ಬೆಂಗಳೂರು, ಮೇ 24: ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ಶಾಕ್ ಕಾದಿದೆ. ಮಳೆಗಾಲ ಆರಂಭವಾಗುತ್ತೆ, ಸಾಯಂಕಾಲ ಜಿಟಿಜಿಟಿ ಮಳೆ-ಚಳಿಯಲ್ಲಿ ಒಂದು ಪೆಗ್ ಏರಸತಾ ಕೂರಬೇಕು ಅಂದುಕೊಂಡಿರುವ ಮದ್ಯಪ್ರಿಯರು ಈ ಸುದ್ದಿಯನ್ನೊಮ್ಮೆ ಓದಿ ಬಿಡಿ. ಜೂನ್ ಮೊದಲ ವಾರ ನೀವು ಮದ್ಯದ ಮಳಿಗೆಗಳ (Alcohol Shop) ಬಳಿ ಹೋದರೆ ನಿರಾಸೆಯಿಂದ ವಾಪಸ್ ಆಗಬೇಕಾಗುತ್ತದೆ. ಏಕೆಂದರೆ ವಿಧಾನ ಪರಿಷತ್ ಚುನಾವಣೆ (Vidhan Parishad Election) ಮತ್ತು ಲೋಕಸಭೆ ಚುನಾವಣೆ (Lok Sabha Election) ಮತ ಎಣಿಕೆ ಇರುವುದರಿಂದ ಜೂನ್ 1 ರಿಂದ 6ರ ವರೆಗೆ ಮದ್ಯದ (Alcohol) ಮಾರಾಟವನ್ನು ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜೂನ್ 1 ರಿಂದ 6ರವರೆಗೆ (ಜೂನ್ 5 ಹೊರತುಪಡಿಸಿ) ಬೆಂಗಳೂರಿನ ಎಲ್ಲ ಎಣ್ಣೆ ಅಂಗಡಿಗಳು ಸಂಪೂರ್ಣವಾಗಿ ಬಂದ್ ಇರಲಿವೆ. ಜೂನ್ 3 ರಂದು ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಾಯಂಕಾಲ 4 ಗಂಟೆಯಿಂದ ಜೂನ್ 3ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಮದ್ಯದ ದರ ಏರಿಕೆ ಸಾಧ್ಯತೆ
ಇನ್ನು ಜೂನ್ 4 ರಂದು ದೇಶಾದ್ಯಂತ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವುದರಿಂದ ಅಂದು ಸಹ ಸಂಪೂರ್ಣವಾಗಿ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಬಂದ್ ಇರಲಿವೆ. ಜೂನ್ 5 ರಂದು ಯಥಾಪ್ರಕಾರ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಮತ್ತೆ ಜೂನ್ 6 ರಂದು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಇರುವುದರಿಂದ ಅಂದು ಸಹ ಎಲ್ಲ ತರಹದ ಎಣ್ಣೆ ಅಂಗಡಿಗಳು ಬಂದ್ ಆಗಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Fri, 24 May 24