Ugadi 2023: ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಶಾಕ್​, ಮಾರುಕಟ್ಟೆಯಲ್ಲಿ ಹೆಚ್ಚಿದ ಹೂ, ಹಣ್ಣುಗಳ ಬೆಲೆ

|

Updated on: Mar 22, 2023 | 8:36 AM

KR Market: ಯುಗಾದಿ ಹಬ್ಬದ ಹಿನ್ನೆಲೆ ಕೆ.ಆರ್ ಮಾರುಕ್ಕಟ್ಟೆ ಜನಜಂಗುಳಿಯಿಂದ ಕೂಡಿದ್ದು, ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದೆ.

Ugadi 2023: ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಶಾಕ್​, ಮಾರುಕಟ್ಟೆಯಲ್ಲಿ ಹೆಚ್ಚಿದ ಹೂ, ಹಣ್ಣುಗಳ ಬೆಲೆ
ಕೆ ಆರ್ ಮಾರುಕಟ್ಟೆ
Follow us on

ಬೆಂಗಳೂರು: ಇಂದು (ಮಾ.22) ನಾಡಿನಾದ್ಯಂತ ಯುಗಾದಿ (Ugadi) ಹಬ್ಬ ಮನೆ ಮಾಡಿದೆ. ಎಲ್ಲೆಲ್ಲೂ ತಳಿರು, ತೋರಣಗಳಿಂದ ಮನೆಗಳು ಶೃಂಗಾರಗೊಂಡಿವೆ. ಇನ್ನು ಹಬ್ಬಕ್ಕೆಂದು ಹೂ (Flower), ಹಣ್ಣಗಳನ್ನು (Fruits) ಖರೀದಿಸಲು ಮಾರುಕಟ್ಟೆಗೆ ಹೋದರೆ ಶಾಕ್​​ ಕಾದಿದೆ. ಹಬ್ಬದ ಹಿನ್ನೆಲೆ ಸಾಮಾನ್ಯ ದಿನಕ್ಕಿಂತ ಇಂದು ಹೂ, ಹಣ್ಣು​​ ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಹಬ್ಬದ ಸಾಮಾಗ್ರಿಗಳನ್ನು ಕೊಳ್ಳಲು ನಗರವಾಸಿಗಳು ಕೆ. ಆರ್​ ಮಾರ್ಕೆಟ್​ನತ್ತ (KR Market) ಜನರು ಹೊರಟಿದ್ದು, ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಇದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್​​ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಕೆ. ಆರ್​ ಮಾರುಕಟ್ಟೆಯ ಹೂ, ಹಣ್ಣು ತರಕಾರಿಗಳ ಬೆಲೆ

ಹೂವು ಬೆಲೆ (ರೂ.)
ಒಂದು ಮಾರು ಮಲ್ಲಿಗೆ 150
ಒಂದು ಮಾರು ಸೇವಂತಿಗೆ 150
ಕೆಜಿ ಸುಗಂದ ರಾಜ 170
ಗುಲಾಬಿ 240
ಕನಕಾಂಬರ ಮಾರು 150
ತುಳುಸಿ ಒಂದು ಕಟ್ಟು 80
ಚೆಂಡೂ ಹೂ (ಕೆಜಿ) 80
ರುದ್ರಾಕ್ಷಿ ಹೂ (ಕೆಜಿ) 100
ಕಮಲ ಹೂ ಹಾರ 600
ಕಾಕಡ ಮಾರು 150
ಪನ್ಮೀರ್ ರೋಸ್ (ಕೆಜಿ) 220

ಹಣ್ಣುಗಳ ಬೆಲೆ

ಹಣ್ಣು (ಕೆಜಿ) ಬೆಲೆ (ರೂ)
ಸೇಬು 60
ಕಿತ್ತಳೆ ಹಣ್ಣು 80
ದಾಳಿಂಬೆ 160
ಸಪೋಟ 60
ಸೀಡ್ ಲೆಸ್ ದ್ರಾಕ್ಷಿ 80
ಬಾಳೆಹಣ್ಣು 70
ದ್ರಾಕ್ಷಿ 60
ಮಾವಿನ ಹಣ್ಣು 70
ಮೂಸಂಬಿ 80
ಕಲ್ಲಂಗಡಿ 20
ಮಾವಿನ ಎಳೆ (ಕಟ್ಟಿಗೆ) 20

ತರಕಾರಿಗಳ ಬೆಲೆ

ತರಕಾರಿ (ಕೆಜಿ) ಬೆಲೆ (ರೂ)
ಬೀನ್ಸ್​ 100
ಗಜ್ಜರಿ 60
ಬೆಂಡೆಕಾಯಿ 60
ಮೂಲಂಗಿ 30
ಟೊಮೆಟೊ 25
ಬದನೆಕಾಯಿ 40
ಕ್ಯಾಪ್ಸಿಕಮ್​ 60
ಬೀಟ್ರೂಟ್​ 40
ನುಗ್ಗೇಕಾಯಿ 50
ಈರುಳ್ಳಿ 20
ಆಲೂಗಡ್ಡೆ 15
ಟೊಮ್ಯಾಟೊ 25
ಮೆಣಸಿಕಾಯಿ 80
ಬಟಾಣಿ 50

ನಗರದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಬೆಳಿಗ್ಗೆಯಿಂದ ವಿಶೇಷ ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ನಗರದ ಸರ್ಕಲ್ ಮಾರಮ್ಮ ದೇವಸ್ಥಾನ, ಆ್ಯಕ್ಸಿಡೆಂಟ್ ಗಣೇಶ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರುತ್ತಿವೆ. ದೇವರ ದರ್ಶನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 am, Wed, 22 March 23