AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಸ್ತಿ ಕೆಲಸ ನೀಡಿದ್ದಕ್ಕೆ ಸಹೋದ್ಯೋಗಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ: ಐವರ ಬಂಧನ

ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರ ಮೇಲೆ ನಡುರಸ್ತೆಯಲ್ಲಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಐವರು ಬಂಧಿತರ ಪೈಕಿ ಇಬ್ಬರು ಹಲ್ಲೆಗೊಳಗಾದ ವ್ಯಕ್ತಿಯ ಸಹೋದ್ಯೋಗಿಗಳು ಎಂದು ಹೇಳಲಾಗಿದೆ. ಜಾಸ್ತಿ ಕೆಲಸ ಮತ್ತು ಒತ್ತಡ ನೀಡಿದ್ದಕ್ಕೆ ಆಡಿಟರ್ ಮೇಲೆ ಹಲ್ಲೆ ಮಾಡಲು ಸಹೋದ್ಯೋಗಿಗಳು ಗುಂಡಾಗಳಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

ಜಾಸ್ತಿ ಕೆಲಸ ನೀಡಿದ್ದಕ್ಕೆ ಸಹೋದ್ಯೋಗಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ: ಐವರ ಬಂಧನ
ಸಹೋದ್ಯೋಗಿ ಮೇಲೆ ಹಲ್ಲೆ
ಗಂಗಾಧರ​ ಬ. ಸಾಬೋಜಿ
|

Updated on: Apr 06, 2024 | 7:02 PM

Share

ಬೆಂಗಳೂರು, ಏಪ್ರಿಲ್​ 06: ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರ ಮೇಲೆ ನಡುರಸ್ತೆಯಲ್ಲಿ ಹಲ್ಲೆ (Assault) ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಐವರು ಬಂಧಿತರ ಪೈಕಿ ಇಬ್ಬರು ಹಲ್ಲೆಗೊಳಗಾದ ವ್ಯಕ್ತಿಯ ಸಹೋದ್ಯೋಗಿಗಳು ಎಂದು ಹೇಳಲಾಗಿದೆ. ಮಾರ್ಚ್ 31 ರಂದು ಹೊರ ವರ್ತುಲ ರಸ್ತೆಯ ಕಲ್ಯಾಣ್ ನಗರದ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್​ ಮೂಲಗಳ ಪ್ರಕಾರ, ಜಾಸ್ತಿ ಕೆಲಸ ಮತ್ತು ಒತ್ತಡ ನೀಡಿದ್ದಕ್ಕೆ ಆಡಿಟರ್ ಮೇಲೆ ಹಲ್ಲೆ ಮಾಡಲು ಸಹೋದ್ಯೋಗಿಗಳು ಗುಂಡಾಗಳಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

ಉಮಾಶಂಕರ್, ವಿನೇಶ್, ಸಂದೀಪ್ ಮತ್ತು ಇತರೆ ಇಬ್ಬರ ಬಂಧಿತರು. ಹೆರಿಟೇಜ್ ಮಿಲ್ಕ್ ಪ್ರಾಡಕ್ಟ್ ಕಂಪನಿಯಲ್ಲಿ ಆಡಿಟರ್​ ಆಗಿರುವ ಸುರೇಶ್​ ಹಲ್ಲೆಗೊಳಗಾದ ವ್ಯಕ್ತಿ. ಈ ಘಟನೆಯ ವಿಡಿಯೋ ಕಾರೊಂದರಲ್ಲಿ ಅಳವಡಿಸಲಾಗಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ಓಡಾಡುವ ರಸ್ತೆಯಲ್ಲೆ ದುಷ್ಕರ್ಮಿಗಳ ಗುಂಪೊಂದು ಸುರೇಶ್​ನನ್ನು ಕಬ್ಬಿಣದ ರಾಡ್‌ನಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯ ವಿಡಿಯೋ 

ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಹಲವು ಬಳಕೆದಾರರು ತಮ್ಮ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡುವ ಮೂಲಕ ಘಟನೆಯನ್ನು ಬೆಂಗಳೂರು ನಗರ ಪೊಲೀಸರ ಗಮನಕ್ಕೆ ತರಲಾಗಿದೆ. ತಕ್ಷಣ ಹೆಣ್ಣೂರು ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಏಪ್ರಿಲ್ 5 ರಂದು ಐವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಅವಳಿ ಕೊಲೆ ಕೇಸ್​ನಲ್ಲಿ ಮೃತಪಟ್ಟಿದ್ದ ಮಹಿಳೆ ಪತಿ ಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ಹಲ್ಲೆಗೊಳಗಾದ ಸುರೇಶ್ ಹೆರಿಟೇಜ್ ಮಿಲ್ಕ್ ಪ್ರಾಡಕ್ಟ್ ಕಂಪನಿಯಲ್ಲಿ ಆಡಿಟರ್ ಆಗಿದ್ದಾರೆ. ಉಮಾಶಂಕರ್ ಮತ್ತು ವಿನೇಶ್ ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಹೆಚ್ಚಿನ ಕೆಲಸ ಮತ್ತು ತ್ವರಿತವಾಗಿ ಕೆಲಸ ಮುಗಿಸುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದರಿಂದ ಹತಾಶರಾದ ಇಬ್ಬರು ಸಹೋದ್ಯೋಗಿಗಳು  ಸುರೇಶ್ ಮೇಲೆ ಹಲ್ಲೆ ನಡೆಸಲು ಗುಂಡಾಗಳಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.