ಬೆಂಗಳೂರು: ಮಹಿಳೆ​ಗೆ ಅಸಭ್ಯವಾಗಿ ಮೆಸೇಜ್​​​​ ಕಳಿಸಿದ ಆರೋಪ; ಪೊಲೀಸ್​ ಇನ್ಸ್​​ಪೆಕ್ಟರ್ ಅಮಾನತು

ಮಹಿಳೆ​ಗೆ ಅಸಭ್ಯವಾಗಿ ಮೆಸೇಜ್​​​​ ಕಳಿಸಿದ ಆರೋಪದ ಮೇಲೆ ಕೊಡಿಗೇಹಳ್ಳಿ ಠಾಣೆ ಇನ್ಸ್​​ಪೆಕ್ಟರ್ ರಾಜಣ್ಣ​ ಅವರನ್ನ ಅಮಾನತು ಮಾಡಿ ಇಲಾಖಾ ತನಿಖೆಗೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಆದೇಶಿಸಿದ್ದಾರೆ.​​

ಬೆಂಗಳೂರು: ಮಹಿಳೆ​ಗೆ ಅಸಭ್ಯವಾಗಿ ಮೆಸೇಜ್​​​​ ಕಳಿಸಿದ ಆರೋಪ; ಪೊಲೀಸ್​ ಇನ್ಸ್​​ಪೆಕ್ಟರ್ ಅಮಾನತು
ಇನ್ಸ್​​ಪೆಕ್ಟರ್ ರಾಜಣ್ಣ​
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 22, 2023 | 9:01 AM

ಬೆಂಗಳೂರು: ಮಹಿಳೆ​ಗೆ ಅಸಭ್ಯವಾಗಿ ಮೆಸೇಜ್​​​​ ಕಳಿಸಿದ ಆರೋಪ ಮೇಲೆ ಕೊಡಿಗೇಹಳ್ಳಿ ಠಾಣೆ ಇನ್ಸ್​​ಪೆಕ್ಟರ್ ರಾಜಣ್ಣ​ ಅವರನ್ನ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಯನ್ನ ಪಡೆದು ಆಕೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದು, ಜೊತೆಗೆ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡು ರೂಂ ಗೆ ಬರಲು ಹೇಳಿದ್ದಾನಂತೆ. ಈ ಬಗ್ಗೆ ಸಾಕ್ಷಿ ಸಮೇತ ಡಿಸಿಪಿ ಲಕ್ಷ್ಮೀ ಪ್ರಸಾದ್​​ಗೆ ಮಹಿಳೆ ದೂರು ನೀಡಿದ್ದಾಳೆ. ಮಹಿಳೆ ದೂರಿನ ಮೇರೆಗೆ ಪ್ರಾಥಮಿಕ ತನಿಖೆಗೆ ಡಿಸಿಪಿ ಆದೇಶಿಸಿದ್ದರು. ಬಳಿಕ ಠಾಣೆಯ ಸಿಸಿಟಿವಿ ಪಡೆದು ತನಿಖೆ ನಡೆಸಿದ ಯಲಹಂಕ ಎಸಿಪಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ರಾಜಣ್ಣನನ್ನ ಸಸ್ಪೆಂಡ್ ಮಾಡಲಾಗಿದೆ.

ಮೊಬೈಲ್ ದೋಚುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ಒಂಟಿಯಾಗಿ ಹೋಗುತ್ತಿದ್ದವರ ಬಳಿ ಮೊಬೈಲ್ ದೋಚುತ್ತಿದ್ದ ಮೂವರು ಆರೋಪಿಗಳನ್ನ ಇದೀಗ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಐಫೋನ್‌ ಕದಿಯುವ ಗ್ಯಾಂಗ್ ಬೀಡು ಬಿಟ್ಟಿದ್ದು, ಫೋನ್ ಕಳ್ಳತನ ಪ್ರಕರಣಗಳು ನಗರದಲ್ಲಿ ಸರ್ವೇಸಾಮಾನ್ಯವಾಗಿದೆ. ಇನ್ನು ಪೊಲೀಸರ ತನಿಖೆ ವೇಳೆ ಈ ನಟೋರಿಯಸ್ ಗ್ಯಾಂಗ್ ಕೇವಲ ಐಫೋನ್​ಗಳನ್ನ ಮಾತ್ರ ಕದಿಯುತ್ತಿದ್ದರಂತೆ ಎಂಬುದು ಗೊತ್ತಾಗಿದೆ. ಇನ್ನು ಸಾಮಾನ್ಯವಾಗಿ ಐಫೋನ್‌ ಕಳ್ಳತನ ಮಾಡಿದ್ರು ಸುಲಭವಾಗಿ ಆ್ಯಫಲ್ ಐಡಿ ಇದ್ರೆ ಫೋನ್ ಪತ್ತೆ ಮಾಡಬಹುದು ಅನ್ಕೋಂಡಿದ್ದೀರಾ. ಸಾಧ್ಯವೇ ಇಲ್ಲ, ಹೌದು ಇವರ ಕೈಗೆ ಐಫೋನ್‌ ಸಿಕ್ಕಿದ್ರೆ ಮತ್ತೆ ಸಿಗೋದಿಲ್ಲ.

ಇದನ್ನೂ ಓದಿ:Mumbai: ಸಿಗ್ನಲ್ ಜಂಪ್ ಮಾಡಿದ್ರು ಎಂದು ತಡೆದಿದ್ದಕ್ಕೆ, ಟ್ರಾಫಿಕ್ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಯುವಕರು

ಹಾಗಾದ್ರೆ ಇವರು ಫೋನ್​ನ್ನ ಇವರು ಏನ್​ ಮಾಡುತ್ತಾರೆ ಗೊತ್ತಾ?

ಬೆಂಗಳೂರಿನಲ್ಲಿ ಫೋನ್ ಕದ್ದು ಹೈದರಾಬಾದ್​ಗೆ ರವಾನೆ ಮಾಡುತ್ತಾರೆ. ಹೈದರಾಬಾದ್ನಲ್ಲಿ ಐಫೋನ್‌ ಬಿಡಿಭಾಗಗಳನ್ನ ತೆಗೆದು ಮದರ್ ಬೋರ್ಡ್ ಸೆಫರೇಟ್ ಮಾಡುತ್ತಾರೆ. ಫೋನ್​ನಲ್ಲಿ ಮದರ್ ಬೋರ್ಡ್ ತೆಗೆದ ನಂತರ ಲೋಕೇಷನ್ ಆಗಲಿ ಐಡಿ ಆಗಲಿ ಏನು ಪತ್ತೆಯಾಗಲ್ಲ. ನಂತರ ಬಿಡಿಭಾಗಗಳನ್ನ ಬೇರೆಡೆ ಮಾರಾಟ ಅಥವಾ ಬೇರೆ ಫೋನ್​ಗಳಿಗೆ ಅಳವಡಿಕೆ ಮಾಡುತ್ತಾರೆ ಈ ಖದೀಮರು.

ನಗರದಲ್ಲಿ ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್​ ಮಾಡುತ್ತಿದ್ದ ಗ್ಯಾಂಗ್​

ಹೀಗೆ ನಗರದಲ್ಲಿ ಐಫೋನ್‌ ಬಳಸುವ ಜನರನ್ನೆ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್. ರಾತ್ರಿ ವೇಳೆ ಊಟ ಮುಗಿಸಿ ವಾಕ್ ಹೋಗುವವರನ್ನ ಪಾಲೋ ಮಾಡಿ ಐಫೋನ್‌ ಬಳಸುತ್ತಾರೆ ಅಂದರೆ ಮಾತ್ರ ಪ್ಲಾನ್ ಮಾಡಿ ಲಕ್ಷ ಲಕ್ಷ ಬೆಲೆಬಾಳುವ ಐಫೋನ್‌ ಕಸಿದು ಪರಾರಿಯಾಗುತ್ತಿದ್ದರು. ಕೇವಲ ಐಫೋನ್​ಗಳನ್ನ ಕದ್ದು ಕೊರಿಯರ್​ ಮೂಲಕ ಹೈದರಾಬಾದ್​ಗೆ ಕಳಿಸುತ್ತಿದ್ದ ಆರೋಪಿಗಳು. ಆರೋಪಿಗಳ ಖತರ್ನಾಕ್ ಪ್ಲಾನ್ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Wed, 22 March 23