ್ರಿ ಎಂಬುವವರು ನೀಡಿದ ದೂರಿನನ್ವಯ ಮೊಕದ್ದಮೆ ದಾಖಲು ಮಾಡಲಾಗಿದೆ.

ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ ದರ್ಪ; ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ
ದಿವಂಗತ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ
Follow us
TV9 Web
| Updated By: ganapathi bhat

Updated on:Jan 30, 2022 | 6:21 PM

ಬೆಂಗಳೂರು: ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ ದರ್ಪದ ಘಟನೆಯ ವಿರುದ್ಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆಯಲಾಗಿತ್ತು ಎಂದು ಆರೋಪಿಸಲಾಗಿದೆ. ದಿವಂಗತ ಆದಿಕೇಶವುಲು ನಾಯ್ಡು ಮೊಮ್ಮಗ ಆದಿಯಿಂದ ವಿಕೃತಿಯ ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿದೆ. ಟಿಟಿಡಿ ಅಧ್ಯಕ್ಷರಾಗಿದ್ದ ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ವಿಕೃತಿ ಮೆರೆದಿದ್ದ.

ಜಯನಗರದ 1ನೇ ಹಂತದ 10ನೇ ಬಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿತ್ತು. ಉದ್ದೇಶಪೂರ್ವಕವಾಗಿ ರಿವರ್ಸ್‌ ತೆಗೆದುಕೊಂಡು ಬೀದಿನಾಯಿ ಮೇಲೆ ಕಾರು ಹತ್ತಿಸಿದ್ದ ಎಂದು ತಿಳಿದುಬಂದಿದೆ. ಕಾರು ಹತ್ತಿಸಿದ್ದರಿಂದ ವಿಲವಿಲ ಒದ್ದಾಡಿ ಬೀದಿನಾಯಿ ಪ್ರಾಣಬಿಟ್ಟಿತ್ತು. ಆದಿಕೇಶವುಲು ನಾಯ್ಡು ಮೊಮ್ಮಗನ ವಿಕೃತಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಬದ್ರಿ ಎಂಬುವವರು ನೀಡಿದ ದೂರಿನನ್ವಯ ಮೊಕದ್ದಮೆ ದಾಖಲು ಮಾಡಲಾಗಿದೆ.

ಇತರ ಅಪರಾಧ ಸುದ್ದಿಗಳು

ಉತ್ತರ ಕನ್ನಡ: ಕಾರವಾರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ಯುವತಿ ರಕ್ಷಣೆ ಮಾಡಲಾಗಿದೆ. ಲಾಡ್ಜ್ ನಡೆಸುತ್ತಿದ್ದ ಸತೀಶ್ ರಾಣೆ ಹಾಗೂ ಮಾಲೀಕ ವರ್ಣೇಕರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಪೊಲೀಸರು ಕಳುಹಿಸಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಹೆಪೆಜಾರಿನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರ ಮೇಲೆ ಚಾಲಕ ವಾಹನ ನುಗ್ಗಿಸಿದ ಘಟನೆ ನಡೆದಿದೆ. ಈ ವೇಳೆ, ಪೊಲೀಸರು ರಸ್ತೆಯಿಂದ ಪಕ್ಕಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಬೈಕ್ ಸವಾರ ಸೈಯದ್ ಜುಹಾದ್ ಎಂಬಾತನ ಬಂಧನವಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾರ್ಕಳ ಭಾಗದಲ್ಲಿ ಗೋವುಗಳ ಕಳ್ಳರ ಹಾವಳಿ ಹೆಚ್ಚಾದ ಹಿನ್ನೆಲೆ ತಪಾಸಣೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರು: ಅನುಮತಿ ಇಲ್ಲದೆ ಬನ್ನೇರುಘಟ್ಟದ ಸಫಾರಿ ಪ್ರದೇಶಕ್ಕೆ ಪ್ರವೇಶಿಸಿದ್ದ ಪೀಣ್ಯ ನಿವಾಸಿ ಮಂಜುನಾಥ್‌ನನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಗೇಟ್ ಬಳಿ ಯಾರೂ ಇರಲಿಲ್ಲ ಹೀಗಾಗಿ ಕಾಡಿನೊಳಗೆ ತೆರಳಿದ್ದೆ ಎಂದಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Viral Video; ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

ಇದನ್ನೂ ಓದಿ: ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ; ಅಷ್ಟಕ್ಕೂ ಮುಂದೆ ಆಗಿದ್ದೇನು ಇಲ್ಲಿದೆ ವೈರಲ್ ವಿಡಿಯೋ

Published On - 4:25 pm, Sun, 30 January 22