ಬೆಂಗಳೂರಿನಲ್ಲಿ ನಿಲ್ಲದ ರೌಡಿಗಳ ಪುಂಡಾಟ: ಬಿಎಂಟಿಸಿ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 07, 2024 | 11:51 AM

ಕುಮಾರಸ್ವಾಮಿ ಲೇಔಟ್​ನ(Kumaraswamy Layout) ಬಿಎಂಟಿಸಿ E ಬಸ್ ನಿಲ್ದಾಣದಲ್ಲಿ ಏಪ್ರಿಲ್‌ 4ರ ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ. ಕುಡಿದ  ಮತ್ತಿನಲ್ಲಿದ್ದ ಕಿಡಿಗೇಡಿಗಳಿಗೆ ರಾತ್ರಿ ಬಸ್ ಸ್ಟ್ಯಾಂಡ್​ನಲ್ಲಿ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಬಿಎಂಟಿಸಿ(BMTC) ಚಾಲಕ ಹಾಗೂ ನಿರ್ವಾಹಕರ ಮೇಲೆ‌ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. 

ಬೆಂಗಳೂರಿನಲ್ಲಿ ನಿಲ್ಲದ ರೌಡಿಗಳ ಪುಂಡಾಟ: ಬಿಎಂಟಿಸಿ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ
ಬಿಎಂಟಿಸಿ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ
Follow us on

ಬೆಂಗಳೂರು, ಏ.07: ಬಿಎಂಟಿಸಿ(BMTC) ಚಾಲಕ ಹಾಗೂ ನಿರ್ವಾಹಕರ ಮೇಲೆ‌ ಪುಡಿರೌಡಿಗಳು ಲಾಂಗ್ ಬೀಸಿದ ಘಟನೆ ಕುಮಾರಸ್ವಾಮಿ ಲೇಔಟ್​ನ(Kumaraswamy Layout) ಬಿಎಂಟಿಸಿ E ಬಸ್ ನಿಲ್ದಾಣದಲ್ಲಿ ಏಪ್ರಿಲ್‌ 4ರ ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ. ಕುಡಿದ  ಮತ್ತಿನಲ್ಲಿದ್ದ ಕಿಡಿಗೇಡಿಗಳಿಗೆ ರಾತ್ರಿ ಬಸ್ ಸ್ಟ್ಯಾಂಡ್​ನಲ್ಲಿ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ.  ಇದರಿಂದ ಚಾಲಕ ನಾಗೇಂದ್ರ ಎಂಬುವವರಿಗೆ ತಲೆ, ಕಣ್ಣಿನ ಕೆಳಭಾಗ ಹಾಗೂ ಎಡಕೈಗೆ ಗಾಯವಾಗಿದೆ. ಇನ್ನು ಮಚ್ಚು ಬಿಸುತ್ತಾ ಒಡಿಸಿಕೊಂಡು ಬರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ದೂರಿನಲ್ಲಿ ಏನಿದೆ?

ಸುಮಾರು 30 ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕನಾಗಿರುವ ನಾಗೇಂದ್ರ, ಅವರು ಏ.4ರಂದು ಮಾರ್ಗ ಸಂಖ್ಯೆ 15E/2ರಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ 15 ಇ ಬಸ್‌ ನಿಲ್ದಾಣದಲ್ಲಿ ಅಂದಿನ ಕರ್ತವ್ಯ ಮುಗಿಸಿ ಮಲಗಿದ್ದ ಕಂಡೆಕ್ಟರ್ ಹಾಗೂ ಡ್ರೈವರ್, ಬಸ್ ನಿಲ್ದಾಣಕ್ಕೆ ಬಂದ 4 ಜನ ಅಪರಿಚಿತರು ನಿಲ್ದಾಣದಲ್ಲಿ ಜೋರಾಗಿ ಕೂಗಾಡುತ್ತಿದ್ದರು. ಆ ವೇಳೆ ನಾನು ಬಸ್‌ನಲ್ಲಿಯೇ ಕುಳಿತುಕೊಂಡು ಅವರಿಗೆ ಇಲ್ಲಿ ಕೂಗಾಡಬೇಡಿ ಎಂದಿದ್ದೆ. ಆಗ ಅವರಲ್ಲಿ ಒಬ್ಬ ನಾವು ಏನಾದರೂ ಮಾಡುತ್ತೇವೆ ನಿನಗೆ ಯಾಕಲೇ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.

ಇದನ್ನೂ ಓದಿ:KSRTC ಬಸ್​ ಅಡ್ಡಗಟ್ಟಿ, ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿ

ಆಗ ಬಸ್‌ನಿಂದ ಕೆಳಗಡೆ ಇಳಿದು ಯಾಕಪ್ಪ ಆ ರೀತಿ ಬೈಯುತ್ತೀಯಾ ಎಂದು ಚಾಲಕ ಕೇಳಿದ್ದು, ಆವಾಗ ಚಾಲಕನ‌ ಮೇಲೆ ಕೈಗಳಿಂದ ಮುಖಕ್ಕೆ ಹಾಗೂ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ಆತನ ಪಕ್ಕದಲ್ಲಿದ್ದ ಇನ್ನೊಬ್ಬನಿಂದ ಚಾಲಕನ ತಲೆಗೆ ಮಚ್ಚಿನಿಂದ ದಾಳಿ ನಡೆಸಿದ್ದು, ಮತ್ತೆ ಮಚ್ಚಿನಿಂದ ಹೊಡೆಯಲು ಬಂದಾಗ, ಚಾಲಕ ಹಾಗೂ ನಿರ್ವಾಹಕ ಅಲ್ಲಿಂದ ಓಡಿ‌ ಹೋಗಿದ್ದಾರೆ.
ಬಳಿಕ‌ ಕಂಡಕ್ಟರ್ ಸಹಾಯದಿಂದ ವಾಸವಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಚಾಲಕ ದೂರು ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ