ಹವಾ ಸೃಷ್ಟಿಸಲು ಲಾಂಗ್ ಬೀಸಿ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಅಪ್​ಲೋಡ್: ಇಬ್ಬರು ಅರೆಸ್ಟ್

| Updated By: Rakesh Nayak Manchi

Updated on: Aug 19, 2023 | 8:42 PM

ಯುವಕನೊಬ್ಬನಿಗೆ ಲಾಂಗ್​ನಲ್ಲಿ ಹಲ್ಲೆ ನಡೆಸುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿ ಹವಾ ಸೃಷ್ಟಿಸಲು ಮುಂದಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಅಣ್ಣನನ್ನ ಬಾಸ್ ಅನ್ನಬೇಕು ಎಂದು ಅಮಾಯ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದನು.

ಹವಾ ಸೃಷ್ಟಿಸಲು ಲಾಂಗ್ ಬೀಸಿ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಅಪ್​ಲೋಡ್: ಇಬ್ಬರು ಅರೆಸ್ಟ್
ಅಮಾಯಕನ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಿ ಬಂಧಿತರಾಗಿರುವ ಅಭಿಷೇಕ್ ಮತ್ತು ದರ್ಶನ್
Follow us on

ಬೆಂಗಳೂರು, ಆ.19: ತನ್ನನ್ನು ಬಾಸ್ ಅಂತ ಕರಿಯಬೇಕು ಎಂದು ಅಮಾಯ ಯುವಕನ್ನು ರೂಮ್​ನಲ್ಲಿ ಕೂಡಿ ಹಾಕಿ ಲಾಂಗ್​ನಿಂದ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಬೆಂಗಳೂರು (Bengaluru) ನಗರದ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.

ಹವಾ ಸೃಷ್ಟಿಸಲು ಮತ್ತು ಅಭಿಷೇಕ್​ನನ್ನು ಬಾಸ್ ಅಂತ ಕರೆಯಬೇಕು ಎಂದು ಹೇಳಿ ಯುವಕನೊಬ್ಬನನ್ನ ರೂಮ್ ಒಳಗೆ ಕೂಡಿ ಹಾಕಿ ಲಾಂಗ್ ಅನ್ನು ಉಲ್ಟಾ ಹಿಡಿದು ಹಲ್ಲೆ ನಡೆಸಿದ್ದರು. ಇದರ ವಿಡಿಯೋ ಕೂಡ ಮಾಡಿದ ಆರೋಪಿಗಳನ್ನು ಅದನ್ನು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆ ಜಗಳ, ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ: ನೆಟ್ಟಿಗರಿಗೆ ಭರವಸೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ

ಸದ್ಯ ಬ್ಯಾಡರಹಳ್ಳಿ ಠಾಣಾ ಪೊಲೀಸರು ವಿಡಿಯೋ ಆಧರಿಸಿ ಆರೋಪಿಗಳಾದ ಅಭಿಷೇಕ್ ಮತ್ತು ದರ್ಶನ್ ಎಂಬವರನ್ನು ಬಂಧಿಸಿದ್ದರು. ಜೊತೆಗೆ, ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ಪುಡಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ತಮ್ಮ ಏರಿಯಾಗಳಲ್ಲಿ ಹವಾ ಸೃಷ್ಟಿಸಲು ಲಾಂಗ್​ಗಳನ್ನು ಬೀಸುತ್ತಿದ್ದಾರೆ. ಕೆಲವರು ಸಾರ್ವಜನಿಕ ಪ್ರದೇಶಗಳಲ್ಲಿ ಮಚ್ಚು ಬೀಸಿ ಜನರನ್ನು ಭಯಗೊಳಿಸುವ ಪ್ರಕರಣಗಳು ನಡೆದಿವೆ. ಇಂತಹ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Sat, 19 August 23