ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ; ಅಷ್ಟಕ್ಕೂ ಮುಂದೆ ಆಗಿದ್ದೇನು ಇಲ್ಲಿದೆ ವೈರಲ್ ವಿಡಿಯೋ

ಸಾಕು ನಾಯಿಗಾಗಿ ಕ್ರೂರ ಕರಡಿಯೊಂದಿಗೆ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ ವ್ಯಕ್ತಿಯೋರ್ವನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ; ಅಷ್ಟಕ್ಕೂ ಮುಂದೆ ಆಗಿದ್ದೇನು ಇಲ್ಲಿದೆ ವೈರಲ್ ವಿಡಿಯೋ
ಕರಡಿ ದಾಳಿ ಮಾಡಿರುವ ದೃಶ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2022 | 5:52 PM

ಫ್ಲೋರಿಡಾದ ವಾಲ್ಟರ್ ಹಿಕಾಕ್ಸ್ ಎನ್ನುವ ವ್ಯಕ್ತಿ ವಿಶೇಷ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾನೆ. ಅವನು ತನ್ನ ಸಾಕು ನಾಯಿಯನ್ನು ಉಳಿಸಲು ಕ್ರೂರವಾದ ಕರಡಿಯೊಂದಿಗೆ ಹೋರಾಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್​ಸ್ಟಾಗ್ರಮ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸುಮಾರು 1ಲಕ್ಷ ವೀಕ್ಷಣೆಯನ್ನು ಪಡೆದುಕೊಮಡಿದೆ. ಫ್ಲೋರಿಡಾದ ಡೇಟೋನಾ ಬೀಚ್‌ನಲ್ಲಿರುವ ಹಿಕಾಕ್ಸ್ ಮನೆಯಲ್ಲಿ ಈ ಘಟನೆ ನಡೆದಿದೆ.

ಕರಡಿಯೊಂದು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಹಿಕಾಕ್ಸ್ ತನ್ನ ಸಾಕು ನಾಯಿಗಳ ರಕ್ಷಣೆಗೆ ಮುಂದಾಗಿರುವುದನ್ನು ದೃಶ್ಯಾದಲ್ಲಿ ಕಾಣಬಹುದಾಗಿದೆ. ಅವನು ಕ್ರೂರ ಕರಡಿಯನ್ನು ದೂರ ತಳ್ಳಲು ಪ್ರಯತ್ನಿಸಿದರು ಕರಡಿ ಮತ್ತೆ ಹಲ್ಲೆ ಮಾಡಿದೆ. ಈ ಸಂದರ್ಭದಲ್ಲಿ ಹಿಕಾಕ್ಸ್​ನಿಗೆ ಕೆಲವು ಗಾಯಗಳಾಗಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಕರಡಿ ಮತ್ತೆ ಮನೆಯೊಳಗೆ  ಪ್ರವೇಶಿಸದಂತೆ ಅದನ್ನು ತಡೆಯಲು ಹಿಕಾಕ್ಸ್ ಅಲ್ಲೇ ಪಕ್ಕದಲ್ಲಿರುವ ಬೆಂಚ್‌ನೊಂದಿನ್ನು ಬಾಗಿಲಿಗೆ ಬ್ಯಾರಿಕೇಡ್ ಮಾಡಲು ಪ್ರಯತ್ನಿಸಿದ್ದಾನೆ. ಸಿಸಿಟಿವಿ ಫೂಟೇಜ್‌ನಲ್ಲಿ ಅವನು ತನ್ನ ಹೆಂಡತಿ ಕೆರ್ರಿಗೆ “ಓ ಮೈ ಗಾಡ್, ನನ್ನ ಮೇಲೆ ಕರಡಿ ದಾಳಿ ಮಾಡಿದೆ” ಎಂದು ಕೂಗುವುದನ್ನು ಕೇಳಬಹುದಾಗಿದೆ.

View this post on Instagram

A post shared by ViralHog (@viralhog)

ತನ್ನ ಸಾಕು ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಹಿಕಾಕ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಇವನ್ನು “ವರ್ಷದ ನಾಯಿಯ ತಂದೆ” ಎಂದು ಕರೆದರೇ, ಇತರರು ಅವನು ಮತ್ತು ಅವನ ಕುಟುಂಬದ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ್ದಾರೆ.

ಕಳೆದ ವಾರದಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಕರಡಿ ದಾಳಿ ಇದಾಗಿದೆ ಎಂದು ಡೇಟೋನಾ ಬೀಚ್ ಪೊಲೀಸರು ಖಚಿತಪಡಿಸಿದ್ದಾರೆ. ಮಹಿಳೆಯೊಬ್ಬರು ತನ್ನ ನಾಯಿಯನ್ನು ವಾಕಿಂಗ್​ಗೆ ಕರೆದುಕೊಂಡು ಹೋದಾಗ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ದುಬೈ ಬೀದಿಯಲ್ಲಿ ಕಾಣಿಸಿಕೊಂಡ 50 ನಮಿಲುಗಳು; ವಿಡಿಯೋ ವೈರಲ್

Video: ಎಲ್ಲೆಲ್ಲೂ ಹಿಮ, ಕೊರೆವ ಚಳಿ; ಕೇವಲ 40 ಸೆಕೆಂಡ್​ಗಳಲ್ಲಿ 47 ಪುಶ್​ ಅಪ್ಸ್​ ತೆಗೆದ ಬಿಎಸ್​ಎಫ್ ಯೋಧ-ಸೆಲ್ಯೂಟ್​ ಹೊಡೆದ ನೆಟ್ಟಿಗರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ