Video: ಎಲ್ಲೆಲ್ಲೂ ಹಿಮ, ಕೊರೆವ ಚಳಿ; ಕೇವಲ 40 ಸೆಕೆಂಡ್ಗಳಲ್ಲಿ 47 ಪುಶ್ ಅಪ್ಸ್ ತೆಗೆದ ಬಿಎಸ್ಎಫ್ ಯೋಧ-ಸೆಲ್ಯೂಟ್ ಹೊಡೆದ ನೆಟ್ಟಿಗರು
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಎಸ್ಎಫ್ ಇನ್ನೊಬ್ಬ ಯೋಧ ಹಿಮದಲ್ಲಿ ಒಂದೇ ಕೈಯಲ್ಲಿ ಪುಶ್ ಅಪ್ಸ್ ಮಾಡಿದ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ವೈರಲ್ ಆಗುವ ಒಂದಷ್ಟು ವಿಡಿಯೋಗಳು ತುಂಬ ಮೆಚ್ಚುಗೆಗೆ ಪಾತ್ರವಾಗುತ್ತವೆ. ಅದರಲ್ಲೂ ನಮ್ಮ ಸೇನೆ, ಯೋಧರಿಗೆ ಸಂಬಂಧಪಟ್ಟ ಯಾವುದೇ ವಿಡಿಯೋಗಳು ವೈರಲ್ ಆಗಲಿ, ಅದಕ್ಕಿರುವ ತೂಕವೇ ಬೇರೆ. ಅನೇಕಾನೇಕ ಜನರು ಅದನ್ನು ಮೆಚ್ಚಿಕೊಂಡು ಲೈಕ್ ಮಾಡುತ್ತಾರೆ. ರೀ ಪೋಸ್ಟ್ ಮಾಡಿಕೊಳ್ಳುತ್ತಾರೆ. ಒಳ್ಳೆಯ ಕಮೆಂಟ್ಗಳನ್ನೂ ಹಾಕುತ್ತಾರೆ. ಹಾಗೇ, ಈಗ ಗಡಿ ಭದ್ರತಾ ಪಡೆ (BSF) ತನ್ನ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋ ವಿಪರೀತ ವೈರಲ್ ಆಗುತ್ತಿದೆ. ಸಂಪೂರ್ಣವಾಗಿ ಹಿಮಾಚ್ಛಾದಿತವಾದ ಪ್ರದೇಶದಲ್ಲಿ ಯೋಧನೊಬ್ಬ ಪುಶ್ ಅಪ್ಸ್ ತೆಗೆದ ವಿಡಿಯೋ ಇದು. ಈ ಯೋಧ 40 ಸೆಕೆಂಡ್ಗಳಲ್ಲಿ 47 ಪುಶ್ ಅಪ್ಸ್ ತೆಗೆದಿದ್ದಾಗಿ ಬಿಎಸ್ಎಫ್ ಕ್ಯಾಪ್ಷನ್ನಲ್ಲಿ ತಿಳಿಸಿದೆ.
ಎಲ್ಲೆಲ್ಲೂ ಬೆಳ್ಳಗಿನ ಹಿಮ. ಅಂಥ ಚಳಿಯಲ್ಲಿ ಈ ಯೋಧ ಒಂದು ಮರದ ಬುಡದಲ್ಲಿ ಪುಶ್ ಅಪ್ಸ್ ತೆಗೆಯುವುದು ಸುಲಭವಲ್ಲ. ಹಾಗಿದ್ದಾಗ್ಯೂ ಕೂಡ ಕೇವಲ 40 ಸೆಕೆಂಡ್ಗಳಲ್ಲಿ 47 ಪುಶ್ ಅಪ್ಸ್ ತೆಗೆದಿದ್ದಾರೆ. ಅಷ್ಟು ಪ್ರಮಾಣದ ಹಿಮದಲ್ಲಿ ಪುಶ್ ಅಪ್ಸ್ ಮಾಡಿದ್ದು ಒಂದು ಸಾಧನೆಯಾಗಿದ್ದರೆ, 40 ಸೆಕೆಂಡ್ಗಳಲ್ಲಿ 47 ಪುಶ್ ಅಪ್ಸ್ ತೆಗೆದಿದ್ದು ಇನ್ನೊಂದು ದಾಖಲೆ. ಈ ವಿಡಿಯೋಕ್ಕೆ ಫಿಟ್ ಇಂಡಿಯಾ ಚಾಲೆಂಜ್ ಎಂದು ಹೆಸರು ಕೊಟ್ಟಿರುವ ಬಿಎಸ್ಎಫ್, ನೀವೂ ಪುಶ್ ಅಪ್ಸ್ ತೆಗೆಯಿರಿ ಎಂದು ಹೇಳಿದೆ. ಈ ವಿಡಿಯೋ 28 ಸಾವಿರಕ್ಕೂ ಅಧಿಕ ಬಾರಿ ವೀಕ್ಷಿಸಲ್ಪಟ್ಟಿದೆ. ಅಂಥ ಚಳಿಯಲ್ಲಿ ಯೋಧ ಪುಶ್ ಅಪ್ಸ್ ತೆಗೆಯುವುದನ್ನು ನೋಡಿದ ಜನರು ತುಂಬ ಹೆಮ್ಮೆಯಿಂದ ಕಮೆಂಟ್ ಮಾಡಿದ್ದಾರೆ. ನಮ್ಮ ಯೋಧರ ಬಗ್ಗೆ ಹೆಮ್ಮೆಯಾಗಲು ಇಂಥ ಅನೇಕ ಕಾರಣಗಳು ಸಿಗುತ್ತವೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರೆ, ನಿಮ್ಮ ಶಕ್ತಿ, ಆತ್ಮಸ್ಥೈರ್ಯಕ್ಕೆ ಸೆಲ್ಯೂಟ್ ಎಂದು ಇನ್ನೊಬ್ಬರು ಹೇಳಿದ್ದಾರೆ.
40 seconds. 47 push ups. Bring it ON.#FitIndiaChallenge@FitIndiaOff@IndiaSports @@PIBHomeAffairs pic.twitter.com/dXWDxGh3K6
— BSF (@BSF_India) January 22, 2022
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಎಸ್ಎಫ್ ಇನ್ನೊಬ್ಬ ಯೋಧ ಹಿಮದಲ್ಲಿ ಒಂದೇ ಕೈಯಲ್ಲಿ ಪುಶ್ ಅಪ್ಸ್ ಮಾಡಿದ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗೇ, ರಕ್ಷಣಾ ಇಲಾಖೆ ಉಧಾಂಪುರ ಪಿಆರ್ಒ ಎಂಬ ಟ್ವಿಟರ್ ಖಾತೆ ವಾಯುಪಡೆಯ ಏರ್ಮಾರ್ಷಲ್ಗಳ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು, ಗಣರಾಜ್ಯೋತ್ಸವ ಪರೇಡ್ಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದೆ.
One Handed Push Ups. How many can YOU? Bring it ON.#FitIndiaChallenge@FitIndiaOff@IndiaSports@PIBHomeAffairs https://t.co/HxadaZ3CcH pic.twitter.com/pcRwl2kTks
— BSF (@BSF_India) January 23, 2022
ಇದನ್ನೂ ಓದಿ: ಪ್ರತಿದಿನ ಹಸಿ ಬಾಳೆಹಣ್ಣು ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು; ಇಲ್ಲಿದೆ ಮಾಹಿತಿ
Published On - 12:38 pm, Mon, 24 January 22